ಸ್ಪೋಟ, ಭೂಕಂಪಕ್ಕೂ ಜಗ್ಗದ ಕಟ್ಟಡ ಬೆಂಗಳೂರಿನಲ್ಲಿ!

aadhaar
ಬೆಂಗಳೂರು, ಜು.2 : ಉತ್ತರಾಖಂಡ ಪ್ರವಾಹದಲ್ಲಿ ಕಟ್ಟಡಗಳು ತೇಲಿ ಹೋಗುವುದನ್ನು ನೀವು ನೋಡಿದ್ದೀರಿ. ಭೂಕಂಪ ಸಂಭವಿಸಿದಾಗ ಕಟ್ಟಡಗಳು ಬೀಳುವುದನ್ನು ನೋಡಿದ್ದೀರಿ. ಆದರೆ, ಬೆಂಗಳೂರಿನಲ್ಲಿ ಬಾಂಬ್‌ ಸ್ಪೋಟ, ಭೂಕಂಪ ಸಂಭವಿಸಿದರೂ ಗಟ್ಟಿಯಾಗಿ ನಿಲ್ಲಬಲ್ಲ ಕಟ್ಟಡ ನಿರ್ಮಾಣವಾಗುತ್ತಿದೆ.

ಹೌದು, 2014ರ ವೇಳೆಗೆ ಸ್ಫೋಟ ನಿರೋಧಕ ಕಟ್ಟಡ ಬೆಂಗಳೂರಿನಲ್ಲಿ ನಿರ್ಮಾಣಗೊಂಡು, ಉದ್ಘಾಟನೆಯಾಗಲಿದೆ. ಈ ಕಟ್ಟಡ ಬಾಂಬ್‌ ದಾಳಿ, ಪ್ರವಾಹ, ಭೂಕಂಪಕ್ಕೂ ಅಲುಗಾಡದೇ ಭದ್ರವಾಗಿ ನಿಲ್ಲಬಲ್ಲದು. ಭೂಕಂಪ ಸಂಭವಿಸಿದರೂ ಕಟ್ಟದಲ್ಲಿರುವ ಯಾವ ಕಚೇರಿಗಳಿಗೂ ಹಾನಿ ಆಗುವುದಿಲ್ಲ.

ಆಧುನಿಕ ತಂತ್ರಜ್ಞಾನ ಬಳಸಿ ಇಂತಹ ಕಟ್ಟಡ ನಿರ್ಮಾಣ ಮಾಡುತ್ತಿರುವುದು 'ಯೂನಿಕ್‌ ಐಡೆಂಟಿಫಿಕೇಶನ್‌ ಅಥಾರಿಟಿ ಆಫ್‌ ಇಂಡಿಯಾ' ಅಂದರೆ ಆಧಾರ್ ಸಂಖ್ಯೆ ನೀಡುವ ಸಂಸ್ಥೆಗಾಗಿ. ಈ ಕಟ್ಟಡದ ಕಾಮಗಾರಿ ಈಗಾಗಲೇ ಪ್ರಾರಂಭವಾಗಿದ್ದು, ಮುಂದಿನ ವರ್ಷ ಪೂರ್ಣಗೊಳ್ಳಲಿದೆ.

ಇಷ್ಟೊಂದು ಭದ್ರತೆ ಏಕೆ : ಯುಐಎಡಿಐ ಸಂಸ್ಥೆಯ ಕಟ್ಟಡವಿದಾಗಿದ್ದು, ಭಾರತದ ಜನಸಂಖ್ಯಾ ವಿವರ ಮತ್ತು ದೇಶದ ಎಲ್ಲರ ಬಯೋಮೆಟ್ರಿಕ್‌ ವಿವರಗಳನ್ನು ಸಂಗ್ರಹಿಸುವ ಡೇಟಾ ಸೆಂಟರ್ ಈ ಕಟ್ಟಡದಲ್ಲಿ ಇರುತ್ತದೆ. ಆದ್ದರಿಂದ ಆಧುನಿಕ ತಂತ್ರಜ್ಞಾನ ಬಳಸಿ ಕಟ್ಟಡ ನಿರ್ಮಿಸಲಾಗುತ್ತಿದೆ.

ಎಲ್ಲಿದೆ ಈ ಕಟ್ಟಡ : ಈ ಕಟ್ಟಡ ನಿರ್ಮಾಣ ಮಾಡುವ ಕಾಮಗಾರಿಯನ್ನು ಇಂಜಿನಿಯರ್ಸ್‌ ಇಂಡಿಯಾ ಲಿಮಿಟೆಡ್‌ ಪಡೆದುಕೊಂಡಿದೆ. ಟಾಟಾ ನಗರದ ಮುಖ್ಯ ರಸ್ತೆಯಲ್ಲಿರುವ ಶಂಕರ್ ನಗರದ ಸಮೀಪ, 6245 ಚದರ ಅಡಿ ವಿಸ್ತೀರ್ಣದಲ್ಲಿ ಈ ಕಟ್ಟಡ ನಿರ್ಮಾಣವಾಗಲಿದೆ.

ವಿಶೇಷವೇನು : ಈ ಭಾರೀ ಭದ್ರತೆಯ ಕಟ್ಟಡದಲ್ಲಿ 500 ಮಿಲಿ ಮೀಟರ್ ದಪ್ಪನಾದ ಗೋಡೆಗಳು ಇರಲಿವೆ. ಯಾವುದೇ ಸ್ಫೋಟ, ಪ್ರವಾಹ, ಭೂಕಂಪಗಳಿಗೂ ಈ ಕಟ್ಟಡ ಕುಸಿದು ಬೀಳುವುದಿಲ್ಲ. ದೇಶದ ಜನರ ಮಾಹಿತಿ ಹೊಂದಿರುವ ಈ ಕಟ್ಟಡಕ್ಕೆ ಭಾರೀ ಭದ್ರತಾ ವ್ಯವಸ್ಥೆ ಮಾಡಲಾಗುತ್ತದೆ.

2014ರ ಮಾರ್ಚ್‌ ವೇಳೆಗೆ ಈ ಕಟ್ಟಡದ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಕಾಮಗಾರಿ ಮುಗಿದ ತಕ್ಷಣ ಆಧಾರ್ ಕಾರ್ಡ್ ನ ಪ್ರಧಾನ ಕಚೇರಿ ನಮ್ಮ ಬೆಂಗಳೂರಿನಲ್ಲಿರುತ್ತದೆ ಎಂಬುದೇ ನಮಗೆ ಹೆಮ್ಮೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+