ನಿಟಿ ಸೆಂಟ್ರಲ್‌ನಿಂದ ಇಂಟರ್ನೆಟ್ ಸ್ಟ್ರೀಮಿಂಗ್ ಸೇವೆ
ನವದೆಹಲಿ, ಜು. 1 : ದಿನದ 24 ಗಂಟೆ ತಾಜಾ ಸುದ್ದಿ, ಸಮಾಚಾರ, ವಿಶ್ಲೇಷಣೆ, ಮ್ಯೂಸಿಕ್ ಸ್ಟ್ರೀಮಿಂಗ್ ಗಳನ್ನು ನೋಯ್ಡಾದ ಸ್ಟುಡಿಯೋದಿಂದ 24/7 ಬಿತ್ತರಿಸುವಂಥ NWR LIVE! ಇಂಟರ್ನೆಟ್ ಸ್ಟ್ರೀಮಿಂಗ್ ಸೇವೆಯನ್ನು ನಿಟಿ ಸೆಂಟ್ರಲ್ ಸೋಮವಾರ ಬೆಳಿಗ್ಗೆ ಬಿಡುಗಡೆ ಮಾಡಿದೆ. ಇಂಟರ್ನೆಟ್ ಇರುವಂಥ ಎಲ್ಲ ಮೊಬೈಲುಗಳಲ್ಲಿ ಲೈವ್ ರೇಡಿಯೋ ಸೇವೆ ಪಡೆಯಬಹುದು.
ನಿಟಿ ಡಿಜಿಟಲ್ ಸ್ಟುಡಿಯೋಸ್ ನಲ್ಲಿ ಸೋಮವಾರ ಬೆಳಿಗ್ಗೆ 7 ಗಂಟೆಗೆ ನಡೆದ ಬಿಡುಗಡೆ ಸಮಾರಂಭದಲ್ಲಿ ಮಾಧ್ಯಮದವರು, ರಾಜಕಾರಣಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದ್ದರು. ಡಿಜಿಟಲ್ ಮೀಡಿಯಾದಲ್ಲಿ ಎನ್‌ಡಬ್ಲ್ಯೂಆರ್ ಲೈವ್ ಲಾಂಚ್ ಮಾಡಿದ್ದು ಎಷ್ಟು ಮಹತ್ವಪೂರ್ಣವಾದದ್ದು ಎಂದು ನಿಟಿ ಡಿಜಿಟಲ್ ಸಂಸ್ಥಾಪಕ ರಾಜೇಶ್ ಜೈನ್ ಅವರು ಈ ಸಂದರ್ಭದಲ್ಲಿ ವಿವರಿಸಿದರು. ಸಂಪಾದಕೀಯ ನಿರ್ದೇಶಕರಾಗಿರುವ ಕಂಚನ್ ಗುಪ್ತಾ ಅವರು ಅತಿಥಿಗಳನ್ನು ಸ್ವಾಗತಿಸಿದರು.

ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ಹೊಸ ಆಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಈ ಆಪ್ ಅನ್ನು ಇಲ್ಲಿಂದ ಕೂಡ ಡೌನ್ ಲೋಡ್ ಮಾಡಿಕೊಳ್ಳಬಹುದು. ಜೊತೆಗೆ, NWRlive.com ವೆಬ್ ಸೈಟಿಗೆ ಭೇಟಿ ನೀಡಿ ಆಡಿಯೋ ಸ್ಟ್ರೀಮ್ ಕೇಳಬಹುದು. ಮೋಜಿಲ್ಲಾ ಫೈರ್ ಫಾಕ್ಸ್ ಅಥವಾ ಗೂಗಲ್ ಕ್ರೋಮ್ ಬ್ರೌಸರ್ ಮುಖಾಂತರ ಕೇಳಬಹುದಾಗಿದೆ.
ವಿಂಡೋಸ್ ಫೋನ್, ಬ್ಲಾಕ್ ಬೆರ್ರಿ, ಅಮೇಜಾನ್ ಕಿಂಡಲ್ ಬಳಕೆದಾರರು TuneIn Radio apps ಇನ್ ಸ್ಟಾಲ್ ಮಾಡಿಕೊಂಡು NWRlive.com ನೋಡಬಹುದು. ಟ್ಯೂನ್ ಇನ್ ಆಪ್ಸ್ ಟ್ಯಾಬ್ಲೆಟ್, ಮೊಬೈಲ್, ದೂರದರ್ಶನ ಮತ್ತಿತರ ಸಾಧನಗಳಿಗೆ ಲಭ್ಯವಿದೆ.
ಸದ್ಯದಲ್ಲಿಯೇ iOS ಆಪ್ ಲಭ್ಯವಾಗಲಿದ್ದು, ಡೌನ್ ಲೋಡ್ ಮಾಡಿಕೊಳ್ಳಬಹುದು. ನೀವು ಐಪ್ಯಾಡ್ ಅಥವಾ ಐಫೋನ್ ಬಳಸುತ್ತಿದ್ದರೆ, ಟ್ಯೂನ್ ಮಾಡಿಕೊಳ್ಳಬಹುದು. ವೈಯಕ್ತಿಕ ಕಂಪ್ಯೂಟರ್, ಆಂಡ್ರಾಯ್ಡ್, ಬ್ಲಾಕ್ ಬೆರ್ರಿ, ವಿಂಡೋಸ್ ಬಳಕೆದಾರು ಇದನ್ನು ಬಳಸುವುದು ಹೇಗೆ, ಮತ್ತಿತರ ಪ್ರಶ್ನೋತ್ತರಗಳಿಗೆ ಇಲ್ಲಿ ಭೇಟಿ ನೀಡಿರಿ. ನಿಮಗೆ ಎಲ್ಲ ರೀತಿಯ ವಿವರಗಳು ಇಲ್ಲಿ ಲಭ್ಯವಿವೆ.












Click it and Unblock the Notifications