ಡ್ರೈ ಫ್ರೂಟ್ಸ್ ಪ್ರಿಯರೇ, ಈ ಅಂಗಡಿ ಮಿಸ್ ಮಾಡ್ಕೋಬೇಡಿ!

ಅದು ಇಲ್ಲಿನ ಜಗದ್ವಿಖ್ಯಾತ ಡ್ರೈ ಫ್ರೂಟ್ಸ್ ಅಂಗಡಿಗಳು. ಅಂದರೆ ಒಣ ಹಣ್ಣುಗಳು ಅದೇ ಖರ್ಜೂರ, ಬಾದಾಮಿ, ದ್ರಾಕ್ಷಿ, ಗೋಡಂಬಿ, ಪಿಸ್ತಾ ಒಂದಾ- ಎರಡಾ? ಇಲ್ಲಿರುವ ಚಿತ್ರಗಳನ್ನು ನೋಡಿ
ರಸೆಲ್ ಮಾರ್ಕೆಟ್ಟಿನಲ್ಲಿ ತಾಜಾ ತಾಜಾ ಹೂ-ಹಣ್ಣು-ತರಕಾರಿಗಳು ಮತ್ತು ನಾನ್ ವೆಜ್ ಐಟಂಗಳ ತೂಕ ಒಂದು ಕಡೆಯದ್ದಾದರೆ ಈ ಡ್ರೈ ಫ್ರೂಟ್ಸ್ ಅಂಗಡಿಯದ್ದೇ ಮತ್ತೊಂದು ತೂಕ. ಮತ್ತು ಇದು ನಿಜಕ್ಕೂ ಹೆಚ್ಚು ತೂಕದ್ದೇ. ಬೆಲೆಯಲ್ಲೂ ಮತ್ತು ಗುಣಮಟ್ಟದಲ್ಲೂ. ಕಾಸಿಗೆ ತಕ್ಕ ಕಜ್ಜಾ ಅಂತಾರಲ್ಲಾ ಹಾಗೆ. ಹೆಚ್ಚು ಹಣ ಕೊಟ್ಟಷ್ಟೂ ಹೆಚ್ಚುಹೆಚ್ಚು ಗುಣಮಟ್ಟದ ಖಾತ್ರಿ.
ನೀವೇನಾದರೂ ಡ್ರೈ ಫ್ರೂಟ್ಸ್ ಪ್ರಿಯರಾಗಿದ್ದರೆ ದಯವಿಟ್ಟು ಈ ಅಂಗಡಿಯನ್ನು ಮಿಸ್ ಮಾಡ್ಕೋಬೇಡಿ. ಹಣ ಕೊಟ್ಟರೂ ನಿಮ್ಮ ಆರೋಗ್ಯವನ್ನು ಹೆಚ್ಚಿಸುವ/ ಸುಧಾರಿಸುವ ಒಣ ಹಣ್ಣುಗಳು ನಮ್ಮಲ್ಲಿವೆ ಬನ್ನಿ ಎನ್ನುತ್ತಾರೆ ಅಂಗಡಿಯೊಂದರ ಮಾಲೀಕ ಮೊಹಮದ್ ಇದ್ರೇಸ್ ಚೌಧರಿ. ಇದು ಚೌಧರಿಯ ಒಣ ಜಂಭದ ಮಾತಲ್ಲ. ಏಕೆಂದರೆ ದೂರದ ಯಾವಯಾವುದೋ ಭಾಗಗಳಿಂದ ಜನ ಹುಡುಕಿಕೊಂಡು ಇಲ್ಲಿಗೆ ಬರುತ್ತಾರೆ.
ಇಲ್ಲಿಯ ಒಣ ಹಣ್ಣುಗಳನ್ನು ನೋಡಿದರೆ ಬಾಯಲ್ಲಿ ನೀರೂರುತ್ತದೆ. ಕೊಳ್ಳಲಿ/ಬಿಡಲಿ ಅಂಗಡಿಗೆ ಬರುವ ಗ್ರಾಹಕರಿಗೆ ಒಂದೇ ಉತ್ಸಾಹದಿಂದ ತಮ್ಮ ದುಬಾರಿ ಉತ್ಪನ್ನಗಳ ಮಹತ್ವವನ್ನುಸಾದ್ಯಂತವಾಗಿ ವಿವರಿಸುತ್ತಾರೆ ಚೌಧರಿ ಸಾಹೇಬ್. ಮಕ್ಕಳಿಗೆ, ಮಧುಮೇಹಿಗಳಿಗೆ, ವಯಸ್ಸಾದವರಿಗೆ, ತುಂಬು ವಯಸ್ಸಿನಲ್ಲಿ ತುಂಬು ಆರೋಗ್ಯ ತುಂಬಿಕೊಳ್ಳಲು ಇಚ್ಛಿಸುವ ನವರಕ್ತದ ಯುವಜನತೆಗೆ ಹೀಗೆ ಆಯಾ ವಯೋಮಾನಾದವರಿಗೆ ತಕ್ಕಂತೆ ಬೇಕಾಗುವ ಒಣ ಹಣ್ಣುಗಳ ಮಹತ್ವವನ್ನು ಅವರು ವಿವರಿಸುತ್ತಾರೆ.
ದೂರದ ಕೊಲ್ಲಿ ರಾಷ್ಟ್ರಗಳು, ಇರಾಕ್, ಇರಾನ್, ದಕ್ಷಿಣ ಆಫ್ರಿಕಾದ ರಾಷ್ಟ್ರಗಳು ಅಂತಲ್ಲ. ವಿಶ್ವದ ಮೂಲೆ ಮೂಲೆಗಳಿಂದ ಒಣ ಹಣ್ಣುಗಳು ರಸೆಲ್ ಮಾರ್ಕೆಟಿನ ಈ ಅಂಗಡಿಗಳಿಗೆ ಬರುತ್ತವೆ. ಇದನ್ನು ತಿಂದವರೇ ನಿಜಕ್ಕೂ ಭಾಗ್ಯವಂತರು. ಅಷ್ಟರಮಟ್ಟಿಗೆ ರಸೆಲ್ ಮಾರ್ಕೆಟ್ ಒಣ ಹಣ್ಣುಗಳ ಮಹತ್ವವಿದೆ.
ಇದನ್ನೂ ಓದಿ:












Click it and Unblock the Notifications