Get Updates
Get notified of breaking news, exclusive insights, and must-see stories!

ಚಿತ್ರಗಳಲ್ಲಿ: ಈ ಸರೀಸೃಪ, ಎರಡು ತಲೆ ನಾಗರವಲ್ಲ

ಲಂಡನ್, ಜೂ.27:ಥೆಲ್ಮಾ ಹಾಗೂ ಲೂಸಿ ಎಂದು ಕರೆಯಲ್ಪಡುವ ಒಂದೇ ದೇಹ ಎರಡು ತಲೆ ಇರುವ ಟೆಕ್ಸಾಸ್ ನ ಆಮೆ ಇದಾಗಿದೆ. ಸ್ಯಾನ್ ಅಂಟಾನಿಯೋ ಮೃಗಾಲಾಯದಲ್ಲಿರುವ ಈ ವಿಶಿಷ್ಟ ಆಮೆ ಅವರ ಪ್ರಕಾರ ಜೂ.18 ಈ ಆಮೆ ಹುಟ್ಟಿದ ದಿನವಂತೆ.

ಜೂನ್ ತಿಂಗಳಲ್ಲಿ ಇದೇ ರೀತಿಯ ಅನೇಕ ಆಮೆಗಳನ್ನು ಟೆಕ್ಸಾಸ್ ಮೃಗಾಲಯ ಹೊಂದಿದೆಯಂತೆ. ಕಳೆದ ಎರಡು ದಿನಗಳಿಂದ ಈ ಆಮೆ ಫ್ರೆಡಿಕ್ ಆಕ್ವೇರಿಯಂನ ಆಕರ್ಷಣೆಯಾಗಿದೆ.

ಈ ಬಾರಿ ವಿಂಬಲ್ಡನ್ ಯಾಕೋ ಆರಂಭದಲ್ಲೇ ಡಲ್ ಹೊಡೆಯಲು ಶುರು ಮಾಡಿದೆ. ಆವೆಮಣ್ಣಿನ ರಾಜ ರಫೆಲ್ ನಡಾಲ್ ನಿರ್ಗಮನವಾಗಿದ್ದೇ ತಡ, ಹುಲ್ಲು ಹಾಸಿನ ಕಿಂಗ್ ರೋಜರ್ ಫೆಡರರ್, ಮರಿಯಾ ಶರಪೋವಾ ಸೇರಿದಂತೆ ಘಟಾನುಘಟಿಗಳು ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಅಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಪೋರ್ಚು ಗಲ್ ನ ಮಿಚೆಲ್ ಲಾರ್ಚರ್ ಡಿ ಬ್ರಿಟೋ ಅವರ ವಿರುದ್ಧ ರಷ್ಯಾದ ಮರಿಯಾ ಶರಪೋವಾ ಅವರು ಶರಣಾಗಿದ್ದಾರೆ. ಪಂದ್ಯದ ನಡುವೆ ಗಾಯಗೊಂಡು ಮಲಗಿಬಿಟ್ಟ ಶರಪೋವಾ ಕಂಡು ಅಭಿಮಾನಿಗಳು ದುಃಖಿಸಿದರು. ಸ್ವಿಸ್ ವೀರ ರೋಜರ್ ಫೆಡರರ್ ಅವರನ್ನು ಉಕ್ರೇನಿನ ಸರ್ಗೆ ಸ್ಟಖೊವಿಸ್ಕಿ ಅವರು ಅಮೋಘವಾಗಿ ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ.

ಉಳಿದಂತೆ, ಉತ್ತರಾಖಂಡ್ ಸಂತ್ರಸ್ತರ ನೆರವಿಗೆ ಧಾವಿಸಿದ್ದ ಆಂಧ್ರಪ್ರದೇಶದ ಜನಪ್ರತಿನಿಧಿಗಳ ಕಿತ್ತಾಟದ ದೃಶ್ಯ, ಕಾಶ್ಮೀರದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿ ಸುರಂಗದಲ್ಲಿ ಸುತ್ತಾಡಿದ್ದು, ಕಾಮಾಕ್ಯಾ ದೇಗುಲದಲ್ಲಿ ಭಕ್ತರ ಮೇಳ, ಎರಡು ತಲೆ ಆಮೆ, ಜಯಲಲಿತಾ ಅವರಿಂದ ವಿದ್ಯಾರ್ಥಿನಿಯರಿಗೆ ಗಿಫ್ಟ್ ಸೇರಿದಂತೆ ಇನ್ನಷ್ಟು ಚಿತ್ರಗಳು ಇಂದಿನ ಚಿತ್ರಸುರಳಿಯಲ್ಲಿದೆ.ತಪ್ಪದೇ ನೋಡಿ

ಎರಡು ತಲೆ ನಾಗರವಲ್ಲ

ಎರಡು ತಲೆ ನಾಗರವಲ್ಲ

ಥೆಲ್ಮಾ ಹಾಗೂ ಲೂಸಿ ಎಂದು ಕರೆಯಲ್ಪಡುವ ಒಂದೇ ದೇಹ ಎರಡು ತಲೆ ಇರುವ ಟೆಕ್ಸಾಸ್ ನ ಆಮೆ ಇದಾಗಿದೆ.

ವಿಂಬಲ್ಡನ್ ಚಿತ್ರಗಳು

ವಿಂಬಲ್ಡನ್ ಚಿತ್ರಗಳು

ಪೋರ್ಚು ಗಲ್ ನ ಮಿಚೆಲ್ ಲಾರ್ಚರ್ ಡಿ ಬ್ರಿಟೋ ಅವರ ವಿರುದ್ಧ ರಷ್ಯಾದ ಮರಿಯಾ ಶರಪೋವಾ ಅವರು ಶರಣಾಗಿದ್ದಾರೆ. ಪಂದ್ಯದ ನಡುವೆ ಗಾಯಗೊಂಡು ಮಲಗಿಬಿಟ್ಟ ಶರಪೋವಾ

ವಿಂಬಲ್ಡನ್ ಚಿತ್ರ

ವಿಂಬಲ್ಡನ್ ಚಿತ್ರ

ವಿಂಬಲ್ಡನ್ ಟೆನಿಸ್ ಮೊದಲ ಸುತ್ತಿನಲ್ಲಿ ನಡಾಲ್ ನಿರ್ಗಮನ, ಎರಡನೇ ಸುತ್ತಿನಲ್ಲಿ ಸ್ವಿಜರ್ಲೆಂಡ್ ನ ರೋಜರ್ ಫೆಡರರ್ ಅವರು ಉಕ್ರೇನಿನ ಎದುರಾಳಿ ಸ್ಟಖೊವಸ್ಕಿ ವಿರುದ್ಧ ಸೋತ ನಂತರ ಕೈ ಬೀಸಿದ್ದು ಹೀಗೆ

ವಿಂಬಲ್ಡನ್ ಟೆನಿಸ್

ವಿಂಬಲ್ಡನ್ ಟೆನಿಸ್

ಶರಪೋವಾ ಸೋಲಿಸಿದ ನಂತರ ಅಚ್ಚರಿಯ ಲುಕ್ ನೀಡಿದ ಪೋರ್ಚು ಗಲ್ ನ ಮಿಚೆಲ್ ಲಾರ್ಚರ್ ಡಿ ಬ್ರಿಟೋ

ದೈತ್ಯ ಸಂಹಾರಿ

ದೈತ್ಯ ಸಂಹಾರಿ

ಪ್ರಶಸ್ತಿ ಗೆಲ್ಲುವ ಫೇವರೀಟ್ ಎನಿಸಿದ್ದ ರೋಜರ್ ಫೆಡರರ್ ಸೋಲಿಸಿದ ಉಕ್ರೇನಿನ ಸರ್ಗೆ ಸ್ಟಖೊವಸ್ಕಿ

ಇಂಗ್ಲೆಂಡ್ ಕನಸು

ಇಂಗ್ಲೆಂಡ್ ಕನಸು

ಇಂಗ್ಲೆಂಡಿನ ಆಂಡೆ ಮರೆ ಅವರ ವಿಂಬಲ್ಡನ್ ಗೆಲ್ಲುವ ಕನಸು ಮತ್ತೆ ಚಿಗುರೊಡೆದಿದೆ

ಕಾಶ್ಮೀರದಲ್ಲಿ ಸೋನಿಯಾ

ಕಾಶ್ಮೀರದಲ್ಲಿ ಸೋನಿಯಾ

ಕಾಶ್ಮೀರದಲ್ಲಿ ಪಿರ್ ಪಂಜಲ್ ಪರ್ವತ ಶ್ರೇಣಿಯಲ್ಲಿ ಬನಿಹಾಲ್-ಖಾಜಿಗುಂಡ್ ನಡುವೆ ಬುಧವಾರ ಆರಂಭಗೊಂಡ ನೂತನ ರೈಲಿನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಶಾಲಾ ಮಕ್ಕಳೊಂದಿಗೆ ಪ್ರಯಾಣಿಸಿದರು.

18ಕಿ.ಮೀ. ಅಂತರದ ಈ ರೈಲ್ವೆ ಮಾರ್ಗ ಮಧ್ಯೆದಲ್ಲಿ 11ಕಿ.ಮೀ. ಸುರಂಗ ಮಾರ್ಗವನ್ನು ಒಳಗೊಂಡಿದೆ. ಪ್ರಯಾಣದ ಸಮಯದಲ್ಲಿ ಸಿಂಗ್ ಮತ್ತು ಸೋನಿಯಾ ಮಕ್ಕಳೊಂದಿಗೆ ಸಂವಾದ ನಡೆಸಿದರು. 8 ಕೋಚ್ ಹೊಂದಿರುವ ನೂತನ ರೈಲಿನಲ್ಲಿ ಶಾಲಾ ಮಕ್ಕಳು, ಗಣ್ಯರೊಂದಿಗೆ ತಮ್ಮ ಪ್ರಥಮ ರೈಲ್ವೆ ಸಂಚಾರದ ಅನುಭವ ಪಡೆದರು.
ಅಮ್ಮ ನೀಡಿದ ಕೊಡುಗೆ

ಅಮ್ಮ ನೀಡಿದ ಕೊಡುಗೆ

ಇದು ಅಮ್ಮ ನೀಡಿದ ಕೊಡುಗೆ. ಸಿಎಂ ಜಯಲಲಿತಾ ಅವರೊಂದಿಗೆ ಫಲಾನುಭವಿ ವಿದ್ಯಾರ್ಥಿನಿಯರೊಂದಿಗೆ

ಕಾಮಾಕ್ಯ ಉತ್ಸವ

ಕಾಮಾಕ್ಯ ಉತ್ಸವ

ಗುವಾಹಟಿ: ಕಾಮಾಕ್ಯ ದೇಗುಲ ಮತ್ತೆ ಭಕ್ತರಿಗೆ ತೆರೆದಿದೆ. ಅಂಬುಬಚಿ ಮೇಳದ ದೃಶ್ಯ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+