ಭಾರತದ ರಾಜಕಾರಣಿಗಳು ಚಿನ್ನದಂಥವರು ಕಣ್ರೀ!

ನವದೆಹಲಿ, ಜೂನ್ 26: ಏನ್ ಗುರಾಯಿಸ್ತಿದ್ದೀರಿ? ಯಾವೋನಪ್ಪಾ ನಮ್ಮ ಘನಂಧಾರಿ ರಾಜಕಾರಣಿಗಳನ್ನು ಚಿನ್ನದಂಥವರು ಅಂದಿದ್ದು ಎಂದು ಕೇಳ್ತಿದ್ದೀರಾ? ಸ್ವಲ್ಪ ಇರಿ. ಅವರು ಚಿನ್ನದಂಥವರು ಅಲ್ಲ ಅವರೇ ಚಿನ್ನ. ಏಕೆಂದರೆ ಬಹುತೇಕ ರಾಜಕಾರಣಿಗಳ ಬಳಿ ಚಿನ್ನದ ಕೊಪ್ಪರಿಗೆಗಳೇ ಇವೆ. ಅದಕ್ಕೆ ಹೇಳಿದ್ದು...

'ಭಾರತ ಮಾತೆಯರೇ ದಯವಿಟ್ಟು ಚಿನ್ನ ಕೊಳ್ಳಬೇಡಿ- ಸರಕಾರ ಆರ್ಥಿಕ ಸಂಕಷ್ಟದಲ್ಲಿದೆ' ಎಂದು ಹಣಕಾಸು ಸಚಿವ ಪಿ ಚಿದಂಬರಂ ಅವರೇ ಅಸಹಾಯಕರಾಗಿ ಅಲವತ್ತುಕೊಂಡಿದ್ದರು.

'ಅಷ್ಟೇ ಅಲ್ಲಾರೀ. ಚಿನ್ನ ಕಷ್ಟ ಕಾಲದಲ್ಲಿ ಚಿನ್ನ ಕೈಹಿಡಿಯುತ್ತದೆ ಎಂಬುದೆಲ್ಲಾ ನಿಮ್ಮ ಭ್ರಮೆ' ಎಂದೆಲ್ಲಾ ಬುದ್ಧಿವಾದ ಹೇಳಿದ್ದರು ಸಾಹೇಬರು. ಆದರೆ ಖುದ್ದು ಚಿದಂಬರಂ ಸೇರಿದಂತೆ ಪ್ರಮುಖ ನಾಯಕರ ಮನೆಗಳಲ್ಲಿರುವ ಚಿನ್ನದ ಬೆಟ್ಟಗಳು ಕಣ್ಣಿಗೆ ಕುಕ್ಕುತ್ತವೆ ಕಣ್ರೀ. ಬನ್ನಿ ಒಂದು ರೌಂಡ್ ನೋಡಿಕೊಂಡಿಕೊಂಡು ಬರೋಣ... ಆ ಪುಟ್ಟ ಬೆಟ್ಟಗಳನ್ನು.

ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ ಕುಸಿತ

ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ ಕುಸಿತ

ತಾಜಾ ಸುದ್ದಿ: ಇಂದು ಬುಧವಾರ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿದುಬಿದ್ದಿದೆ. ಇಂದು ಬೆಳಗ್ಗೆ 10 ಗ್ರಾಂ ಚಿನ್ನಕ್ಕೆ 23,750 ರೂ. ಧಾರಣೆಯಿತ್ತು.

ಚಿದಂಬರಂ

ಚಿದಂಬರಂ

ಚಿದಂಬರಂ ಅವರ ಪತ್ನಿ ಬಳಿ ನಳಿನಿ ಬಳಿ 2012 ರ ಮಾರ್ಚ್ ವೇಳೆಗೆ 11 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿತ್ತು. ಇದು ಬಿಡಿ ಪುಟ್ಟ ಗುಡ್ಡ. ಆದರೆ ಚಿದಂಬರಂ ಅವರ ಸಹೋದ್ಯೋಗಿಗಳೂ ಸೇರಿದಂತೆ ಪ್ರಮುಖ ರಾಜಕಾರಣಿಗಳ ಬಳಿ ಎಷ್ಟು ಚಿನ್ನವಿದೆ ಗೊತ್ತಾ?

ಶರದ್ ಪವಾರ್:

ಶರದ್ ಪವಾರ್:

ಕೃಷಿ ಸಚಿವ ಮತ್ತು ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರ ಬಳಿ ಮಾರ್ಚ್ 2012ರಲ್ಲಿ ಘೋಷಿಸಿದಂತೆ 1420 ಗ್ರಾಂ ಚಿನ್ನಾಭರಣವಿದೆಯಂತೆ. ಅದರ ಮಾರುಕಟ್ಟೆ ಮೌಲ್ಯ 36.23 ಲಕ್ಷ ರೂ.

ಎಂಕೆ ಅಳಗಿರಿ

ಎಂಕೆ ಅಳಗಿರಿ

ಮಾಜಿ ಕೇಂದ್ರ ಸಚಿವ ಅಳಗಿರಿ ಬಳಿ ಮಾರ್ಚ್ 2012ರಲ್ಲಿ ಘೋಷಿಸಿದಂತೆ 3728 ಗ್ರಾಂ ಚಿನ್ನವಿದೆಯಂತೆ. ಅದರ ಮಾರುಕಟ್ಟೆ ಮೌಲ್ಯ 95 ಲಕ್ಷ ರೂ.

ಶರದ್ ಯಾದವ್:

ಶರದ್ ಯಾದವ್:

JDU ಅಧ್ಯಕ್ಷ ಶರದ್ ಯಾದವ್ ಬಳಿ ಮಾರ್ಚ್ 2009ರಲ್ಲಿ ಘೋಷಿಸಿದಂತೆ 2050 ಗ್ರಾಂ ಚಿನ್ನವಿದೆಯಂತೆ. ಅದರ ಮಾರುಕಟ್ಟೆ ಮೌಲ್ಯ 52.27 ಲಕ್ಷ ರೂ.

ಮುಲಾಯಂ ಸಿಂಗ್ ಯಾದವ್

ಮುಲಾಯಂ ಸಿಂಗ್ ಯಾದವ್

SP ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರ ಬಳಿ 2009ರಲ್ಲಿ ಘೋಷಿಸಿದಂತೆ 77.257 ಲಕ್ಷ ರೂ. ಮೌಲ್ಯದ ಚಿನ್ನವಿದೆಯಂತೆ.

ನಿತಿನ್ ಗಡ್ಕರಿ

ನಿತಿನ್ ಗಡ್ಕರಿ

BJP ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಬಳಿ ಮಾರ್ಚ್ 2008ರಲ್ಲಿ ಘೋಷಿಸಿದಂತೆ 1996 ಗ್ರಾಂ ಚಿನ್ನವಿದೆಯಂತೆ. ಅದರ ಮಾರುಕಟ್ಟೆ ಮೌಲ್ಯ 50 ಲಕ್ಷ ರೂ.

ಮಾಯಾವತಿ

ಮಾಯಾವತಿ

BSP ಅಧ್ಯಕ್ಷೆ ಮಾಯಾವತಿ ಅವರ ಬಳಿ ಮಾರ್ಚ್ 2012ರಲ್ಲಿ ಘೋಷಿಸಿದಂತೆ 1034 ಗ್ರಾಂ ಚಿನ್ನವಿದೆಯಂತೆ. ಅದರ ಮಾರುಕಟ್ಟೆ ಮೌಲ್ಯ 21 ಲಕ್ಷ ರೂ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+