ಕ್ಲಿಷ್ಟಕರ ರೈಲ್ವೇ ಖಾತೆಯನ್ನು ನಿಭಾಯಿಸಿದ ಕನ್ನಡಿಗರು
ಭಾರತ ಸರ್ಕಾರದ ಅಧೀನದ ರೈಲ್ವೇ ಇಲಾಖೆ ದೇಶದ ಅತಿ ಪ್ರಮುಖ ಸಂಪರ್ಕ ಜಾಲಗಳಲ್ಲೊಂದು. ದೇಶದ ಉದ್ದಗಲಕ್ಕೂ ಹರಡಿದ ರೈಲು ಮಾರ್ಗಗಳ ನಿರ್ವಹಣೆಯ ಜವಾಬ್ದಾರಿ ಈ ಇಲಾಖೆಯದ್ದು,
ಪ್ರತಿ ದಿನ ಸುಮಾರು ಒಂದು ಕೋಟಿ ಐವತ್ತು ಲಕ್ಷ ಪ್ರಯಾಣಿಕರನ್ನು ಮತ್ತು ಒಂದು ಕೋಟಿ ಟನ್ನಿಗೂ ಹೆಚ್ಚು ಸರಕನ್ನು ಸಾಗಾಟ ಮಾಡುವ ಭಾರತೀಯ ರೈಲ್ವೆ ಪ್ರಪಂಚದ ಅತಿ ದೊಡ್ಡ ರೈಲು ಜಾಲಗಳಲ್ಲಿ ಒಂದು. ಇದಲ್ಲದೇ ಭಾರತೀಯ ರೈಲ್ವೇಯಲ್ಲಿ ಹದಿನಾರು ಲಕ್ಷ ಜನ ನೌಕರರಿದ್ದು, ಇದು ಕೂಡಾ ದಾಖಲೆಯೇ. ಭಾರತೀಯ ರೈಲ್ವೆಯು ಭಾರತದಾದ್ಯಂತ ಸುಮಾರು 65 ಸಾವಿರ ಕಿ.ಮೀಗಳಷ್ಟು ಉದ್ದಕ್ಕೆ ಚಾಚಿಕೊಂಡಿದೆ ಎಂದು ಅಂದಾಜಿಸಲಾಗಿದೆ.
ವಿಶ್ವದ ಅತಿದೊಡ್ಡ ರೈಲ್ವೆ ಜಾಲಗಳಲ್ಲಿ ಭಾರತೀಯ ರೈಲ್ವೆ ಕೂಡಾ ಒಂದು, ಇದು 1948ರಲ್ಲಿ ಅಸ್ತಿತ್ವಕ್ಕೆ ಬಂತು. ಆಡಳಿತಾತ್ಮಕ ದೃಷ್ಟಿಯಿಂದ ಇಲಾಖೆಯನ್ನು ಒಟ್ಟು ಹದಿನಾರು ವಿಭಾಗಗಳನ್ನಾಗಿ ಮಾಡಲಾಗಿದೆ. ಅರುಣಾಚಲ ಪ್ರದೇಶ ಮತ್ತು ಮೇಘಾಲಯ ರಾಜ್ಯವನ್ನು ಹೊರತು ಪಡಿಸಿ ದೇಶದ ಎಲ್ಲಾ ರಾಜ್ಯಗಳಲ್ಲಿ, ಕೇಂದ್ರಾಡಳಿತ ಪ್ರದೇಶದಲ್ಲಿ ರೈಲ್ವೆ ಹಳಿಗಳು ಹಬ್ಬಿವೆ.
ಕೇಂದ್ರ ರೈಲ್ವೆ ಸಚಿವರು ಕ್ಯಾಬಿನೆಟ್ ದರ್ಜೆ ಸಚಿವರಾಗಿದ್ದರೆ ಇಬ್ಬರು ರಾಜ್ಯ ರಾಜ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸುತ್ತಾರೆ. ಅಧ್ಯಕ್ಷರು ಮತ್ತು ಆರು ಸದಸ್ಯರಿರುವ ರೈಲ್ವೆ ಮಂಡಳಿ ಸಂಪೂರ್ಣ ರೈಲ್ವೆ ಆಡಳಿತವನ್ನು ನಿರ್ವಹಿಸುತ್ತದೆ.
ಕೇಂದ್ರ ರೈಲ್ವೆ ಸಚಿವರಾಗಿ ಸೋಮವಾರ (ಜೂ 17) ಪ್ರಮಾಣ ಸ್ವೀಕರಿಸಿದ ಮಲ್ಲಿಕಾರ್ಜುನ ಖರ್ಗೆ ದೇಶದ 38ನೇ ಕೇಂದ್ರ ರೈಲ್ವೆ ಸಚಿವ. ಈ ಹಿಂದೆ ರೈಲ್ವೆ ಸಚಿವರಾಗಿದ್ದ ರಾಜ್ಯದ ನಾಯಕರುಗಳ ಪಟ್ಟಿ..

ಎಚ್ ಸಿ ದಾಸಪ್ಪ
ಕ್ಷೇತ್ರ : ಬೆಂಗಳೂರು ಸಿಟಿ
ಅವಧಿ : 21.09.1963 - 08.06.1964

ಸಿ ಎಂ ಪೂಣಚ್ಚ
ಕ್ಷೇತ್ರ : ಮಂಗಳೂರು
ಅವಧಿ : 13.03.1967 - 14.02.1969

ಕೆಂಗಲ್ ಹನುಮಂತಯ್ಯ
ಕ್ಷೇತ್ರ : ಬೆಂಗಳೂರು ಸಿಟಿ
ಅವಧಿ : 18.03.1971 - 22.07.1972

ತೋನ್ಸೆ ಅನಂತ ಪೈ
ಕ್ಷೇತ್ರ : ಉಡುಪಿ
ಅವಧಿ : 23.07.1972 - 04.02.1973
30.07.1979 - 13.01.1980

ಸಿ ಕೆ ಜಾಫರ್ ಶರೀಫ್
ಕ್ಷೇತ್ರ : ಬೆಂಗಳೂರು ಉತ್ತರ
ಅವಧಿ : 21.06.1991 - 16.10.1995

ಮಲ್ಲಿಕಾರ್ಜುನ ಖರ್ಗೆ
ಕ್ಷೇತ್ರ : ಗುಲ್ಬರ್ಗಾ
ಅವಧಿ : 17.06.2013 -












Click it and Unblock the Notifications