ಬೆಂಗಳೂರಿಗೆ ಬಂದಿದ್ದಾರಂತೆ ಇಬ್ಬರು ಉಗ್ರರು

terrorists
ಬೆಂಗಳೂರು, ಜೂ.16 : ಮಹಾನಗರಿ ಬೆಂಗಳೂರು ಮತ್ತೊಮ್ಮೆ ಬೆಚ್ಚಿಬೀಳುವಂತಹ ವರದಿಯೊಂದು ಕೇಂದ್ರ ಗೃಹ ಇಲಾಖೆಯಿಂದ ರವಾನೆಯಾಗಿದೆ. ಶನಿವಾರ ರಾತ್ರಿ ಇಬ್ಬರು ಉಗ್ರರು ಬೆಂಗಳೂರು ನಗರಕ್ಕೆ ಆಗಮಿಸಿದ್ದಾರೆ. ಪಂಚತಾರಾ ಹೋಟೆಲ್ ಗಳೇ ಉಗ್ರರ ಟಾರ್ಗೆಟ್ ಎಂದು ಕೇಂದ್ರ ಮಾಹಿತಿ ರವಾನಿಸಿದೆ.

ಕೇಂದ್ರ ಗೃಹ ಇಲಾಖೆಯ ಮಾಹಿತಿ ಅನ್ವಯ ನಗರದಲ್ಲಿ ಹೆಚ್ಚಿನ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಪ್ರಮುಖ ಪಂಚತಾರಾ ಹೋಟೆಲ್ ಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪೊಲೀಸರು ಉಗ್ರರಿಗಾಗಿ ವ್ಯಾಪಕ ಶೋಧ ಆರಂಭಿಸಿದ್ದಾರೆ.

ಮಾಹಿತಿ ಹೇಳುವುದೇನು : ನ್ಯಾನೋ ಕಾರಿನಲ್ಲಿ ಇಬ್ಬರು ಉಗ್ರರು ಶನಿವಾರ ರಾತ್ರಿ 9 ಗಂಟೆಗೆ ಸುಮಾರಿಗೆ ಬೆಂಗಳೂರಿಗೆ ಆಗಮಿಸಿದ್ದಾರೆ. ನಗರದ ಪ್ರಮುಖ ಪಂಚತಾರಾ ಹೋಟೆಲ್ ಗಳೇ ಉಗ್ರರ ಟಾರ್ಗೆಟ್ ಆಗಿವೆ. ಕಾರಿನ ನೋಂದಣಿ ಸಂಖ್ಯೆಯನ್ನು ಸಹ ಕೇಂದ್ರ ವರದಿಯಲ್ಲಿ ನೀಡಿದೆ.

ಕೇಂದ್ರದ ವರದಿಯಿಂದಾಗಿ ತಕ್ಷಣ ಎಚ್ಚೆತ್ತುಕೊಂಡಿರುವ ನಗರ ಪೊಲೀಸರು, ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಭದ್ರತೆ ಬಿಗಿಗೊಳಿಸಿದ್ದಾರೆ. ನಗರದ ಪ್ರಮುಖ ಪಂಚತಾರಾ ಹೋಟೆಲ್ ಗಳಿಗೆ ತೆರಳಿ ಅಲ್ಲಿನ ಭದ್ರತೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಆತಂಕವಿಲ್ಲ ಜಾರ್ಜ್ : ಗುಪ್ತಚರ ಇಲಾಖೆ ಮುಖ್ಯಮಂತ್ರಿಗಳ ವ್ಯಾಪ್ತಿಗೆ ಬರುವುದರಿಂದ ಅಲ್ಲಿನ ಪೊಲೀಸರಿಗೆ ಮಾಹಿತಿ ಬಂದಿರಬಹುದು. ಸರ್ಕಾರ ಉಗ್ರರ ಚಟುವಟಿಕೆಗಳನ್ನು ನಿಯಂತ್ರಿಸಲು ಸಿದ್ಧವಿದೆ. ಜನರು ಭಯಪಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಮಲ್ಲೇಶ್ವರಂ ಬಿಜೆಪಿ ಕಚೇರಿ ಬಳಿಯ ಬಾಂಬ್ ಸ್ಪೋಟದ ತನಿಖೆ ನಡೆಯುತ್ತಿರುವಾಗಲೇ ಉಗ್ರರು ನಗರಕ್ಕೆ ಕಾಲಿಟ್ಟಿದ್ದಾರೆ ಎಂಬ ಮಾಹಿತಿ ನಿಜಕ್ಕೂ ಆತಂಕಕಾರಿಯಾಗಿದೆ. ಬೆಂಗಳೂರು ಉಗ್ರರ ಟಾರ್ಗೆಟ್ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.(ಮಲ್ಲೇಶ್ವರಂ ಸ್ಪೋಟ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+