ಐಬಿಎಂನಿಂದ 8000+ ಜನ ಔಟ್?

ಉತ್ತರ ಅಮೆರಿಕದಲ್ಲಿ ಉದ್ಯೋಗ ಕಡಿತದ ನಂತರ ಮುಂದಿನ ಟಾರ್ಗೆಟ್ ಭಾರತದ ವಿವಿಧ ಕೇಂದ್ರಗಳ ಮೇಲೆ ಎಂಬ ಮಾಹಿತಿ ಹೊರ ಬಿದ್ದಿದೆ.
ಮೊದಲ ತ್ರೈಮಾಸಿಕ ಫಲಿತಾಂಶ ಸ್ವಲ್ಪ ಡಲ್ ಹೊಡೆದಾಗಲೇ ಪಿಂಕ್ ಸ್ಲಿಪ್ ನೀಡುವ ಕಾರ್ಯಕ್ರಮದ ಬಗ್ಗೆ ಸುಳಿವು ಸಿಕ್ಕಿತ್ತು. ಜಾಗತಿಕ ಉದ್ಯೋಗ ಕಡಿತದಿಂದ ಸುಮಾರು 1 ಬಿಲಿಯನ್ ಡಾಲರ್ ಹಣ ವ್ಯವಹಾರ ಸಾಧ್ಯತೆಯಿದೆ ಎಂದು ಸಿಎಫ್ ಒ ಮಾರ್ಕ್ ಲೋರಿಡ್ಜ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
2012ರ ಕೊನೆ ವೇಳೆಗೆ 434,246 ಉದ್ಯೋಗಿಗಳನ್ನು ಇಂಟರ್ ನ್ಯಾಷನಲ್ ಬಿಸಿನೆಸ್ ಮೆಷಿನ್ಸ್(IBM) ಹೊಂದಿತ್ತು. ಅಮೆರಿಕ ಹಾಗೂ ಕೆನಡಾದಲ್ಲಿ 2200 ಉದ್ಯೋಗ ಕಡಿತ ಸಂಭವವಿದೆ ಎನ್ನಲಾಗಿತ್ತು. ಆದರೆ, ಈಗಾಗಲೇ 2800 ಪ್ಲಸ್ ಜನಕ್ಕೆ ಪಿಂಕ್ ಸ್ಲಿಪ್ ನೀಡಲಾಗಿದೆ.
ಒಟ್ಟಾರೆ ಜಾಗತಿಕವಾಗಿ ಸುಮಾರು 6,500 ರಿಂದ 8,000 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲು ಐಬಿಎಂ ಮುಂದಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಆದರೆ, ಐಬಿಎಂನ ನಿವ್ವಳ ಉದ್ಯೋಗಿಗಳ ಸಂಖ್ಯೆಯ ಶೇ 2 ರಷ್ಟು ಮಾತ್ರ ಉದ್ಯೋಗ ಕಡಿತಗೊಳಿಸಲಾಗುತ್ತಿದೆ ಎಂಬ ಸುದ್ದಿಯೂ ಇದೆ.
ಬಿಗ್ ಡಾಟಾ, ಕ್ಲೌಡ್ ಕಂಪ್ಯೂಟಿಂಗ್, ಸೋಷಿಯಲ್ ಬಿಸಿನೆಸ್, ಮೊಬೈಲ್ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಭಾರಿ ಹೂಡಿಕೆ ಮಾಡಲು ಐಬಿಎಂ ಮುಂದಾಗಿರುವ ಸುದ್ದಿ ಸಿಕ್ಕಿದೆ. (ಪಿಟಿಐ)












Click it and Unblock the Notifications