ಶನಿ ಮಹಾತ್ಮೆ: ನರೇಂದ್ರಮೋದಿಗೆ ಪ್ರಧಾನಿಪಟ್ಟ ಗ್ಯಾರಂಟಿ

narendra-modi-shani-stars-predict-high-position-in-2014
ಬೆಂಗಳೂರು, ಜೂನ್ 12: ಪ್ರಚಾರ ಸಮಿತಿ ಚುಕ್ಕಾಣಿ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಸುಪರ್ದಿಗೆ ಬರುತ್ತಿದ್ದಂತೆ ಅವರಿಗೆ ಶನಿದೆಸೆ (ಶುಕ್ರದೆಸೆ) ಉತ್ತಮವಾಗಿದೆ ಎನ್ನುತ್ತಿದ್ದಾರೆ ಜ್ಯೋತಿಷಿಗಳು.

ಉಜ್ಜಯಿನಿಯ ಪಂಡಿತ್ ಮನೀಶ್ ಶರ್ಮಾ ಎಂಬ ಜ್ಯೋತಿಷಿಯು ಮೋದಿಗೆ ಸದ್ಯದಲ್ಲೇ ಉನ್ನತ ಸ್ಥಾನ ಪ್ರಾಪ್ತಿಯಾಗಲಿದೆ ಎಂದು ಈ ಹಿಂದೆಯೇ ಹೇಳಿದ್ದರು. ಅದರಂತೆ ಪ್ರಚಾರ ಸಮಿತಿ ಸಾರಥ್ಯ ಅವರಿಗೆ ದಕ್ಕಿದೆ.

ಹಾಗಾದರೆ ಮುಂದಿನ ದಿನಗಳಲ್ಲಿ ಮೋದಿ ಭವಿಷ್ಯ ಹೇಗಿರುತ್ತದೆ. ಅವರ ಗ್ರಹಗತಿಗಳು ಏನು ಎಂಬುದು ಇಲ್ಲಿದೆ. ಪಂಡಿತ್ ಮನೀಶ್ ಶರ್ಮಾ ಹೇಳುವಂತೆ 1950ರ ಸೆಪ್ಟೆಂಬರ್ 17ರಂದು ಮೆಹಸಾನಾದಲ್ಲಿ ಜನಿಸಿದ ನರೇಂದ್ರ ದಾಮೋದರದಾಸ್ ಮೋದಿ ಭವಿಷ್ಯ ಹೀಗಿದೆ.

ಮೋದಿಯ ಗುರು ರಾಶಿಯಲ್ಲಿ ರಾಹು ಮತ್ತು ಶನಿ ಇದ್ದಾರೆ. ಗ್ರಹಗತಿ ಹೀಗಿದ್ದರೆ ಅವರು ಉನ್ನತಿ ಸಾಧಿಸುತ್ತಾರೆ. ಮೋದಿ ಅವರ ಕುಂಡಲಿಯಲ್ಲಿ 2010ರ ಮಾರ್ಚ 7ರಿಂದ ಸೂರ್ಯ ಮಹಾದೆಸೆ ಇದೆ. ಇದರಿಂದ ಅವರಿಗೆ ಗೌರವ ಮತ್ತ ಯಶಸ್ಸು ಸಿಗುತ್ತಿದೆ.

ಮೋದಿಯ ರಾಶಿಫಲ ವಿರೋಧಿಗಳಿಗೆ ಕಂಟಕ:
ಮೋದಿ ಕುಂಡಲಿಯಲ್ಲಿ ಬುದ್ಧಾದಿತ್ಯ ಯೋಗವೂ ಇದೆ. ಇದು 2014ರ ಅವಧಿಯುದ್ದಕ್ಕೂ ಇರುತ್ತದೆ. ಅವರ ರಾಶಿ ಫಲದ ಪ್ರಕಾರ ಪ್ರಕಾರ 2014ರಲ್ಲಿ ಮೋದಿ ಅತ್ಯುನ್ನತ ಸ್ಥಾನಕ್ಕೇರುತ್ತಾರೆ. ಒಂದೇ ರಾಶಿಯಲ್ಲಿ ಶುಕ್ರ, ಶನಿ ಮತ್ತು ಸೂರ್ಯ ಕಾಣಿಸಿಕೊಂಡಿರುವುದರಿಂದ ಮೋದಿ ವಿರೋಧಿಗಳಿಗೆ ಅಪಜಯ ಖಂಡಿತ.

ಮೋದಿ ಪ್ರಭಾವಳಿ 2014ಕ್ಕಷ್ಟೇ ಸೀಮಿತವಾಗುವುದಿಲ್ಲ. ಆ ನಂತರವೂ ಮೋದಿಗೆ ಶುಭದಿನಗಳೇ. 2011ರ ನವೆಂಬರ್ ತಿಂಗಳಿಂದ ಮೋದಿ ಕುಂಡಲಿಯಲ್ಲಿ ಸಾಡೇಸಾತಿ ವಕ್ಕರಿಸಿಲ್ಲ. ಇದರಿಂದ ಅವರಿಗೆ ಯಶಸ್ಸಿನ ಮೇಲೆ ಯಶಸ್ಸು ಲಭಿಸುತ್ತದೆ. ಚಂದ್ರ ಸ್ವಲ್ಪ ಮಟ್ಟಿಗೆ ವಕ್ರವಾಗಿದ್ದರೂ ಅದು ಮಂಗಳದೊಂದಿಗೆ ಬೆರೆತಿರುವುದರಿಂದ ಅದರ ಪ್ರಭಾವ ಅಷ್ಟಾಗಿ ಗೋಚರವಾಗುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+