ಕಾಮೆಡ್ ಕೆ ಪರೀಕ್ಷೆ 2013 ಫಲಿತಾಂಶ ಪ್ರಕಟ

Consortium of Medical Engineering and Dental Colleges of Karnataka (COMEDK) ತನ್ನ ಅಧಿಕೃತ ವೆಬ್ ತಾಣದಲ್ಲಿ ಫಲಿತಾಂಶವನ್ನು ಪ್ರಕಟಿಸಿದೆ. ಇಂಜಿನಿಯರಿಂಗ್, ಮೆಡಿಕಲ್ ಹಾಗೂ ಡೆಂಟಲ್ ಕೋರ್ಸುಗಳ ಶ್ರೇಯಾಂಕ ಪಟ್ಟಿ ಇಂತಿದೆ:
ಇಂಜಿನಿಯರಿಂಗ್:
* ಅಭಿಜಿತ್ ಶೆಣೈ ಪ್ರಥಮ : 160 ಅಂಕಗಳು
* ಸುಚೇತ್ ಕುಂಚಂ, ದ್ವಿತೀಯ : 158 ಅಂಕಗಳು
* ಪ್ರತೀಕ್ ಎಂ ಸದಾರೆ ತೃತೀಯ ಶ್ರೇಯಾಂಕ : 155 ಅಂಕಗಳನ್ನು ಪಡೆದಿದ್ದಾರೆ.
ಮೆಡಿಕಲ್:
* ಪ್ರಥಮ : ನೀಲಿ ದೇವಿ ಕೃಷ್ಣ ಶಶಿಧರ್, 159 ಅಂಕಗಳು
* ದ್ವಿತೀಯ: ಹೇಮಂತ್ ಅಮರದೀಪ್ ಸಂತೂರ್, 159 ಅಂಕಗಳು
* ತೃತೀಯ : ಹರಿಣಿ ಶೇಷಾದ್ರಿ, 154 ಅಂಕಗಳು
ಕಳೆದ ಮೇ 12 ರಂದು ಕಾಮೆಡ್ ಕೆ ಪರೀಕ್ಷೆಗಳನ್ನು ನಡೆಸಲಾಗಿತ್ತು. ಸುಮಾರು 88,706 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಮೆಡಿಕಲ್ ಕೋರ್ಸುಗಳಿಗೆ 16,995 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಇಂಜಿನಿಯರಿಂಗ್ ಕೋರ್ಸಿಗೆ 41,684 ಅಭ್ಯರ್ಥಿಗಳು ಅರ್ಹತೆ ಗಳಿಸಿದ್ದಾರೆ.
ಕಾಮೆಡ್ ಕೆ ಸೀಟು ಕೌನ್ಸಲಿಂಗ್ ಜು.2 ರಿಂದ ನಡೆಯಲಿದೆ. ಈ ವರ್ಷದಿಂದ ಕಾಮೆಡ್ ಕೆ ಬರೆದಿರುವ ಅಭ್ಯರ್ಥಿಗಳು ಭೌತ ಶಾಸ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ ಪತ್ರಿಕೆ ಜೊತೆಗೆ ಇಂಗ್ಲೀಷ್ ವಿಷಯದಲ್ಲಿ ಶೇ 50 ರಷ್ಟು ಅಂಕಗಳಿಸುವುದು ಕಡ್ಡಾಯಗೊಳಿಸಲಾಗಿದೆ. ಶೇ 50ಕ್ಕಿಂತ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಕೌನ್ಸಲಿಂಗ್ ಗೆ ಪರಿಗಣಿಸಲಾಗುವುದಿಲ್ಲ.
ಇಂಗ್ಲೀಷ್ ವಿಷಯದಲ್ಲಿ ಕನಿಷ್ಠ ಶೇಕಡಾವಾರು ಕಟ್ ಆಫ್ ಸಾಮಾನ್ಯ ವರ್ಗಕ್ಕೆ ಶೇ 50 ರಷ್ಟಿದ್ದರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ಶೇ 40 ರಷ್ಟು ಅಂಕ ಬಂದಿದ್ದರೆ ಸಾಕು.
ಕರ್ನಾಟಕದ ಒಟ್ಟು 12 ಮೆಡಿಕಲ್, 25 ಡೆಂಟಲ್ ಹಾಗೂ 157 ಇಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪಡೆಯಲು ಕೌನ್ಸಿಲಿಂಗ್ ನಡೆಸಲಾಗುತ್ತದೆ.












Click it and Unblock the Notifications