ಜೂ.10 ರಿಂದ 19 ರವರೆಗೆ ಧೋ ಅಂತ ಮಳೆಯಾಗಲಿದೆ

ಬೆಂಗಳೂರು, ಜೂನ್ 3: ವಾರದಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ಜನತೆ ಮಾಯದಂಥ ಮಳೆ ಕಂಡಿದ್ದಾಯ್ತು. ಆದರೆ ಅದು ಅಷ್ಟಕ್ಕೇ ನಿಲ್ಲುವುದಿಲ್ಲ. ಇನ್ನೂ ಭರ್ಜರಿ ಮಳೆಯಾಗಲಿದೆ ಎಂದು National Aerospace Laboratories ಸಂಸ್ಥೆಯ ಹವಾಮಾನ ವಿಜ್ಞಾನಿಗಳು ತಿಳಿಸಿದ್ದಾರೆ.

ಬಹುತೇಕ ಕಡೆ ಒದ್ದೆ ಮುದ್ದೆ: Varsha GCM ಸಾಫ್ಟ್ ವೇರ್ ಆಧರಿಸಿ ಅಧ್ಯಯನ ನಡೆಸಿರುವ NAL ವಿಜ್ಞಾನಿಗಳು ಕರ್ನಾಟಕ ಸೇರಿದಂತೆ ದೇಶದ ಬಹುತೇಕ ಭಾಗಗಳು ಭರ್ಜರಿ ಮುಂಗಾರು ಮಳೆಯಿಂದ ಈ ಬಾರಿ ಒದ್ದೆ ಮುದ್ದೆಯಾಗಲಿವೆ ಎಂದಿದ್ದಾರೆ.

Rainfall to peak June 10-19-2013 NAL scientists,
ಜೂನ್ 10 ರಿಂದ 19 ತನಕ ವಿಪರೀತ ಮಳೆಯಾಗಲಿದೆ. ಜೂನ್ 19 ರ ನಂತರವೂ ಮುಂಗಾರು ಮಳೆ ಧೋ ಅಂತ ಸುರಿಯಲಿದೆ. 2007ರಿಂದ NAL ವಿಜ್ಞಾನಿಗಳು ಮಳೆ ಹವಾಮಾನದ ಬಗ್ಗೆ ನಿಖರ ಮಾಹಿತಿ ನೀಡುತ್ತಿದ್ದು, Indian Meteorological Department (IMD) ಸೇರಿದಂತೆ ಕೇಂದ್ರ ಸರಕಾರಕ್ಕೆ ತಾವು ಕಲೆ ಹಾಕಿರುವ ಮಾಹಿತಿಯನ್ನು ಮುಂಚಿತವಾಗಿಯೇ ಒದಗಿಸುತ್ತಿದ್ದಾರೆ.

ಜೂನ್ ತಿಂಗಳಲ್ಲಿ ಸಾಮಾನ್ಯವಾಗಿ ವಾರ್ಷಿಕ ಪ್ರಮಾಣದ ಶೇ. 134ರಷ್ಟು ಮಳೆಯಾಗುತ್ತದೆ. ಮೊದಲ 15 ದಿನದಲ್ಲಿ ಶೇ. 46 ಹೆಚ್ಚು ಮಳೆಯಾಗುತ್ತದೆ. ಅದರ ಮುಂದಿನ ಭಾಗದಲ್ಲಿ ಶೇ. 35 ರಷ್ಟು ಮಳೆಯಾಗುತ್ತದೆ ಎಂದು NAL ಅಧ್ಯಯನದಿಂದ ತಿಳಿದುಬಂದಿದೆ.

ಮೇ 26 ರಿಂದ 30ರವರೆಗಿನ ಹವಾಮಾನ ಪರಿಸ್ಥಿತಿಯನ್ನು ತಮ್ಮ Varsha software ಮತ್ತು super-computing facility ಮೂಲಕ ಅಧ್ಯಯನ ಮಾಡಿದ NAL ವಿಜ್ಞಾನಿಗಳು ಈ ನಿರ್ಣಯಕ್ಕೆ ಬಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+