ಕಾಂಗ್ರೆಸ್ ಇಮೇಜ್ ಹೆಚ್ಚಿಸಲು ಯುವನಾಯಕರ ತಂಡ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ - ಬೆಂಗಳೂರಿನಲ್ಲಿ ಪಬ್ಲಿಕ್ ಪಾಲಿಸಿ ಪ್ರೊಫೆಸರ್ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ವಕ್ತಾರ ಆಗಿರುವ ರಾಜೀವ್ ಗೌಡ ಮತ್ತು ರಾಹುಲ್ ಗಾಂಧಿಯವರ ನೆಚ್ಚಿನ ಯುವ ನಾಯಕರಲ್ಲಿ ಒಬ್ಬರಾಗಿರುವ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಈ ಯುವಪೀಳಿಗೆಯ ನಾಯಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಲೋಕಸಭೆ ಚುನಾವಣೆ 2014ರಲ್ಲಿ ನಡೆಯಬೇಕಿದೆ. ಈ ಕುರಿತಂತೆ ಚುನಾವಣಾಪೂರ್ವ ಸಮೀಕ್ಷೆಗಳು ಕೂಡ ಹಲವಾರು ನಡೆದಿವೆ. ಮುಂದಿನ ದಿನಗಳಲ್ಲಿ ಖಾಸಗಿ ಟಿವಿ ಚಾನಲ್ಲುಗಳಲ್ಲಿ ಬಿಸಿಬಿಸಿ ಚರ್ಚೆಗಳು ನಡೆಯಲಿವೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಯುಪಿಎ ಸರಕಾರದ ಬಗ್ಗೆ ಜನರಲ್ಲಿ ಇರುವ ಕೆಲ ತಪ್ಪು ತಿಳಿವಳಿಕೆಗಳನ್ನು ದೂರ ಮಾಡುವ ಉದ್ದೇಶದಿಂದ ಈ ತಂಡವನ್ನು ಕಟ್ಟಲಾಗಿದೆ.
ಈಗಿರುವ ಎಂಟು ರಾಷ್ಟ್ರೀಯ ವಕ್ತಾರರ ಜೊತೆಗೆ, ಕೇಂದ್ರ ಸಚಿವರಾಗಿರುವ ಜ್ಯೋತಿರಾಧಿತ್ಯ ಸಿಂಧಿಯಾ, ಸಚಿನ್ ಪೈಲಟ್, ಶಶಿ ತರೂರ್, ಮನೀಶ್ ತಿವಾರಿ, ಜಯಂತಿ ನಟರಾಜನ್, ಮೀನಾಕ್ಷಿ ನಟರಾಜನ್ ಮುಂತಾದವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.
ಮುಂಬೈ ಯುವ ಕಾಂಗ್ರೆಸ್ ಸದಸ್ಯೆ ಮತ್ತು ಕ್ರಿಯಾಶೀಲ ಬ್ಲಾಗರ್ ಆಗಿರುವ ಪ್ರಿಯಾಂಕಾ ಚತುರ್ವೇದಿ, ಕ್ರಿಕೆಟ್ ನೆಕ್ಸ್ಟ್.ಕಾಂ ಸಂಸ್ಥಾಪಕರಾಗಿರುವ ಮಾಜಿ ಬ್ಯಾಂಕ್ ಉದ್ಯಮಿ ಸಂಜಯ್ ಝಾ, ದೀಪೇಂದರ್ ಹೂಡಾ, ಆರ್.ಪಿ.ಎನ್ ಸಿಂಗ್, ಅಶೋಕ್ ತನ್ವರ್, ರಾಜೀವ್ ಸತವ್ ಮತ್ತು ನದೀಮ್ ಜಾವೇದ್ ಅವರು ಕೂಡ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಈ ತಂಡದಲ್ಲಿ ವಿವಾದಾತ್ಮಕ ವಕ್ತಾರ ಅಭಿಷೇಕ್ ಮನು ಸಿಂಘ್ವಿ, ಸಂಜಯ್ ನಿರುಮಪ್, ಗಿರಿಜಾ ವ್ಯಾಸ್ ಅವರನ್ನು ಉಳಿಸಿಕೊಳ್ಳಲಾಗಿದೆ. ಆದರೆ, ಗುಲಾಂ ನಭಿ ಆಝಾದ್, ಸಿಪಿ ಜೋಶಿ, ಜೈರಾಮ್ ರಮೇಶ್ ಮತ್ತು ಅಂಬಿಕಾ ಸೋನಿ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿಲ್ಲ.












Click it and Unblock the Notifications