ಆಪರೇಶನ್ ಮಾಡೋ 'ಕೈ' ನನ್ನದಲ್ಲ: ಸಿದ್ದು ತಿರುಗೇಟು

no-plans-no-need-of-operation-congress-siddaramaiah
ಸಂಡೂರು, ಜೂನ್ 3- 'ಪ್ರತಿಪಕ್ಷ ನಾಯಕನ ಪದಚ್ಯುತಿಗೆ ಹಸ್ತೋದಕ ಕೊಟ್ಟಿದ್ದೀರಂತೆ. ಹಾಗಂತ ಸ್ವತಃ ಆ ನಾಯಕರೇ ಹೇಳಿಕೊಂಡಿದ್ದಾರೆ' ಎಂದು ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೇಳಿದ್ದೇ ತಡ ಬುಸುಗುಟ್ಟಿದ ಸಿದ್ದರಾಮಯ್ಯ 'ಅಂತ ಕಲೆಗಳೆಲ್ಲ ನಮಗೆ 'ಕರ'ಗತವಾಗಿಲ್ಲ. ಆ ಕಲೆಗಳು ನಮ್ಮ ಕೈಗಂಟುವುದೂ ಬೇಡ. ಅದೇನಿದ್ದರೂ ಅವರಿಗೇ ಹೇಳಿ ಮಾಡಿಸಿದ್ದು' ಎಂದು ತಿರುಗೇಟು ನೀಡಿದ್ದಾರೆ.

'ಅವರಿಗೆ (ಕುಮಾರಸ್ವಾಮಿಗೆ) ಆ ಬಗ್ಗೆ ಆತಂಕ ಬೇಡ. ಎಚ್‌ಡಿಕೆ ಪ್ರತಿ ಪಕ್ಷದ ನಾಯಕರಾದರೆ ನಮಗೇನು ಕಷ್ಟನಷ್ಟವಿಲ್ಲ. ಆಪರೇಷನ್ ಹಸ್ತ ಕೈಗೊಳ್ಳುವಂತಹ ಯಾವುದೇ ಅಗತ್ಯವೂ ಕಾಂಗ್ರೆಸ್ಸಿಗೆ ಇಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಸ್ಪಷ್ಟಪಡಿಸಿದ್ದಾರೆ.

'ಜೆಡಿಎಸ್ ಸೇರಿದಂತೆ ಯಾವುದೇ ಪಕ್ಷದ ಶಾಸಕರನ್ನು ಆಪರೇಷನ್ ಮೂಲಕ ಕಾಂಗ್ರೆಸಿಗೆ ಕರೆತರುವ ಅಗತ್ಯ ನಮಗಿಲ್ಲ. ಅಂತಹ ಹೇಳಿಕೆ ನೀಡುವುದು ಕುಮಾರಸ್ವಾಮಿಯಂತವರ ಸ್ಚಭಾವ' ಎಂದು ಲೇವಡಿ ಮಾಡಿದರು.

ಸಿಎಂ ಸಿದ್ದು ಇನ್ನೂ ಹೇಳಿದರು?:
* ಮೂರನೇ ಬಾರಿ ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ
* ಸುಪ್ರೀಂಕೋರ್ಟ್ ಆದೇಶ ಪಾಲಿಸುವ ದೃಷ್ಟಿಯಿಂದ ರಾಜ್ಯದಲ್ಲಿ ಗುಟ್ಕಾ ನಿಷೇಧಿಸಲಾಗಿದೆಯೇ ಹೊರತು ಅದರಲ್ಲಿ ಸರಕಾರದ ಪಾತ್ರವೇನೂ ಇಲ್ಲ.
* ಜುಲೈ 2ನೇ ವಾರದಲ್ಲಿ ಬಜೆಟ್- ಬಿಜೆಪಿ ಆಡಳಿತದಲ್ಲಿ ದಿಕ್ಕೆಟ್ಟ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಮೊದಲ ಆದ್ಯತೆ. ಬಜೆಟ್‌ಗೆ ಪೂರಕ ಸಿದ್ಧತೆ ಕಾರ್ಯ ನಡೆದಿವೆ. ಜನರ ಬೇಕು-ಬೇಡಗಳಿಗೆ ಪೂರಕ ಬಜೆಟ್ ಮಂಡಿಸಲಾಗುತ್ತದೆ.
* ಪ್ರತ್ಯೇಕ ಕೃಷಿ ಬಜೆಟ್ ಅಗತ್ಯವಿಲ್ಲ- ಪ್ರತ್ಯೇಕ ಕೃಷಿ ಬಜೆಟ್ ರೈತರನ್ನು ದಾರಿ ತಪ್ಪಿಸುವ ತಂತ್ರಗಾರಿಕೆ. ರೈತರ ಶ್ರಮಕ್ಕೆ ನ್ಯಾಯಯುತ ಬೆಲೆ ನಿಗದಿಪಡಿಸುವ, ವೈಜ್ಞಾನಿಕ ಬೆಂಬಲ ಬೆಲೆ ಘೋಷಿಸುವ ಹಾಗೂ ವ್ಯಾಟ್ ಮಾದರಿಯಲ್ಲಿ ಲಾಭದಾಯಕ ಕ್ರಮ ಕೈಗೊಳ್ಳದ ಕೃಷಿ ಬಜೆಟ್ ಯಾವ ಪುರುಷಾರ್ಥಕ್ಕೆ?
* ಕಾಗಿನೆಲೆಯ ಶ್ರೀ ನಿರಂಜನಂದಾಪುರಿ ಸ್ವಾಮೀಜಿ ಕುರಿ ಹತ್ಯೆ ನಿಷೇಧಿಸಬೇಕು ಹಾಗೂ ಕುರಿಯನ್ನು ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸಬೇಕೆಂಬ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+