ಮಡಿಕೇರಿ : ಮಾವ, ಅತ್ತೆಗೆ ಗುಂಡೇಟು ಕೊಟ್ಟ ಅಳಿಯ!

ಗುಂಡು ಹಾರಿಸಿದ ಆರೋಪಿಯನ್ನು ಸೀತಾರಾಮ್ ಶೆಟ್ಟಿ ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸೀತಾರಾಮ್ ಶೆಟ್ಟಿ ಪತ್ನಿ ರುಕ್ಮಿಣಿ, ಮಾವ ಯಶವಂತ್ ಹಾಗೂ ಅತ್ತೆ ಪೂರ್ಣಿಮಾ ಮೇಲೆ ಗುಂಡು ಹಾರಿಸಿದ್ದಾನೆ.
ಗುಂಡಿನ ದಾಳಿಯಿಂದಾಗಿ ಮೂವರ ಕೈಗೆ ಗಾಯಗಳಾಗಿದ್ದು, ಮೂವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಸೀತಾರಾಮ್ ಕೈಗೂ ಗುಂಡು ತಗುಲಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಸೀತಾರಾಮ್ ನನ್ನು ಸರ್ಕಾರಿ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಿಂದ ಸೀತಾರಾಮ್ ಅವರನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ.
ಆಸ್ತಿ ವಿವಾದ : ಸೀತಾರಾಮ್ ಶೆಟ್ಟಿ ಪತ್ನಿ ಮತ್ತು ಮಾವನೊಂದಿಗೆ ಆಸ್ತಿಗಾಗಿ ಯಾವಾಗಲೂ ಜಗಳವಾಡುತ್ತಿದ್ದ ಎಂದು ತಿಳಿದುಬಂದಿದೆ. ಭಾನುವಾರ ಬೆಳಗ್ಗೆ ಹೀಗೆ ಜಗಳ ಪ್ರಾರಂಭವಾಗಿದ್ದು, ವಿಕೋಪಕ್ಕೆ ಹೋದಾಗ ಶೆಟ್ಟಿ, ಬಂದೂಕು ತೆಗೆದುಕೊಂಡು ಮೂವರಿಗೂ ಗುಂಡು ಹಾರಿಸಿದ್ದಾನೆ. ನಂತರ ತಾನು ಗುಂಡು ಹಾರಿಸಿಕೊಂಡಿದ್ದಾನೆ.












Click it and Unblock the Notifications