ಕಾಮುಕ ಟಿಟಿ: ಟಾಯ್ಲೆಟಿನಲ್ಲಿ ಬಚ್ಚಿಟ್ಟುಕೊಂಡ ಯುವತಿ

woman-hides-in-shalimar-express-toilet-escapes-tte-lust
ಚೆನ್ನೈ, ಮೇ31: ರೈಲ್ವೆಯ ಕಾಮುಕ ಟಿಕೆಟ್ ಪರೀಕ್ಷಕನಿಂದ ಪಾರಾಗಲು 30 ವರ್ಷದ ಯುವತಿಯೊಬ್ಬರು ಟಾಯ್ಲೆಟಿನಲ್ಲಿ ಬಚ್ಚಿಟ್ಟುಕೊಂಡ ಘಟನೆ ವರದಿಯಾಗಿದೆ.

ಸದರಿ ಯುವತಿ ಪೋಷಕರ ಜತೆಗೂಡಿ ಬುಧವಾರ ನೆಲ್ಲೂರಿನಿಂದ ಹೊರಟು ಗೂಡೂರು ಕಡೆ ಶಾಲಿಮಾರ್ ಎಕ್ಸ್ ಪ್ರೆಸ್ ಟ್ರೈನಿನಲ್ಲಿ ತೆರಳುತ್ತಿದ್ದರು. ಆದರೆ ಅದೇನಾಯಿತೋ ಕಾಮುಕ ಟಿಕೆಟ್ ನಿರೀಕ್ಷಕ (Train Ticket Examiner -TTE) ಆಕೆಯ ಮೇಲೆ ವಕ್ರದೃಷ್ಟಿ ಬೀರಿದ್ದಾನೆ. ಬೆದರಿದ ಹರಿಣಿಯಂತಾದ ಯುವತಿ ಛಂಗನೆ ಅವನಿಂದ ತಪ್ಪಿಸಿಕೊಂಡು ಸೀದಾ ರೈಲ್ವೆ ಬೋಗಿಯಲ್ಲಿದ್ದ ಟಾಯ್ಲೆಟಿನಲ್ಲಿ ಅವಿತಿಟ್ಟುಕೊಂಡಿದ್ದಾರೆ.

ಏನಾಯಿತೆಂದರೆ ಹವಾನಿಯಂತ್ರಿತ ಬೋಗಿಯಲ್ಲಿ ತನ್ನ ಅಪ್ಪ-ಅಮ್ಮನೊಂದಿಗೆ ಸದರಿ ಯುವತಿ ಪ್ರಯಾಣ ಮಾಡುತ್ತಿದ್ದರು. ಅದಕ್ಕೂ ಮುನ್ನ ರಿಸರ್ವೇಶನ್ ಇಲ್ಲದಿದ್ದರಿಂದ ಸ್ವಲ್ಪ TTE ನೆರವು ಯಾಚಿಸಿದ್ದಾಳೆ. ಆದರೆ ಅದರ ದುರುಪಯೋಗ ಪಡಿಸಿಕೊಂಡ ಆಸಾಮಿ, ಅಕೆಯ ನೆರವಿಗೆ ಧಾವಿಸಿದನಾದರೂ ನಂತರ ಆಕೆಯ ಮೇಲೆ ಬಲಾತ್ಕಾರಕ್ಕೆ ಯತ್ನಿಸಿದ್ದಾನೆ.

ರಾತ್ರಿ ಪ್ರಯಾಣವಾಗಿದ್ದರಿಂದ ಸದ್ಯ ಎಸಿ ಕೋಚ್ ಸಿಕ್ಕಿತೆಂದು ಸುಖ ಪ್ರಯಾಣದಲ್ಲಿದ್ದ ಸದರಿ ಯುವತಿಯ ಮೇಲೆ ಬೆಳಗಿನ ಜಾವ ನಾಲ್ಕು ಗಂಟೆಯಲ್ಲಿ 40 ವರ್ಷದ TTE ರಾಮ ರಾವ್ ಪಶುವಿನಂತೆ ಎರಗಿದ್ದಾನೆ. ಮೇಲಿನ ಬರ್ತ್ ನಲ್ಲಿ ಮಲಗಿದ್ದ ಆಕೆಯ ಮೇಲೆ ಮೊದಲು ಕೈಯಾಡಿಸಿದ್ದಾನೆ. ಇದರಿಂದ ಬೆಚ್ಚಿಬಿದ್ದ ಯುವತಿ ಎದ್ದು ಕುಳಿತಿದ್ದಾಳೆ.

ಆಗ ರಾಮರಾವು 'ನಿನಗೆ ಬರ್ತ್ ಸಿಗಲು ನಾನು ಹೆಲ್ಪ್ ಮಾಡಿದೆನಲ್ಲಾ? ಈಗ ನೀನೂ ನನಗೆ ಹೆಲ್ಪ್ ಮಾಡು. ಸ್ವಲ್ಪ ಕೆಳಗಿಳಿದು ಬಾ' ಎಂದು ಕೆಳಗಿಂದ ಆಕೆಯನ್ನು ಅಸಹ್ಯವಾಗಿ ನೋಡುತ್ತಾ ಕೇಳಿದ್ದಾನೆ. ಜತೆಗೆ ದಬಾಯಿಸಿಯೂ ಮಾತನಾಡಿದ್ದಾನೆ. ಇದರಿಂದ ಕಂಗೆಟ್ಟ ಯುವತಿ 'ಸ್ವಲ್ಪ ಟಾಯ್ಲೆಟ್ಟಿಗೆ ಹೋಗಿಬರ್ತೀನಿ ದಾರಿ ಬಿಡು' ಎಂದು ಸ್ಥಳದಿಂದ ಕಾಲ್ಕಿತ್ತಿದ್ದಾಳೆ.

ಟಾಯ್ಲೆಟ್ಟಿಗೆ ಹೋದವಳೆ ಒಳಗಿಂದ ಚಿಲಕ ಹಾಕಿಕೊಂಡು ಮುಂದೆ ಬೆಳಕು ಹರಿಯುವವರೆಗೂ ಅಲ್ಲೇ ಬಚ್ಚಿಟ್ಟುಕೊಂಡಿದ್ದಾಳೆ. ಆದರೂ ಇವಯ್ಯ ಬಾಗಿಲು ಬಡಿಯುತ್ತಾ ಅಲ್ಲೇ ನಿಂತುಬಿಟ್ಟಿದ್ದಾನೆ. ಕೊನೆಗೆ ಮಹಿಳಾ ಟೆಕ್ಕಿಯೊಬ್ಬರ ಸಕಾಲಿಕ ನೆರವಿನಿಂದಾಗಿ ಯುವತಿ ಇಕ್ಕಟ್ಟಿನಿಂದ ಪಾರಾಗಿದ್ದಾಳೆ ಅನ್ನಿ.

ಅತ್ತ ರಾಮರಾವು ವಿರುದ್ಧ woman harassment, molestation and for being under the influence of alcohol ಪ್ರಕರಣಗಳನ್ನು ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+