ಮಣಿಪಾಲದಲ್ಲಿ ಕೋಲಾರ ಚಾಲಕನ ನಿಗೂಢ ಸಾವು

kolar-taxi-driver-krishnappa-found-dead-in-manipal
ಉಡುಪಿ, ಮೇ 28: ಮಣಿಪಾಲ ಬಳಿ ಇಂದ್ರಾಳಿ ರೈಲ್ವೆ ಬ್ರಿಡ್ಜ್ ಸಮೀಪ 33 ವರ್ಷದ ಪುರುಷರೊಬ್ಬರ ಕೊಳೆತ ಶವ ನಿನ್ನೆ ಸೋಮವಾರ ದೊರೆತಿದೆ. ಮೃತ ವ್ಯಕ್ತಿಯನ್ನು ಕೋಲಾರದ ಪ್ರವಾಸಿ ಟ್ಯಾಕ್ಸಿ ಚಾಲಕ ಕೃಷ್ಣಪ್ಪ ಎಂದು ಗುರುತಿಸಲಾಗಿದೆ. ಕೃಷ್ಣಪ್ಪ ಸಾವು ನಿಗೂಢವಾಗಿದ್ದು ಹಲವಾರು ಅನುಮಾನಗಳನ್ನು ಮೂಡಿಸಿವೆ.

ಮೇಲ್ನೋಟಕ್ಕೆ ಚಾಲಕ ಕೃಷ್ಣಪ್ಪ ಸಾವು ಮೂರ್ನಾಲ್ಕು ದಿನಗಳ ಹಿಂದೆಯೇ ಸಂಭವಿಸಿದೆ ಎನ್ನಲಾಗಿದೆ. ಮೇ 23ರಂದು ಚಾಲಕ ಕೃಷ್ಣಪ್ಪ ಕೃಷ್ಣ ಮಠದಿಂದ ರೈಲ್ವೆ ಬ್ರಿಡ್ಜ್ ವರೆಗೂ ತೆರಳಿದ್ದು ಆನಂತರ ಏನಾಯಿತು ಎಂಬುದು ನಿಗೂಢವಾಗಿದೆ ಎಂದು ಸರ್ಕಲ್ ಇನ್ಸ್ ಪೆಕ್ಟರ್ ಸದಾನಂದ ಮೇ 23ರಂದು ತಿಳಿಸಿದ್ದಾರೆ.

ಚಾಲಕ ಕೃಷ್ಣಪ್ಪ ಪ್ರವಾಸಿಗರ ಜತೆ ಉಡುಪಿಗೆ ಬಂದಿದ್ದರು. ಕೃಷ್ಣಪ್ಪ ಕಾಣೆಯಾಗಿದ್ದರಿಂದ ಚಾಲಕ ನಾಪತ್ತೆಯಾಗಿದ್ದಾನೆ ಎಂದು ಆ ಪ್ರವಾಸಿಗರು ಮಣಿಪಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ಬೇರೊಂದು ವಾಹನ ಮಾಡಿಕೊಂಡು ಕೋಲಾರಕ್ಕೆ ಅವರು ವಾಪಸಾಗಿದ್ದರು.

ಕಾರಿನಿಂದ ಹೆಣದ ವಾಸನೆ ಬರತೊಡಗಿದಾಗ ಸಮೀಪದ ಜಯದೇವ ಮೋಟಾರ್ಸ್ ಸಂಸ್ಥೆಯವರು ಪೊಲೀಸರಿಗೆ ಮಾಹಿತಿ ನೀಡಿದರು. ಕೃಷ್ಣಪ್ಪ ವಾಹನದಲ್ಲಿದ್ದ ವಿಮೆ ದಾಖಲೆಪತ್ರಗಳು, ಲೈಸೆನ್ಸ್, ಆರ್ ಸಿ ಪುಸ್ತಕ, ಮೊಬೈಲ್ ಫೋನ್, ವಾಚ್ ಜತೆಗೆ ಸುಮಾರು 5000 ರೂ. ನಗದನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಕೃಷ್ಣಪ್ಪ ಅವರ ಕುಟುಂಬದವರನ್ನು ಸಂಪರ್ಕಿಸಲಾಗಿದೆ ಎಂದು ಇನ್ಸ್ ಪೆಕ್ಟರ್ ಸದಾನಂದ ಹೇಳಿದ್ದಾರೆ.

ಚಾಲಕ ಕೃಷ್ಣಪ್ಪ ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಇತರೆ ದೃಷ್ಟಿಕೋನಗಳಿಂದಲೂ ತನಿ8ಖೆ ನಡೆಸುತ್ತಿದ್ದಾರೆ. ಶವಪರೀಕ್ಷೆ ವರದಿ ಇನ್ನೂ ಪೊಲೀಸರ ಕೈಸೇರಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+