ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯು.ಆರ್.ಅನಂತಮೂರ್ತಿ ಕೈ ತಪ್ಪಿದ ಬೂಕರ್ ಪ್ರಶಸ್ತಿ

|
Google Oneindia Kannada News

U.R. Ananthamurthy
ಲಂಡನ್, ಮೇ 23 : ಕನ್ನಡಿಗರಲ್ಲಿ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಈ ಬಾರಿಯ ಮ್ಯಾನ್ ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಯು.ಆರ್‌.ಅನಂತಮೂರ್ತಿಯವರ ಕೈ ತಪ್ಪಿದೆ. ಅಮೆರಿಕದ ಸಾಹಿತಿ ಲೈಡಿಯಾ ಡೇವಿಸ್‌ ಬೂಕರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಬುಧವಾರ ರಾತ್ರಿ ಲಂಡನ್ ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ವಿಜೇತರ ಹೆಸರನ್ನು ಘೋಷಿಸಲಾಯಿತು. ಅಂತಿಮ ಹಂತದ ಸ್ಪರ್ಧೆಯಲ್ಲಿ ನ್ಯೂಯಾರ್ಕ್‌ ಮೂಲದವರಾದ ಸಣ್ಣಕಥೆಗಾರ್ತಿ ಲೈಡಾ, 51 ಲಕ್ಷ ರೂ. ಮೊತ್ತದ ನಗದು ಬಹುಮಾನ ಒಳಗೊಂಡ ಪ್ರಶಸ್ತಿಯನ್ನು ಪಡೆದರು.

ತಮ್ಮ ಸೃಜನಶೀಲ ಬರವಣಿಗೆಗೆ ಮ್ಯಾನ್ ಲೈಡಾ ಬೂಕರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಆವರು ಬರೆದ 'ದಿ ಎಂಡ್‌ ಆಫ್ ದಿ ಸ್ಟೋರಿ' ಮತ್ತು 'ವೆರೈಟೀಸ್‌ ಆಫ್ ಡಿಸ್ಟರ್ಬೆನ್ಸ್‌' ಕೃತಿಯನ್ನು ಪ್ರಶಸ್ತಿಗಾಗಿ ಪರಿಗಣಿಸಲಾಯಿತು.

ಮ್ಯಾನ್ ಬೂಕರ್ ಪ್ರಶಸ್ತಿ ಕೈ ತಪ್ಪಿದ ನಂತರ ಪ್ರತಿಕ್ರಿಯೆ ನೀಡಿದ ಅನಂತಮೂರ್ತಿ, ವಿಶ್ವದ ಎಲ್ಲಾ ಭಾಷೆಗಳ ಬರಹಗಾರರೊಂದಿಗೆ ಕನ್ನಡದ ನನ್ನ ಬರಹಗಳನ್ನೂ ಹೆಸರಿಸಲಾಗಿತ್ತು. ಭಾರತದ ಎಲ್ಲಾ ಪ್ರಾದೇಶಿಕ ಭಾಷೆಗಳ ಪ್ರತಿನಿಧಿಯಾಗಿ ಮತ್ತು ಓರ್ವ ಬರಹಗಾರನಾಗಿ ನಾನು ಆಯ್ಕೆಯಾಗಿದ್ದಕ್ಕೆ ಸಂತಸವಾಗಿದೆ ಎಂದರು.

ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ಲಂಡನ್ ಗೆ ಆಗಮಿಸಿದ್ದ ಯು.ಆರ್.ಅನಂತಮೂರ್ತಿ, "ನನಗೆ ಆರೋಗ್ಯ ಸರಿಯಾಗಿಲ್ಲ. ಆದರೂ ಭಾರತೀಯ ಸಾಹಿತಿಗಳ ಪರವಾಗಿ ಸಮಾರಂಭದಲ್ಲಿ ಭಾಗವಹಿಸಬೇಕೆಂದು ಲಂಡನ್‌ಗೆ ಆಗಮಿಸಿದ್ದೆ. ಕನ್ನಡನ ಒಬ್ಬ ಬರಹಗಾರನನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದೇ ಬಹಳ ದೊಡ್ಡ ಗೌರವ" ಎಂದರು.

ಪ್ರಶಸ್ತಿಯ ಪಟ್ಟಿಯಲ್ಲಿ ನನ್ನ ಹೆಸರು ಸೇರಿದ್ದು ಸಂತಸ ತಂದಿದೆ. ಇದರಿಂದಾಗಿ ಭಾರತೀಯ ಸಾಹಿತ್ಯದ ಬಗ್ಗೆ ವಿಶ್ವದ ಇತರೆ ದೇಶಗಳು ಜನರು ಆಸಕ್ತಿಯಿಂದ ನೋಡುವಂತಾಗಲಿದೆ. ಕನ್ನಡ ಸೇರಿದಂತೆ ಭಾರತದ ಎಲ್ಲಾ ಪ್ರಾದೇಶಿಕ ಭಾಷೆಗಳ ಪ್ರತಿನಿಧಿಯಾಗಿ ನಾನು ಸಮಾರಂಭದಲ್ಲಿ ಭಾಗವಹಿಸಿದ್ದೇನೆ ಎಂದು ಅವರು ಹೇಳಿದರು.

ಏನಿದು ಪ್ರಶಸ್ತಿ : ಮ್ಯಾನ್ ಬೂಕರ್ ಇಂಟರ್ ನ್ಯಾಷನಲ್ ಪ್ರಶಸ್ತಿಯನ್ನು ವಿಶ್ವದ ಯಾವುದೇ ದೇಶದ, ಇಂಗ್ಲೀಷ್ ಭಾಷೆ ತರ್ಜುಮೆಗೆ ಲಭ್ಯವಿರುವ ಯಾವುದೇ ಭಾಷೆಯ ಕೃತಿಗೆ ನೀಡಲಾಗುತ್ತದೆ. 2005ರಿಂದ ಈ ಪ್ರಶಸ್ತಿಯನ್ನು ಪ್ರತಿ 2 ವರ್ಷಕ್ಕೊಮ್ಮೆ ನೀಡಲಾಗುತ್ತಿದೆ. ಪ್ರಶಸ್ತಿಯೂ 51 ಲಕ್ಷ ರೂ. ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.

ಟಿಟ್ವಿರ್ ನಲ್ಲಿ ಮ್ಯಾನ್ ಬೂಕರ್ ಪ್ರಶಸ್ತಿ ಬಗ್ಗೆ ನಡೆದ ಚರ್ಚೆ

English summary
Kannada writer U.R. Ananthamurthy failed to win the Man Booker International Prize. On Wednesday, May 22, in London Man Booker Prize announced. American writer Lydia Davis picked up the £60,000 award given in recognition of a writer’s overall contribution to fiction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X