ಖಾತೆ ಹಂಚಿಕೆ ಕಸರತ್ತು ಅಂತ್ಯ, ಯಾರಿಗೆ ಯಾವ ಖಾತೆ?

ಹಿರಿಯ ನಾಯಕರಿಗೆ ಮಹತ್ವದ ಖಾತೆಗಳ ಜವಾಬ್ದಾರಿ ನೀಡಲಾಗಿದ್ದು, ಸಾಕಷ್ಟು ಆಲೋಚನೆ ನಡೆಸಿ ಸಿದ್ದರಾಮಯ್ಯ ಖಾತೆ ಹಂಚಿಕೆ ಮಾಡಿರುವುದು ಪ್ರಾಥಮಿಕವಾಗಿ ತಿಳಿದು ಬರುತ್ತದೆ. ಖಾತೆ ಹಂಚಿಕೆ ಮಾಡಲು ಯಾವ ಮಾನದಂಡ ಅನುಸರಿಸಲಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿಗಳು ತಿಳಿದುಬಂದಿಲ್ಲ.
ಗೃಹ ಖಾತೆಯನ್ನು ಕೆ.ಜೆ.ಜಾರ್ಜ್ ಅವರಿಗೆ ವಹಿಸಲಾಗಿದ್ದು ಮತ್ತೊಮ್ಮೆ ಗೃಹ ಇಲಾಖೆ ಬೆಂಗಳೂರು ನಗರದ ಶಾಸಕರ ಕೈ ಸೇರಿದೆ. ಹಿರಿಯ ನಾಯಕ ಟಿ.ಬಿ.ಜಯಚಂದ್ರ ಅವರಿಗೆ ಕಾನೂನು ಇಲಾಖೆ ಹೊಣೆ ವಹಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಳಿ ಸಂಪುಟ ವ್ಯವಹಾರ, ಆಡಳಿತ ಸುಧಾರಣೆ, ಹಣಕಾಸು, ಸಣ್ಣ ಉಳಿತಾಯ, ಲಾಟರಿ, ಗುಪ್ತಚರ, ಬೆಂಗಳೂರು ನಗರಾಭಿವೃದ್ಧಿ, ಗಣಿ ಮತ್ತು ಭೂವಿಜ್ಞಾನ, ರೇಷ್ಮೆ, ಇಂಧನ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆಗಳನ್ನು ಉಳಿಸಿಕೊಂಡಿದ್ದಾರೆ.
ಸಚಿವರು ಮತ್ತು ಖಾತೆಗಳ ಪಟ್ಟಿ
ಸಂಪುಟ ದರ್ಜೆ ಸಚಿವರು
* ಆರ್.ವಿ. ದೇಶಪಾಂಡೆ - ಉನ್ನತ ಶಿಕ್ಷಣ, ಪ್ರವಾಸ
* ಖಮರುಲ್ ಇಸ್ಲಾಂ - ವಕ್ಫ್, ಪೌರಾಡಳಿತ, ಸ್ಥಳೀಯ ಸಂಸ್ಥೆಗಳು, ಸಾರ್ವಜನಿಕ ಉದ್ದಿಮೆ
* ಪ್ರಕಾಶ್ ಬಿ. ಹುಕ್ಕೇರಿ - ಮುಜರಾಯಿ, ಸಣ್ಣ ಕೈಗಾರಿಕೆ, ಸಕ್ಕರೆ
* ಟಿ.ಬಿ. ಜಯಚಂದ್ರ - ಕಾನೂನು ಮತ್ತು ಸಂಸದೀಯ, ಪಶು ಸಂಗೋಪನೆ, ಮಾನವ ಹಕ್ಕುಗಳು
* ರಾಮಲಿಂಗಾರೆಡ್ಡಿ - ಸಾರಿಗೆ
* ರಮಾನಾಥ ರೈ - ಅರಣ್ಯ ಮತ್ತು ಪರಿಸರ
* ಎಚ್.ಕೆ. ಪಾಟೀಲ್ - ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್
* ಶಾಮನೂರು ಶಿವಶಂಕರಪ್ಪ - ಕೃಷಿ ಉತ್ಪನ್ನ ಮಾರುಕಟ್ಟೆ, ತೋಟಗಾರಿಕೆ
* ಡಾ.ಎಚ್.ಸಿ. ಮಹದೇವಪ್ಪ - ಲೋಕೋಪಯೋಗಿ
* ವಿ. ಶ್ರೀನಿವಾಸ ಪ್ರಸಾದ್ - ಕಂದಾಯ
* ಕೆ.ಜೆ. ಜಾರ್ಜ್ - ಗೃಹ
* ಮಹದೇವಪ್ರಸಾದ್ - ಸಹಕಾರ
* ಅಂಬರೀಷ್ - ವಸತಿ
* ವಿನಯಕುಮಾರ್ ಸೊರಕೆ - ನಗರಾಭಿವೃದ್ಧಿ (ಬೆಂ.ಬಿಟ್ಟು), ಕರ್ನಾಟಕ ನೀರು ಸರಬರಾಜು ಮತ್ತು ನಗರ ಮೂಲ ಸೌಕರ್ಯ,
ನಗರ ಯೋಜನೆ, ಭೂ ಸಾರಿಗೆ ನಿರ್ದೇಶನಾಲಯ
* ಬಾಬುರಾವ್ ಚಿಂಚನಸೂರು - ಜವಳಿ, ಬಂದರು, ಒಳನಾಡು ಸಾರಿಗೆ
* ಯು.ಟಿ. ಖಾದರ್ - ಆರೋಗ್ಯ, ಕುಟುಂಬ ಕಲ್ಯಾಣ
* ಸತೀಶ್ ಜಾರಕಿಹೊಳಿ - ಅಬಕಾರಿ
* ಎಚ್. ಆಂಜನೇಯ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
* ಎಂ.ಬಿ. ಪಾಟೀಲ್ - ಬೃಹತ್, ಮಧ್ಯಮ ನೀರಾವರಿ
* ಶಿವರಾಜ್ ತಂಗಡಗಿ- ಸಣ್ಣ ನೀರಾವರಿ
ರಾಜ್ಯ ಸಚಿವರು
* ಅಭಯಚಂದ್ರ ಜೈನ್ - ಯುವಜನ, ಮೀನುಗಾರಿಕೆ
* ಕೃಷ್ಣಬೈರೇಗೌಡ - ಕೃಷಿ
* ದಿನೇಶ್ ಗುಂಡೂರಾವ್ - ಆಹಾರ ಮತ್ತು ನಾಗರಿಕ ಹಾಗೂ ಗ್ರಾಹಕ ವ್ಯವಹಾರಗಳು
* ಶರಣಪ್ರಕಾಶ್ ಪಾಟೀಲ್ - ವೈದ್ಯಕೀಯ ಶಿಕ್ಷಣ
* ಕಿಮ್ಮನೆ ರತ್ನಾಕರ - ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
* ಉಮಾಶ್ರೀ - ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ
* ಸಂತೋಷ್ ಲಾಡ್ - ಮೂಲಸೌಕರ್ಯ ಮತ್ತು ವಾರ್ತೆ
* ಟಿ.ಪಿ. ಪರಮೇಶ್ವರ ನಾಯಕ - ಕಾರ್ಮಿಕ












Click it and Unblock the Notifications