ಶುಕ್ರವಾರ : ರಾಜ್ಯದ ಸಂಕ್ಷಿಪ್ತ ಅಪರಾಧ ಸುದ್ದಿಗಳು

ಬೆಳಗಾವಿ : ತನ್ನ ಮೊಮ್ಮಗಳ ವಯಸ್ಸಿನ ಬಾಲಕಿಯನ್ನು ವಿವಸ್ತ್ರಗೊಳಿಸಿ ಆಕೆಯ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಲು ಯತ್ನಿಸಿರುವ ಅಮಾನುಷ ಕೃತ್ಯ ಬೆಳಗಾವಿಯಲ್ಲಿ ನಡೆದಿದೆ. ಆರೋಪಿ ಅಬ್ದುಲ್ ದೊಡ್ಡವಾಡ (59) ಪಕ್ಕದ ಮನೆಯ ಬಾಲಕಿಯನ್ನು ಕಚ್ಚಿಗಾಯಗೊಳಿಸಿದ್ದಾನೆ. ಮಾಳ ಮಾರುತಿ ಠಾಣೆ ವ್ಯಾಪ್ತಿಯಲ್ಲಿ ಪಕ್ರರಣ ದಾಖಲಾಗಿದ್ದು, ಬಾಲಕಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ದೊಡ್ಡಬಳ್ಳಾಪುರ : ದುಷ್ಕರ್ಮಿಗಳು ಶಿವಾಂಜನೇಯ ದೇಗುಲದ ಬೀಗ ಮುರಿದು ಹಣ ಮತ್ತು ಚಿನ್ನಾಭರಣ ಅಪಹರಿಸಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ತಪಸೀಹಳ್ಳಿ ಬಳಿ ನಡೆದಿದೆ. ಶುಕ್ರವಾರ ಬೆಳಗ್ಗೆ 3 ಗಂಟೆಯ ವೇಳೆಗೆ ಈ ಕೃತ್ಯ ನಡೆದಿದ್ದು, ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಕಲಿ ವೈದ್ಯರ ಕ್ಲಿನಿಕ್ ಮೇಲೆ ದಾಳಿ : ಸಿಸಿಬಿ ಪೊಲೀಸರು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಎಲೆಕ್ಟ್ರಾನಿಕ್ ಸಿಟಿ, ಯಲಹಂಕ ಮತ್ತು ಯಶವಂತಪುರದಲ್ಲಿ ಮೂವರು ನಕಲಿ ಡಾಕ್ಟರ್ ಗಳ ಕ್ಲಿನಿಕ್ ಗಳ ಮೇಲೆ ದಾಳಿ ನಡೆಸಿದ್ದಾರೆ. ವೈದ್ಯ ಪದವಿ ಪಡೆಯದೇ ನಕಲಿ ಪ್ರಮಾಣ ಪತ್ರವಿಟ್ಟುಕೊಂಡು ಇರವರು ಕ್ಲಿನಿಕ್ ನಡೆಸುತ್ತಿದ್ದರು ಎಂಬ ದೂರಿನ ಅನ್ವಯ ದಾಳಿ ನಡೆಸಲಾಗಿದೆ. ಒಬ್ಬ ನಕಲಿ ಡಾಕ್ಟರ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಇಬ್ಬರು ಪರಾರಿಯಾಗಿದ್ದಾರೆ.
ಶಿಕ್ಷಕ ನೇಣಿಗೆ ಶರಣು : ದಾವಣಗೆರೆ ಯಲ್ಲಮ್ಮ ಬಡಾವಣೆ ನಿವಾಸಿಯಾದ ಸೋಮಶೇಖರ್ ಎಂಬುವವರು ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಸರ್ಕಾರಿ ಶಾಲೆವೊಂದರಲ್ಲಿ ಶಿಕ್ಷಕರಾಗಿದ್ದ ಇವರು,ಚಿತ್ರದುರ್ಗದ ಬಸವೇಶ್ವರರ ಯಾತ್ರಿ ನಿವಾಸ ಲಾಡ್ಜ್ ನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂದ್ದಾರೆ.
ವಿದ್ಯುತ್ ಸ್ಪರ್ಶ ವ್ಯಕ್ತಿ ಸಾವು : ವಿದ್ಯತ್ ಕಂಬದ ಮೇಲೆ ದುರಸ್ತಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆಸ್ಮಿಕವಾಗಿ ವಿದ್ಯುತ್ ಶಾಕ್ ತಗುಲಿ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ತುಮಕೂರಿನ ಬಸ್ ನಿಲ್ದಾಣದ ಬಳಿ ನಡೆದಿದೆ. ಮೃತಪಟ್ಟವರನ್ನು ಕೆ.ಸದ್ದಾಂ (25) ಎಂದು ಗುರುತಿಸಲಾಗಿದ್ದು, ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications