ಚಿತ್ರಗಳಲ್ಲಿ: ಸಿದ್ದು ಪ್ರಮಾಣ ವಚನ ಸಮಾರಂಭ
ಬೆಂಗಳೂರು, ಮೇ.13: ಕರ್ನಾಟಕದ 28ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಸತ್ಯದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಪ್ರತಿಜ್ಞಾ ವಿಧಿ ಬೋಧಿಸಿದರು.
ಸುಮಾರು 9 ವರ್ಷಗಳ ನಂತರ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ಹಿಡಿಯುತ್ತಿದೆ. ವಿಧಾನಸೌಧದ ಮುಂಭಾಗ ಹಾಗೂ ರಾಜಭವನ ಹೊರತುಪಡಿಸಿ, ಬೇರೆಡೆ ಮುಖ್ಯಮಂತ್ರಿಯ ಪದಗ್ರಹಣ ಸಮಾರಂಭ ನಡೆದಿದ್ದು ಈ ಬಾರಿ ವಿಶೇಷವಾಗಿತ್ತು. ಕಂಠೀರವ ಕ್ರೀಡಾಂಗಣದಲ್ಲಿ ಜನ ಜಾತ್ರೆಯೇ ನೆರೆದಿತ್ತು.
ಸಮಾರಂಭ ಮುಗಿಯುತ್ತಿದ್ದಂತೆ ಸಿದ್ದು ಅಭಿಮಾನಿಯೊಬ್ಬರು ಕಾಲ್ತುಳಿತಕ್ಕೆ ಸಿಲುಕಿ ಗಾಯಗೊಂಡು ಮಲ್ಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ ದುರ್ಘಟನೆಯೂ ನಡೆಯಿತು. ಕೇಂದ್ರ ಸಚಿವ ವೀರಪ್ಪ ಮೋಯ್ಲಿ, ಸಿಎಂ ಸಿದ್ದರಾಮಯ್ಯ ಅವರು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಬಂದಿದ್ದಾರೆ.
ಸಿಎಂ ಕುಟುಂಬ ಹಾಜರಿ: ನೂತನ ಮುಖ್ಯಮಂತ್ರಿ ಪದಗ್ರಹಣ ಸಮಾರಂಭಕ್ಕೆ ಸಿದ್ದರಾಮಯ್ಯನವರ ಕುಟುಂಬ ಹಾಗೂ ಬಂಧುವರ್ಗ ಸಾಕ್ಷಿಯಾಯಿತು. ಪತ್ನಿ ಪಾರ್ವತಿ, ಪುತ್ರರಾದ ರಾಕೇಶ್, ಡಾ.ಯತೀಂದ್ರ ಕಾರ್ಯಕ್ರಮದಲ್ಲಿ ಹಾಜರಿದ್ದರು.ಪದಗ್ರಹಣ ಸಮಾರಂಭದ ವೇದಿಕೆ ಸಮೀಪವೇ ಕುಟುಂಬ ವರ್ಗದವರಿಗೆ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಸಿದ್ದರಾಮಯ್ಯ ಅವರು ಗರಿ-ಗರಿ ರೇಷ್ಮೆ ಪಂಚೆ, ರೇಷ್ಮೆ ಶರ್ಟ್ ಧರಿಸಿ ವೇದಿಕೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಚಿತ್ರಗಳು ನಿಮಗಾಗಿ ಇಲ್ಲಿದೆ...

ಚಿತ್ರಗಳಲ್ಲಿ: ಸಿದ್ದು ಆದ್ರಪ್ಪ ಸಿಎಂ
ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಜೊತೆ ಸಿದ್ದರಾಮಯ್ಯ ಆತ್ಮೀಯ ಅಪ್ಪುಗೆ

ಚಿತ್ರಗಳಲ್ಲಿ: ಸಿದ್ದು ಆದ್ರಪ್ಪ ಸಿಎಂ
ನಾನು ಹೇಳಿದ ಹಾಗೆ ಹೇಳಿ ಆಯ್ತಾ ಎಂದು ಸಿದ್ದರಾಮಯ್ಯ ಅವರಿಗೆ ಹೇಳುತ್ತಿರುವ ರಾಜ್ಯಪಾಲ ಹಂಸರಾಜ್ ಭಾರಧ್ವಾಜ್

ಚಿತ್ರಗಳಲ್ಲಿ: ಸಿದ್ದು ಆದ್ರಪ್ಪ ಸಿಎಂ
ಶಾಸಕರು, ಅಭಿಮಾನಿಗಳಿಂದ ಸಿದ್ದರಾಮಯ್ಯ ಅವರಿಗೆ ಹಾರ ಅರ್ಪಣೆ

ಚಿತ್ರಗಳಲ್ಲಿ: ಸಿದ್ದು ಆದ್ರಪ್ಪ ಸಿಎಂ
ಕಂಠೀರವ ಸ್ಟೇಡಿಯಂನಲ್ಲಿ ನೆರೆದಿದ್ದ ಅಭಿಮಾನಿಗಳತ್ತ ಕೈ ಬೀಸುತ್ತಿರುವ ಸಿದ್ದರಾಮಯ್ಯ

ಚಿತ್ರಗಳಲ್ಲಿ: ಸಿದ್ದು ಆದ್ರಪ್ಪ ಸಿಎಂ
ಕಂಠೀರವ ಸ್ಟೇಡಿಯಂನಲ್ಲಿ ನೆರೆದಿದ್ದ ಅಭಿಮಾನಿಗಳತ್ತ ಕೈ ಬೀಸುತ್ತಿರುವ ಸಿದ್ದರಾಮಯ್ಯ

ಚಿತ್ರಗಳಲ್ಲಿ: ಸಿದ್ದು ಆದ್ರಪ್ಪ ಸಿಎಂ
ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲ ಹಂಸರಾಜ್ ಭಾರಧ್ವಾಜ್ ಅವರಿಂದ ಪ್ರತಿಜ್ಞಾ ವಿಧಿ ಭೋದನೆ

ಚಿತ್ರಗಳಲ್ಲಿ: ಸಿದ್ದು ಆದ್ರಪ್ಪ ಸಿಎಂ
ಸಿದ್ದರಾಮಯ್ಯ ರಾಜಕೀಯ ಜೀವನ ಸಂಕ್ಷಿಪ್ತ ಚಿತ್ರಣ












Click it and Unblock the Notifications