ಫೇಸ್ ಬುಕ್ ರಗಳೆಯಿಂದ ಕೆಲಸ ಕಳೆದುಕೊಂಡ ಭೂಪ

ಜೋ ಲೊಬಾಟೋ ಎಂಬ ಟೆಕ್ಕಿಯೇ ಕೆಲಸ ಕಳೆದುಕೊಂಡವ. ಮೊದಮೊದಲು ಆತ ಸೂಪರ್ ವೈಸರ್ ಗೆ ತನ್ನ ದೇಹಸ್ಥಿತಿ ಬಗ್ಗೆ ವರ್ಣಿಸುತ್ತಾ ಹೊಟ್ಟೆಯಲ್ಲಿ ಯಾರೋ ಉದ್ಹಾಗಾಂಗುತ್ತಿದೆ' ಎಂದೆಲ್ಲ ಅಲವತ್ತುಕೊಂಡಿದ್ದಾನೆ. ಆದರೆ ಆತನ ಮೇಲಧಿಕಾರಿ ಅದನ್ನು ನಿರ್ಲಕ್ಷಿಸುತ್ತಾ ಅಂಥಾದ್ದೇನೂ ಇಲ್ಲ. ತೆಪ್ಗೇ ಹೋಗಿ ಕೆಲ್ಸ ಮಾಡೋಗು ಎಂದು ಹೇಳಿದ್ದಾನೆ.
ಇದರಿಂದ ನಿರಾಶೆಗೊಂಡ ಟೆಕ್ಕಿ ಜೋ ಲೊಬಾಟೋ ತನ್ನ ಕಂಪ್ಯೂಟರ್ ಬಳಿ ಬಂದವನೇ ತನ್ನ ಆರೋಗ್ಯದ ಬಗ್ಗೆ ಅನುಕಂಪ ತೋರದ ಸೂಪರ್ ವೈಸರ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಅದನ್ನೇ ಫೇಸ್ ಬುಕ್ ನಲ್ಲಿ ಒಂಬತ್ತು ವಾಕ್ಯಗಳಲ್ಲಿ ಭಟ್ಟಿ ಇಳಿಸಿದ್ದಾನೆ.
'ಏನಂದುಕೊಂಡುಬಿಟ್ಟಿದ್ದಾರೆ ಅವರು. ಮನುಷ್ಯರೆಂದರೆ ಯಂತ್ರಗಳ ಅಂದುಕೊಂಡುಬಿಟ್ಟಿದ್ದಾರಾ? ಮನುಷ್ಯ ಕಾಯಿಲೆ ಬೀಳೋದೇ ಇಲ್ವಾ?' ಎಂದೆಲ್ಲಾ ಯದ್ವಾತದ್ವಾ ತನ್ನ ಸಿಟ್ಟು ಸೆಡವನ್ನು ಅಕ್ಷರ ರೂಪದಲ್ಲಿ ಹೊರಹಾಕಿದ್ದಾನೆ. ಅಷ್ಟೇ...
ಆ ಫೇಸ್ ಬುಕ್ ಗೋಡೆಬರಹವು ಟೆಕ್ಕಿ ಜೋ ಸಹೋದ್ಯೋಗಿ/ಸ್ನೇಹಿತನ ಕಣ್ಣಿಗೆ ಬಿದ್ದಿದೆ. ಆತ ಅದನ್ನು ಪ್ರಾಂಪ್ಟ್ ಆಗಿ ಬಾಸ್ ಗಮನಕ್ಕೆ ತಂದಿದ್ದಾನೆ. ಅದನ್ನು ಗಮನಿಸಿದ ಬಾಸ್, ಟೆಕ್ಕಿ ಜೋನದ್ದು 'ಸಂಪೂರ್ಣ ಅಸಭ್ಯ ವರ್ತನೆ' ಎಂದು ಷರಾ ಬರೆದು, ಪಿಂಕ್ ಸ್ಲಿಪ್ ನೀಡಿದ್ದಾನೆ.












Click it and Unblock the Notifications