• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೇಂಟ್ ಮಾರ್ಥಾಸಿಗೂ ಬಂತು ನಾರಾಯಣ ಹೃದಯಾಲಯ

By Srinath
|

ಬೆಂಗಳೂರು, ಮೇ 10: ಹೃದ್ರೋಗಿಗಳಿಗೆ ಇಲ್ಲೊಂದು ಸಂತಸದ ಸುದ್ದಿಯಿದೆ. ತುರ್ತು ಸನ್ನಿವೇಶದಲ್ಲಿ ಇನ್ನು ಮುಂದೆಹೊಸೂರು ರಸ್ತೆಯಲ್ಲಿರುವ ನಾರಾಯಣ ಹೃದಯಾಲಯ ಕೇಂದ್ರಕ್ಕೆ ದೌಡಾಯಿಸಬೇಕಿಲ್ಲ. ಏಕೆಂದರೆ, ಇಲ್ಲೇ ರಾಜಧಾನಿಯ ಹೃದಯ ಭಾಗದಲ್ಲಿ ಹತ್ತಾರು ದಶಕಗಳಿಂದ ಸದ್ದಿಲ್ಲದೆ ಜನಸಾಮಾನ್ಯರಿಗೆ ಅನುಮಪ ಸೇವೆ ಒದಗಿಸುತ್ತಿರುವ ಸೇಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿಯೂ 'ನಾರಾಯಣ ಹೃದಯಾಲಯ ಚಿಕಿತ್ಸೆ ಕೇಂದ್ರ' ಕಾರ್ಯನಿರ್ವಹಿಸಲಾರಂಭಿಸಿದೆ.


ಬೆಂಗಳೂರು ನಗರದ ಆರ್ಚ್ ಬಿಷಪ್‌ ಮುಖ್ಯಸ್ಥ ರೆವರೆಂಡ್ ಡಾ. ಬರ್ನಾರ್ಡ್ ಮೋರಿಸ್ ಅವರು ಸೇಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ನಾರಾಯಣ ಹೃದಯ ಕೇಂದ್ರವನ್ನು ಗುರುವಾರ ಉದ್ಘಾಟಿಸಿದ್ದಾರೆ.

ತಮ್ಮ ನಾರಾಯಣ ಹೃದಯಾಲಯ ಚಿಕಿತ್ಸಾ ಘಟಕವೊಂದು ನಗರದ ಸೇಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿಯೂ ಕಾರ್ಯಗತವಾಗಿದೆ ಎಂದು ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ. ದೇವಿ ಪ್ರಸಾದ್ ಶೆಟ್ಟಿ ಅವರು ತಿಳಿಸಿದ್ದಾರೆ. ನಾರಾಯಣ ಹೃದಯಾಲಯದ ವೈದ್ಯಕೀಯ ತಂಡವೇ ಈ ಕೇಂದ್ರದಲ್ಲಿ ಹೃದಯ ರೋಗಗಳಿಗೆ ಸಂಬಂಧಿಸಿದಂತೆ, ನುರಿತ ತಜ್ಞರ ಸೇವೆಯನ್ನು ಒದಗಿಸಲಿದೆ. ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡಲಿದೆ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಪ್ರತಿ ವರ್ಷ 5 ಲಕ್ಷ ಜನರಿಗೆ ಹೃದಯದ ಶಸ್ತ್ರಚಿಕಿತ್ಸೆ ಅಗತ್ಯವಿರುತ್ತದೆ. ಆದರೆ, ಕೇವಲ ಒಂದು ಲಕ್ಷ ಜನರು ಮಾತ್ರ ಆಪರೇಶನ್ ಮಾಡಿಸಿಕೊಳ್ಳುತ್ತಿದ್ದಾರೆ. ಈ ಅಂಕಿ ಅಂಶಗಳನ್ನು ಗಮನಿಸಿರುವ ನಾರಾಯಣ ಹೆಲ್ತ್ ಹೆಚ್ಚು ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಶ್ರಮಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಶೇ. 50ರಷ್ಟು ಸಾವುಗಳು ಹೃದಯಾಘಾತದಿಂದ ಸಂಭವಿಸುತ್ತವೆ. ಹೃದಯಾಘಾತದ ಸಮಯದಲ್ಲಿ ಸರಿಯಾದ ಚಿಕಿತ್ಸೆ ನೀಡುವುದರಿಂದ ಪ್ರಾಣಾಪಾಯವನ್ನು ತಪ್ಪಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ನಾರಾಯಣ ಹೃದಯ ಕೇಂದ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಆರೋಗ್ಯ ರಕ್ಷಣೆ ಮಾಡುವ ಪ್ರಯತ್ನದಲ್ಲಿದೆ ಎಂದು ಡಾ. ದೇವಿ ಪ್ರಸಾದ್ ಶೆಟ್ಟಿ ಹೇಳಿದ್ದಾರೆ.

ಸೇಂಟ್ ಮಾರ್ಥಾಸ್ ಆಸ್ಪತ್ರೆಯ ಅಧ್ಯಕ್ಷೆ ಪ್ರಮೀಳಾ ಅವರು ಇದೇ ಸಂದರ್ಭದಲ್ಲಿ ಮಾತನಾಡಿ, ಕಳೆದ 127 ವರ್ಷಗಳಿಂದ ಮಾರ್ಥಾಸ್ ಆಸ್ಪತ್ರೆಯು ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿದೆ. ನಾರಾಯಣ ಹೃದಯಾಲಯದ ಜತೆಗೂಡಿ ಹೃದಯ ಚಿಕಿತ್ಸಾ ಕೇಂದ್ರ ಆರಂಭಿಸಿರುವುದು ಆಸ್ಪತ್ರೆಯ ಮತ್ತೊಂದು ಮಹತ್ವದ ಹೆಜ್ಜೆ ಎಂದು ಹೇಳಿದರು.

The cardiac centre at St Martha's Heart Centre is equipped to offer services for outpatients and inpatients. Services such as pediatric cardiology, ECG, TMT/ stress test, Dobutamine stress test, echo cardiography, holter monitoring and health checkup packages are being offered for outpatients.

Intensive care services such as Coronary Care Unit, Cath lab, cardiac cathererization, coronary angiography, coronary angioplasty, electrophysiology study, radio frequency ablation, pacemaker implantation, device closures are being offered for inpatients.

Narayana Health is currently managing heart centres in MS Ramaiah and Chinmaya Mission Hospital in Bangalore and three more in rest of Karnataka at Davengere, Kolar and Dharwad. Narayana Heart Centres are also coming up in Kuppam, Bijapur, Tumkur and Chitradurga.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು heart ಸುದ್ದಿಗಳುView All

English summary
Narayana Hrudayalaya heart centre at St Martha’s Hospital. Narayana Health (Narayana Hrudayalaya), today announced the establishment of its third Heart Centre in Bangalore at St Martha’s Hospital. These centres managed by Narayana Health, provide expertise to hospitals which require specialist interventions in cardiology. The Heart Centre is part of Narayana Health’s larger initiative of making quality healthcare accessible to all.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more