ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರವಾಡ ಜಿಲ್ಲೆಯಲ್ಲಿ ಪೇಡ ತಿಂದ ಕಾಂಗ್ರೆಸ್

|
Google Oneindia Kannada News

Dharwad
ಧಾರವಾಡ, ಮೇ 10 : ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದ್ದರೂ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಅವರ ತವರು ಜಿಲ್ಲೆಯಲ್ಲಿ ಬಿಜೆಪಿ ನಿರೀಕ್ಷಿತ ಸಾಧನೆ ಮಾಡಿಲ್ಲ. ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ನಾಲ್ಕು ಸ್ಥಾನಗಳನ್ನು ಪಡೆದು ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಬಿಜೆಪಿ ಜಿಲ್ಲೆಯಲ್ಲಿ ಎರಡು ಸ್ಥಾನಗಳಲ್ಲಿ ಮಾತ್ರ ಜಯಗಳಿಸಿದೆ. ಅದರಲ್ಲಿ ಒಂದು ಸ್ಥಾನ ಮುಖ್ಯಮಂತ್ರಿ ಆಗಿದ್ದ ಜಗದೀಶ್ ಶೆಟ್ಟರ್ ಪ್ರತಿನಿಧಿಸಿದ್ದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರ ಎಂಬುದು ಬಿಜೆಪಿ ಪಾಲಿಗೆ ಸಂತಸದ ಸಂಗತಿ. ಶೆಟ್ಟರ್ ಅವರಿಗೆ ಗೆದ್ದಿದ್ದೇನೆಂಬ ಸಮಾಧಾನ ಬಿಟ್ಟರೆ ಜಿಲ್ಲೆಯಲ್ಲಿ ಪಕ್ಷ ಧೂಳೀಪಟವಾಗಿರುವುದು ನೋವು ಉಂಟುಮಾಡಿದೆ.

2008ರ ಚುನಾವಣೆಯಲ್ಲಿ ಆರು ಕ್ಷೇತ್ರಗಳಲ್ಲಿ ಅರಳಿದ್ದ ಕಮಲ ಈ ಬಾರಿ ಎರಡಕ್ಕೆ ಸೀಮಿತವಾಗಿದೆ. ಕೇವಲ ಒಂದು ಸ್ಥಾನ ಪಡೆದಿದ್ದ ಕಾಂಗ್ರೆಸ್ ನಾಲ್ಕು ಸ್ಥಾನ ಗೆಲ್ಲುವ ಮೂಲಕ ಸರಕಾರ ರಚನೆಗೆ ಜಿಲ್ಲೆಯ ಕೊಡುಗೆ ನೀಡಿದೆ.

ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಹಾಲಿ ಶಾಸಕಿ ಸೀಮಾ ಮಸೂತಿಯವರನ್ನು ನಾಲ್ಕನೇ ಸ್ಥಾನಕ್ಕಿಳಿಸಿ ಠೇವಣಿ ಕಳೆಯುವ ಮೂಲಕ ಮತದಾರರು ಬಿಜೆಪಿ ವಿರುದ್ದ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಜೆಡಿಎಸ್ ನವಲಗುಂದದಲ್ಲಿ ಜಯ ಸಾಧಿಸುವ ಮೂಲಕ ಖಾತೆ ತೆರೆದಿದೆ.

ಧಾರವಾಡ ಜಿಲ್ಲೆ ವಿಧಾನಸಭಾ ಕ್ಷೇತ್ರಗಳಲ್ಲಿ : ಗೆದ್ದವರು, ಸೋತವರ ವಿವರ ಹೀಗಿದೆ:

ಕ್ಷೇತ್ರ ಗೆದ್ದವರು ಪಕ್ಷ ಪಡೆದ ಮತಗಳು ಸೋತವರು ಪಕ್ಷ
ನವಲಗುಂದ ಎನ್.ಎಚ್.ಕೋನರೆಡ್ಡಿ
ಜೆಡಿಎಸ್
44,260 ಶಂಕರ್ ಪಾಟೀಲ್
ಬಿಜೆಪಿ
41,524
ಕುಂದಗೋಳ
ಸಿ.ಎಸ್.ಶಿವಳ್ಳಿ
ಕಾಂಗ್ರೆಸ್
55,076
ಚಿಕ್ಕನಗೌಡ
ಕೆಜೆಪಿ
29,476
ಧಾರವಾಡ ಗ್ರಾಮೀಣ
ವಿನಯ್ ಕುಲಕರ್ಣಿ
ಕಾಂಗ್ರೆಸ್
53,453
ಅಮೃತ ದೇಸಾಯಿ
ಜೆಡಿಎಸ್
35,133
ಹುಬ್ಬಳ್ಳಿ ಧಾರವಾಡ ಪಶ್ಚಿಮ
ಅರವಿಂದ ಬೆಲ್ಲದ್
ಬಿಜೆಪಿ
42,003
ಎಸ್.ಆರ್.ಮೋರೆ
ಕಾಂಗ್ರೆಸ್
30,821
ಹುಬ್ಬಳ್ಳಿ ಧಾರವಾಡ ಕೇಂದ್ರ
ಜಗದೀಶ್ ಶೆಟ್ಟರ್ ಬಿಜೆಪಿ
57,492
ಡಾ.ಮಹೇಶ್
ಕಾಂಗ್ರೆಸ್
40,192
ಹುಬ್ಬಳ್ಳಿ ಧಾರವಾಡ ಪೂರ್ವ
ಪ್ರಸಾದ್ ಅಬ್ಬಯ್ಯ
ಕಾಂಗ್ರೆಸ್
42,353
ವೀರಭದ್ರಪ್ಪ ಹಾಲಹರವಿ
ಬಿಜೆಪಿ
28,831
ಕಲಘಟಗಿ ಸಂತೋಷ್ ಲಾಡ್
ಕಾಂಗ್ರೆಸ್
76,802
ನಿಂಬಣ್ಣನವರ
ಕೆಜೆಪಿ
31,141
English summary
Karnataka assembly Election Results. Here is complete information about winners and losers with their constituencies and party of Dharwad district. In Dharwad district BJP get only Two seats. Congress win 6 seats in dist. Dharwad is native district for Former CM Jagadish Shettar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X