ಉಗ್ರರಿಂದ ಪಾಕ್ ಮಾಜಿ ಪ್ರಧಾನಿ ಪುತ್ರನ ಅಪಹರಣ

ಮುಲ್ತಾನ್ ನಗರದಲ್ಲಿ ಇಂದು ಮಧ್ಯಾಹ್ನ ಹೈದರ್ ಗಿಲಾನಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾಗ ಕಾರಿನಲ್ಲಿ ಬಂದ ಅಪರಿಚಿತ ಬಂದೂಕುಧಾರಿಗಳು ಹೈದರ್ ಬೆಂಬಲಿಗರತ್ತ ಯದ್ವಾತದ್ವಾ ಗುಂಡುಹಾರಿಸಿದ್ದಾರೆ.
ಅದೇ ವೇಳೆ, ಹೈದರ್ ಗಿಲಾನಿಯ ಆಪ್ತರ ಮೇಲೆ ಗುಂಡಿನ ಮಳೆಗರೆದು ಅವರನ್ನು ಹತ್ಯೆ ಮಾಡಿದ್ದಾರೆ. ನಂತರ ಹೈದರನನ್ನು ಆಗುಂತಕರು ಅಪಹರಿಸಿದ್ದಾರೆ. ಘಟನೆಯ ವೇಳೆ ಯೂಸುಫ್ ರಾಜಾ ಗಿಲಾನಿ ಅವರ ಮತ್ತೊಬ್ಬ ಪುತ್ರ ಸಹ ಸಭೆಯಲ್ಲಿ ಪಾಲ್ಗೊಂಡಿದ್ದ.
ಗುಂಡಿನ ದಾಳಿಯಲ್ಲಿ ಇನ್ನೂ ಐದು ಮಂದಿ ಗಾಯಗೊಂಡಿದ್ದಾರೆ. ಹೈದರ್ ಗಿಲಾನಿಯ ಅಪಹರಣಕ್ಕೆ ಯಾವುದೇ ಸಂಘಟನೆ ಹೊಣೆ ಹೊತ್ತಿಲ್ಲವಾದರೂ ನಿಷೇಧಿತ Tehrik-e-Taliban Pakistan ಇತ್ತೀಚೆಗೆ ಈ ಸಂಬಂಧ ಎಚ್ಚರಿಕೆ ರವಾನಿಸಿತ್ತು.
ಗಿಲಾನಿಯ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಮತ್ತು ಆವಾಮಿ ನ್ಯಾಷನಲ್ ಪಾರ್ಟಿಯಂತಹ ಜಾತ್ಯತೀತ ಪಕ್ಷಗಳನ್ನು ಗುರಿಯಾಗಿಸಿಕೊಂಡು ಚುನಾವಣೆಗೂ ಮುನ್ನ ದಾಳಿ ನಡೆಸುವುದಾಗಿ ಘೋಷಿಸಿತ್ತು.












Click it and Unblock the Notifications