ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ ಕೆಳಗೆ ತಳ್ಳಿ 2ನೇ ಸ್ಥಾನಕ್ಕೆ ಕಾಗ್ನಿಜೆಂಟ್

By Mahesh
|
Google Oneindia Kannada News

Cognizant surpasses Infosys to become 2nd largest IT firm in terms of revenues
ಬೆಂಗಳೂರು, ಮೇ.9 : ದೇಶದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿದ್ದ ಇನ್ಫೋಸಿಸ್ ಈಗ ಮೂರನೇ ಸ್ಥಾನಕ್ಕೆ ಕುಸಿದಿದೆ. ಮಾರ್ಚ್ ತ್ರೈಮಾಸಿಕದ ನಂತರ ಭಾರತದಲ್ಲಿ ಕಾಗ್ನಿಜೆಂಟ್ ಹೆಚ್ಚಿನ ಆದಾಯ ಗಳಿಸಿ ಇನ್ಫೋಸಿಸ್ ಸಂಸ್ಥೆಯನ್ನು ಕೆಳಕ್ಕೆದೂಡಿದೆ.

ಇನ್ಫೋಸಿಸ್ ಆರಂಭವಾದ 13 ವರ್ಷಗಳ ನಂತರ ಕಾಗ್ನಿಜೆಂಟ್ ಶುರುವಾಗಿದ್ದು ಎಂಬುದನ್ನು ಮರೆಯುವಂತಿಲ್ಲ. ಈಗ ಇನ್ಫೋಸಿಸ್ ಅನ್ನು ಮೀರಿ ಆಫ್ ಶೋರ್ ಸೆಂಟ್ರಿಕ್ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಪೈಕಿ ಎರಡನೇ ಸ್ಥಾನಕ್ಕೆ ಕಾಗ್ನಿಜೆಂಟ್ ಏರಿದೆ.

ನಾಸ್ಡಾಕ್ ಪಟ್ಟಿಯಿಂದ ಹೊರ ಬಿದ್ದಿದ್ದ ಇನ್ಫೋಸಿಸ್ ಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕಳೆದ ನಾಲ್ಕು ತ್ರೈಮಾಸಿಕದಲ್ಲಿ ಕಾಂಗ್ನಿಜೆಂಟ್ ಸುಮಾರು 7.655 ಬಿಲಿಯನ್ ಯುಎಸ್ ಡಿ ಆದಾಯ ಗಳಿಸಿದೆ. ಇನ್ಫೋಸಿಸ್ ಸಂಸ್ಥೆಗೆ ಹೋಲಿಸಿದರೆ ಸುಮಾರು 255 ಮಿಲಿಯನ್ ಯುಎಸ್ ಡಾಲರ್ ಅಧಿಕ ಆದಾಯವನ್ನು ಕಾಗ್ನಿಜೆಂಟ್ ಗಳಿಸಿದೆ. ಇಷ್ಟೇ ಆಗಿದ್ದರೆ ಪರ್ವಾಗಿಲ್ಲ.

ಅನೇಕ ಕಾರ್ಯ ನಿರ್ವಹಣಾ ವಿಧಾನಗಳಲ್ಲೂ ಕಾಗ್ನಿಜೆಂಟ್ ವಿರುದ್ಧ ಇನ್ಫೋಸಿಸ್ ಸೋಲು ಕಂಡಿದೆ. ಜನವರಿ-ಡಿಸೆಂಬರ್ ಆರ್ಥಿಕ ವರ್ಷ ಮಾದರಿಯನ್ನು ಕಾಗ್ನಿಜೆಂಟ್ ಅನುಸರಿಸುತ್ತದೆ. ಉದಾಹರಣೆಗೆ ಕಾಗ್ನಿಜೆಂಟ್ ನ ಮಾರ್ಚ್ ತ್ರೈಮಾಸಿಕದಲ್ಲಿ ತ್ರೈಮಾಸಿಕದಿಂದ ತ್ರೈಮಾಸಿಕ ಆದಾಯ ಪ್ರಗತಿ ಪ್ರಮಾಣ ಶೇ 3.7 ರಷ್ಟಿದ್ದು, ಐಟಿ ಸಂಸ್ಥೆಗಳಾದ ಟಿಸಿಎಸ್, ವಿಪ್ರೋ, ಎಚ್ ಸಿಎಲ್ ಟೆಕ್ ಗೆ ಹೋಲಿಸಿದರೆ ಉತ್ತಮವಾಗಿದೆ.

ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಕಾಗ್ನಿಜೆಂಟ್ ನ ಆದಾಯದಲ್ಲಿ ಶೇ 18.1 ರಷ್ಟು ಪ್ರಗತಿ ಕಂಡಿದೆ. 2012ರಲ್ಲಿ 1.71 ಬಿಲಿಯನ್ ಯುಎಸ್ ಡಿ ಇದ್ದ ಆದಾಯ 2.02 ಬಿಲಿಯನ್ ಯುಎಸ್ ಡಿ ಆಗಿದೆ. ಸಂಸ್ಥೆಯ ನಿವ್ವಳ ಆದಾಯ ಕಳೆದ ವರ್ಷಕ್ಕೆ ಹೋಲಿಸಿದರೆ 243.7 ಮಿಲಿಯನ್ ಯುಎಸ್ ಡಿ ಇದ್ದದ್ದು ಈಗ 284.2 ಮಿಲಿಯನ್ ಯುಎಸ್ ಡಿ ಆಗಿದೆ. ನಾಸ್ಯಾಕಂ ನೀಡಿದ್ದ ಶೇ 12-14ರಷ್ಟು ಅಂದಾಜು ಕೈಗಾರಿಕಾ ಪ್ರಗತಿ ದಾಟಿ ಶೇ 17ರಷ್ಟು ಪ್ರಗತಿಯನ್ನು ಕಾಗ್ನಿಜೆಂಟ್ ಸಾಧಿಸಿದೆ.

2013ರಲ್ಲಿ ಒಟ್ಟಾರೆ 8.6 ಬಿಲಿಯನ್ ಯುಎಸ್ ಡಾಲರ್ ಆದಾಯ ನಿರೀಕ್ಷೆ ಹೊಂದಿದೆ ಎಂದು ಸಿಇಒ ಫ್ರಾನ್ಸಿಸ್ಕೋ ಡಿ ಸೋಜ ಹೇಳಿದ್ದಾರೆ. ಕಾಗ್ನಿಜೆಂಟ್ ಬೆಳವಣಿಗೆ ಇನ್ಫೋಸಿಸ್ ನಿದ್ದೆಗೆಡಸಿರುವುದಂತೂ ನಿಜ.

English summary
Nasdaq listed Cognizant Technology Solutions, which came into existence some 13 years after Infosys, surpassed the latter to become second largest IT company of India in terms of revenues at the end of March quarter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X