ತಮಗೇ ಬಹುಮತ ಖಚಿತ ಅಂತಾವೆ ಪಕ್ಷಗಳೆಲ್ಲವು!

ಈ ಚುನಾವಣೆಯ ಫಲಿತಾಂಶ ಮುಂಬರುವ ಲೋಕಸಭೆ ಚುನಾವಣೆಯ ಮೇಲೂ ಪ್ರಭಾವ, ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ಇಡೀ ದೇಶದ ಕಣ್ಣು ಕರ್ನಾಟಕ ಚುನಾವಣೆ ಫಲಿತಾಂಶದ ಮೇಲೆ ನೆಟ್ಟಿದೆ. ಮೇ 8ರಂದು 8 ಗಂಟೆಗೆ ಮತಎಣಿಕೆ ಆರಂಭವಾಗುತ್ತಿದ್ದಂತೆ ಒಂದೊಂದೇ ಪಕ್ಷದ ಬಂಡವಾಳವನ್ನು ಮತಪ್ರಭು ಬಯಲು ಮಾಡಲಿದ್ದಾನೆ. ಈ ಎಲ್ಲ ವಿವರಗಳಿಗೆ ಒನ್ಇಂಡಿಯಾ ಕನ್ನಡ ನೋಡುತ್ತಿರಿ.
ನಿರೀಕ್ಷೆಯಂತೆ ಎಲ್ಲ ಪಕ್ಷಗಳು ತಮ್ಮ ಪಕ್ಷವೇ ಬಹುಮತ ಪಡೆಯಲಿದೆ ಎಂದು ಎದೆಯುಬ್ಬಿಸಿ ಹೇಳುತ್ತಿವೆ. ಅನೇಕ ಚುನಾವಣಾ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಲಭಿಸಲಿದೆ ಎಂಬ ವರದಿಯನ್ನು ನೀಡಿದ್ದರೂ, ಬಿಜೆಪಿ, ಜೆಡಿಎಸ್, ಕೆಜೆಪಿ ಪಕ್ಷಗಳು ಆ ಸಮೀಕ್ಷೆಗಳ ವರದಿಗಳನ್ನು ಕಸದಬುಟ್ಟಿಗೆ ಎಸೆದಿವೆ. ಸಮೀಕ್ಷೆ ವರದಿಗಳೆಲ್ಲ ಹೇಳುತ್ತಿರುವುದು ಸುಳ್ಳು, ಮೇ 8ರಂದು ಏನಾಗುತ್ತೋ ನೋಡಿರಿ ಎಂದು ಹೇಳುತ್ತಿದ್ದಾರೆ.
ಅಚ್ಚರಿಯ ಸಂಗತಿಯೆಂದರೆ, ಒನ್ಇಂಡಿಯಾ ಕನ್ನಡದಲ್ಲಿ ಈ ಸಮೀಕ್ಷೆ ಕುರಿತಂತೆ ಕೇಳಲಾದ ಪ್ರಶ್ನೆಗೆ ಕೂಡ ಓದುಗರು ಇದೇ ಬಗೆಯ ಉತ್ತರ ನೀಡಿದ್ದಾರೆ. ಶೇ. 28ರಷ್ಟು ನೆಟ್ಟಿಗರು ಸಮೀಕ್ಷೆಯನ್ನು ನಂಬಲು ಸಾಧ್ಯವಿಲ್ಲ ಎಂದು ಹೇಳಿದರೆ, ಶೇ.23ರಷ್ಟು ಓದುಗರು ಸಮೀಕ್ಷೆ ಸರಿ ಎಂದು ಹೇಳಿದ್ದರೆ, ಶೇ.49ರಷ್ಟು ನೆಟ್ಟಿಗರು ಮೇ 8ರವರೆಗೆ ಕಾದು ನೋಡೋಣ ಎಂಬ ಉತ್ತರ ನೀಡಿದ್ದಾರೆ.
ಈ ಎಲ್ಲ ಸಮೀಕ್ಷೆಗಳ ಮೇಲೆ ಅಪಾರ ಭರವಸೆ ಇಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು, "ಕರ್ನಾಟಕದ ಜನತೆ ಸಮ್ಮಿಶ್ರ ಸರಕಾರದ ಹಣಬರಹ ಏನೆಂಬುದನ್ನು ಕೆಲ ವರ್ಷಗಳಿಂದ ನೋಡಿದ್ದಾರೆ. ಅವರಿಗೆ ಸಮರ್ಥವಾದ, ಸ್ಥಿರವಾಗಿರುವ ಏಕಪಕ್ಷದ ಸರಕಾರ ಬೇಕಾಗಿದೆ. ಕಾಂಗ್ರೆಸ್ ಈ ಬಾರಿ ಜಯಭೇರಿ ಬಾರಿಸಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ಸಿಗೆ 113ರ ಸಂಖ್ಯೆ ಒಲಿಯುವುದಾ? ಸಾಧ್ಯವೇ ಇಲ್ಲ ಅನ್ನುತ್ತಿದ್ದಾರೆ ಇತರ ಪಕ್ಷಗಳ ನಾಯಕರು. ಈಗ ನಡೆಸಲಾಗಿರುವ ಎಲ್ಲ ಚುನಾವಣಾ ಸಮೀಕ್ಷೆಗಳು ಬೋಗಸ್ ಎಂದು ಷರಾ ಬರೆದಿದ್ದಾರೆ. ಜೆಡಿಎಸ್ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಯಾವ ಪಕ್ಷಕ್ಕೂ ಬಹುಮತ ಬರಲು ಸಾಧ್ಯವೇ ಇಲ್ಲ. ಮುಂದೆ ಏನಿದ್ದರೂ ಸಮ್ಮಿಶ್ರ ಸರಕಾರವೇ ಆಡಳಿತ ನಡೆಸಲಿದೆ ಎಂದು ಖಚಿತವಾಗಿ ಹೇಳಿದ್ದಾರೆ.
ಯಡಿಯೂರಪ್ಪ ಮತ್ತು ಅವರ ಅನೇಕ ಹಿಂಬಾಲಕರು ಪಕ್ಷ ತೊರೆದಿರುವುದರಿಂದ ಕಳಂಕರಹಿತವಾಗಿದೆ ಎಂದು ನುಡಿದಿರುವ ಬಿಜೆಪಿ ಪಕ್ಷದ ನಾಯಕರು, ಮತದಾರರು ಮತ್ತೆ ಭಾರತೀಯ ಜನತಾ ಪಕ್ಷವನ್ನೇ ಆರಿಸಿ ತರಲಿದ್ದಾರೆ ಎಂದು ವಿಶ್ವಾಸದಿಂದ ನುಡಿದಿದ್ದಾರೆ. ಸಮೀಕ್ಷೆ ವರದಿ ಸುಳ್ಳೆಂಬುದು ಮೇ 8ರಂದು ಸಾಬೀತಾಗಲಿದೆ ಎಂದು ಮುಖ್ಯಮಂತ್ರಿ, ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ನುಡಿದಿದ್ದಾರೆ. ಕೆಜೆಪಿಗೆ ಏಳೆಂಟು ಸೀಟುಗಳು ದಕ್ಕಿದರೆ ಹೆಚ್ಚು ಎಂದು ಸಮೀಕ್ಷೆ ಹೇಳಿದ್ದರೂ ಯಡಿಯೂರಪ್ಪ ತಮಗೇ ಬಹುಮತ ಲಭಿಸಲಿದೆ ಎಂದು ವಿಕ್ಟರಿ ಸಿಂಬಲ್ ಎತ್ತಿಹಿಡಿದಿದ್ದಾರೆ.
2004ರ ಚುನಾವಣೆಯ ನಂತರ ಸಮ್ಮಿಶ್ರ ಸರಕಾರಗಳೇ ರಾಜ್ಯದಲ್ಲಿ ರಾಜ್ಯಭಾರ ನಡೆಸಿವೆ. 2004ರಲ್ಲಿ ಚುನಾವಣೆ ನಡೆದ ನಂತರ ಕಾಂಗ್ರೆಸ್-ಜೆಡಿಎಸ್ ಸರಕಾರ ಮತ್ತು ಜೆಡಿಎಸ್-ಬಿಜೆಪಿ ಸರಕಾರಗಳು ಹೆಚ್ಚು ದಿನ ಬಾಳಲಿಲ್ಲ. ಮುಂದೆ 2008ರಲ್ಲಿ ನಡೆದ ಚುನಾವಣೆಯಲ್ಲಿ ಬಹುಮತ ಪಡೆದು ಬಿಜೆಪಿ ಇತಿಹಾಸ ನಿರ್ಮಿಸಿತು. ನಂತರ ಅನೇಕ ಹಗರಣಗಳಲ್ಲಿ ಭಾಗಿಯಾಗಿ ಬಿಜೆಪಿ ಇತಿಹಾಸದ ಪುಟಗಳನ್ನೂ ಸೇರಿದೆ. ಮೇ 8ರಂದು ಏನಾಗಲಿದೆ? ಕಾದು ನೋಡಿ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications