ಸಿಬಿಎಸ್ಇ, ಐಸಿಎಸ್ಇ ರಿಸಲ್ಟ್ ಮೇ 15 ನಂತರ

ಇಡೀ ದೇಶಾದ್ಯಂತ CBSE ಮತ್ತು ICSE ನಡೆಸುವ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶಗಳು ಇದೇ ತಿಂಗಳ ಮೇ 15ರಿಂದ 20ರ ನಡುವೆ ಯಾವುದೇ ದಿನ ಪ್ರಕಟವಾಗುವ ಸಾಧ್ಯತೆಗಳು ದಟ್ಟವಾಗಿವೆ. ಈ ಫಲಿತಾಂಶಗಳು ವಿಳಂಬವಾಗುವುದಕ್ಕೆ ಯಾವುದೇ ಸಕಾರಣವಿಲ್ಲ.
ಹಾಗಾಗಿ ಪ್ರತಿ ವರ್ಷದಂತೆ ಸಕಾಲದಲ್ಲಿ ಫಲಿತಾಂಶಗಳು ಹೊರಬೀಳಲಿವೆ ಎಂದು ತಿಳಿದುಬಂದಿದೆ.
2013ನೇ ಶೈಕ್ಷಣಿಕ ಸಾಲಿನಲ್ಲಿ 9 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆ ಬರೆದಿದ್ದರೆ 13.6 ಮಂದಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. CBSE ಮತ್ತು ICSE ಪರೀಕ್ಷಾ ಫಲಿತಾಂಶಗಳಿಗಾಗಿ ಪರೀಕ್ಷಾರ್ಥಿಗಳ ಜತೆಜತೆಗೆ ಆಯಾ ಶಾಲೆಗಳೂ ಕೌತುಕ/ಆತಂಕದಿಂದ ಕಾಯುತ್ತವೆ.
ತಮ್ಮ ಶಾಲೆಯ ವಿದ್ಯಾರ್ಥಿಗಳು ಯಾವ ದರ್ಜೆಯಲ್ಲಿ ಪಾಸಾಗಿ ಶಾಲೆಗಳಿಗೆ ಗೌರವದ ಸ್ಥಾನ ದಕ್ಕಿಸಿಕೊಟ್ಟಿದ್ದಾರೆ ಎಂಬುದನ್ನು ತಿಳಿಯಲು ಶಾಲಾ ಆಡಳಿತ ಮಂಡಳಿಗಳು ನಿರೀಕ್ಷೆಯ ಮೂಟೆಗಳನ್ನು ಹೊತ್ತಿರುತ್ತವೆ.












Click it and Unblock the Notifications