ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಎಸ್ ದೊರೆಸ್ವಾಮಿ ಓಟ್ ಮಾಡಲಿಲ್ಲ, ಯಾಕೆ?

By Srinath
|
Google Oneindia Kannada News

freedom-fighter-doreswamy-didnt-cast-vote-first-time
ಬೆಂಗಳೂರು, ಮೇ 6: ಅವರು 95 ವರ್ಷದ ಹಿರಿಯ ಜೀವ. 1952ರಲ್ಲೊ ಮೊದಲ ಬಾರಿಗೆ ವೋಟ್ ಮಾಡಿದವರು ಇದುವರೆಗೂ ಎಷ್ಟು ಬಾರಿ ವೋಟ್ ಮಾಡಿದ್ದಾರೋ? ಆದರೆ ನಿನ್ನೆಯೂ ವೋಟ್ ಮಾಡಿದರಾ? ಅಂತ ಕೇಳಿದಕ್ಕೆ ತುಂಬಾನೇ ಬೇಸರ ದನಿಯಲ್ಲಿ ಮಾತನಾಡಿದ ಆ ಹಿರಿಯ ಜೀವ ಮೊದಲ ಬಾರಿಗೆ ನಾನು ಯಾರಿಗೂ ನನ್ನ ಮತ ದಾನ ಮಾಡಲಿಲ್ಲ ಅಂದರು.

ಯಾರಪ್ಪಾ ಆ ಹಿರಿಯ ಜೀವ ಅಂದರೆ ಈ ರಾಜಕಾರಣಿಗಳ ಮಂಗ್ಯಾಟಗಳ ಮಧ್ಯೆ ಸಾಕ್ಷೀಪ್ರಜ್ಞೆಯಂತಿರುವ ಸ್ವಾತಂತ್ರ್ಯ ಹೋರಾಟಗಾರ ಎಚ್ಎಸ್ ದೊರೆಸ್ವಾಮಿಗಳು. ಕಳೆದೈದು ವರ್ಷಗಳಲ್ಲಿನ ಭ್ರಷ್ಟ ಆಡಳಿತದಿಂದ ಬೇಸತ್ತಿರುವ ದೊರೆಸ್ವಾಮಿ ಅವರು 60 ವರ್ಷಗಳಲ್ಲಿ ಮೊದಲ ಬಾರಿಗೆ ಯಾರ ಪರವೂ ಮತ ಚಲಾಯಿಸಿಲ್ಲ!

ಹಾಗಂತ ಅವರು ಸಿನಿಕರಾಗಿ ಮನೆಯಲ್ಲಿ ಕುಳಿತು ಹೊಣೆಗೇಡಿತನ ಪ್ರದರ್ಶಿಸಿದರು ಅಂತಲ್ಲ. ನಿನ್ನೆ ಮಧ್ಯಾಹ್ನ ಮನೆಯಿಂದ ಹೊರಬಿದ್ದವರೆ ಜಯನಗರ ನಾಲ್ಕನೆಯ ಬಡಾವಣೆಯಲ್ಲಿರುವ ಮತಗಟ್ಟೆಗೆ ಸೀದಾ ತೆರಳಿದ್ದಾರೆ. ಅಲ್ಲಿ ಮತಪತ್ರವನ್ನು ಸ್ವೀಕರಿಸಿ, ತಮ್ಮ ಹೆಸರನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ. ಬೆರಳಿಗೆ ಮಸಿಯನ್ನೂ ಹಾಕಿಸಿಕೊಂಡಿದ್ದಾರೆ.

ಬಳಿಕ, ಯಾರ ಪರವೂ ಮತ ಚಲಾಯಿಸಲು ತಮಗೆ ಇಷ್ಟವಿಲ್ಲ ಎಂದು ದಾಖಲಿಸಲು ಫಾರಂ 17 ನೀಡುವಂತೆ ಮತಗಟ್ಟೆ ಅಧಿಕಾರಿಯನ್ನು ಕೇಳಿದ್ದಾರೆ. ಆದರೆ ಅಂಥದ್ದು ಯಾವುದೂ ನಮ್ಮ ಬಳಿ ಇಲ್ಲ ಎಂದಿದ್ದಾರೆ. ಬಳಿಕ, ನಾನು ಯಾವುದೇ ಅಭ್ಯರ್ಥಿಗೂ ಮತ ಹಾಕುವುದಿಲ್ಲ ಎಂದ ದೊರೆಸ್ವಾಮಿ ಅವರು Since I am disillusioned with the political parties, I am not voting ಎಂದು ರಿಜಿಸ್ಟರ್ ಪುಸ್ತಕದಲ್ಲಿ ಬರೆದುಬಂದಿದ್ದಾರೆ.

English summary
Karnataka assembly election 2013. Karnataka assembly election 2013, Freedom fighter H S Doreswamy didnt cast his vote for first time. The 95-year-old, who voted for the first time in 1952 , did not vote on Sunday — a first for him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X