ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾನಕ್ಕೆ ಒಂದು ಗಂಟೆ ಹೆಚ್ಚು ಅವಕಾಶ

|
Google Oneindia Kannada News

Anil Kumar Jha
ಬೆಂಗಳೂರು, ಮೇ 4 : ಭಾನುವಾರ ನಡೆಯಲಿರುವ ವಿಧಾನಸಭೆ ಚುನಾವಣೆಯ ಮತದಾನದ ಅವಧಿಯನ್ನು ಒಂದು ಗಂಟೆಗಳ ಕಾಲ ವಿಸ್ತರಿಸಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ನೂತನ ಆದೇಶದಿಂದ ಮತದಾನ ಮಾಡಲು 11 ಗಂಟೆಗಳ ಸಮಯಾವಕಾಶ ಲಭ್ಯವಾಗಲಿದೆ.

ಆಯೋಗ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ಮಾಡಬಹದು ಎಂದು ಮೊದಲು ಪ್ರಕಟಿಸಿತ್ತು. ಆದರೆ, ಶನಿವಾರ ಪ್ರಕಟಣೆ ಹೊರಡಿಸಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಮತದಾನದ ಅವಧಿ ಒಂದು ಗಂಟೆ ವಿಸ್ತರಿಸಿರುವುದಾಗಿ ತಿಳಿಸಿದ್ದಾರೆ.

ನೂತನ ಆದೇಶದಂತೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ಮಾಡಬಹುದಾಗಿದೆ. ಇದರ ಅನ್ವಯ ಮತದಾನ ಮಾಡಲು ಒಟ್ಟು 11 ಗಂಟೆಗಳ ಕಾಲಾವಕಾಶ ದೊರಕಿದಂತಾಗುತ್ತದೆ.

ಮೊದಲು ಕಡಿತಗೊಳಿಸಿತ್ತು : ಕಳೆದ ಚುನಾವಣೆಯಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಇದ್ದ ಸಮಯವನ್ನು ಚುನಾವಣಾ ವೇಳಾಪಟ್ಟಿ ಪ್ರಕಟಿಸುವ ಸಂದರ್ಭದಲ್ಲಿ ಒಂದು ಗಂಟೆ ಕಡಿತಗೊಳಿಸಲಾಗಿತ್ತು.

ಚುನಾವಣಾ ಆಯೋಗದ ವೇಳಾಪಟ್ಟಿ ಪ್ರಕಾರ ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯ ವರೆಗೆ ಮತದಾನ ಮಾಡಬಹುದಾಗಿತ್ತು. ಆಯೋಗದ ಈ ಕ್ರಮ ರಾಜಕೀಯ ಪಕ್ಷಗಳ ಅಸಮಾಧಾನಕ್ಕೆ ಕಾರಣವಾಗಿತ್ತು.

ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ವಿ.ಎಸ್.ಸಂಪತ್ ಅವರು ರಾಜಕೀಯ ಪಕ್ಷಗಳ ಜೊತೆ ಚರ್ಚೆ ನಡೆಸಿದಾಗ, ಎಲ್ಲಾ ಪಕ್ಷಗಳು ಮತದಾನದ ಅವಧಿ ವಿಸ್ತರಿಸುವಂತೆ ಮನವಿ ಮಾಡಿದ್ದವು. ಮನವಿ ಪುರಸ್ಕರಿದ್ದ ಆಯೋಗ ಮತದಾನದ ಸಮಯ ಒಂದು ಗಂಟೆಗಳ ಕಾಲ ಹೆಚ್ಚಿಸಿತ್ತು.

ಮತದಾನಕ್ಕೆ ಕೆಲವು ಗಂಟೆಗಳು ಬಾಕಿ ಉಳಿದಿರುವಾ ಶನಿವಾರ ಆಯೋಗ ಮತ್ತೊಂದು ಪ್ರಕಟಣೆ ಹೊರಡಿಸಿ, ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಿದೆ. ಬಿರು ಬೇಸಿಗೆಯಲ್ಲಿ ಮತದಾರರಿಗೆ ಅನುಕೂಲವಾಗಲಿ ಎಂದು ಆಯೋಗ ಇಂತಹ ನಿರ್ಧಾರ ಕೈಗೊಂಡಿದೆ.


ಮತದಾರರ ವಿವರ

* ಒಟ್ಟು ಮತದಾರರು : 4,36,14,881
* ಪುರುಷರು : 2,22,73,618
* ಮಹಿಳೆಯರು : 2,13,38,344
* ಲೈಂಗಿಕ ಅಲ್ಪ ಸಂಖ್ಯಾತರು : 2919
* ಅತಿ ಹೆಚ್ಚು ಮತದಾರರು ಬೆಂಗಳೂರು ದಕ್ಷಿಣ ಕ್ಷೇತ್ರ 4,47,914
* ಅತಿ ಕಡಿಮೆ ಮತದಾರರು 1,49,980 ಶೃಂಗೇರಿ ಕ್ಷೇತ್ರ

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Chief Electoral Officer Anil Kumar Jha said, state election commission has reduced the polling timing for one hour. according to new schedule voters can vote from morning 7 am to evening 6 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X