ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರಾವಳಿಯಲ್ಲಿ ನರೇಂದ್ರ ಮೋದಿ ಅಲೆ ಶುರು

By Mahesh
|
Google Oneindia Kannada News

Narendra Modi
ಮಂಗಳೂರು, ಮೇ.2: ಇಲ್ಲಿನ ನೆಹರೂ ಮೈದಾನದಲ್ಲಿ ನರೇಂದ್ರ ಮೋದಿ ಅಲೆ ಎದ್ದಿದೆ. ಗುಜರಾತ್ ಮುಖ್ಯಮಂತ್ರಿ ಮೋದಿ ಅವರು ಪ್ರಥಮ ಬಾರಿಗೆ ಕರಾವಳಿಯಲ್ಲಿ ಚುನಾವಣಾ ಭಾಷಣ ಮಾಡಿದ್ದಾರೆ.

ಬೆಂಗಳೂರಿನ ಬಸವನಗುಡಿಯಲ್ಲಿ ಬೃಹತ್ ಸಮಾವೇಶದಲ್ಲಿ ಎಲ್ಲರನ್ನೂ ಮೋಡಿ ಮಾಡಿದ ಮೋದಿ ಅವರು ಗುರುವಾರ(ಮೇ.2) ಮಂಗಳೂರು ಹಾಗೂ ಬೆಳಗಾವಿಯಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ನರೇಂದ್ರ ಮೋದಿ ಅವರ ಜತೆಗೆ ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಸಂಸದ ನಳೀನ್ ಕುಮಾರ್ ಕಟೀಲ್, ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮತ್ತಿತ್ತರ ಗಣ್ಯರು ಉಪಸ್ಥಿತರಿದ್ದಾರೆ.

ಸರಬ್ಜಿತ್ ಸಾವಿನ ಸೂತಕ ಮೋದಿ ಸಭೆಗೂ ತಟ್ಟಿದ್ದು, 1 ನಿಮಿಷದ ಮೌನ ಆಚರಿಸಲಾಯಿತು. ನರೇಂದ್ರ ಮೋದಿ ಅವರಿಗೆ ರಾಜಸ್ಥಾನಿ ಪೇಟ ಹಾಗೂ ಸ್ವಾಮಿ ವಿವೇಕಾನಂದ ಅವರ ಪ್ರತಿಮೆ ನೀಡಿ ಗೌರವಿಸಲಾಯಿತು.

ಮೋದಿ ಭಾಷಣದ ಮುಖ್ಯಾಂಶಗಳು:
* ನನಗೂ ಕನ್ನಡ ಬಂದಿದ್ದರೆ ನನ್ನ ಇಂದಿನ ಭಾಷಣ ಇನ್ನಷ್ಟು ಪರಿಣಾಮಕಾರಿಯಾಗಿ ನಿಮ್ಮನ್ನು ತಲುಪುತ್ತಿತ್ತು ಎಂದು ಮೋದಿ ಭಾಷಣ ಆರಂಭಿಸಿದರು.
* ಮಂಗಳೂರಿನಲ್ಲಿ ಕೋಮು ಗಲಭೆ, ಅಮಾಯಕರ ಹತ್ಯೆ, ನಿರುದ್ಯೋಗ ಮುಂತಾದ ಸಮಸ್ಯೆಗಳನ್ನು ಬಿಜೆಪಿ ಸರ್ಕಾರ ಬಹುತೇಕ ಪರಿಹರಿಸಿದೆ.
* ಕಾಂಗ್ರೆಸ್ ಸರ್ಕಾರ ಒಡೆದು ಆಳುವ ನೀತಿಯನ್ನು ಅನುಸರಿಸುತ್ತದೆ. ನಮಗೆ ಮತ ಹಾಕಿ ಎಂದು ಕೇಳುವ ಅಭ್ಯರ್ಥಿಗಳನ್ನು ನಂಬುವುದು ಹೇಗೆ? ಕಾಂಗ್ರೆಸ್ ನಾಯಕರು ಮತ ಹಾಕಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವ ಮಾತನಾಡುತ್ತಾರೆ.

* ಕಾಂಗ್ರೆಸ್ ನದ್ದು ವೋಟ್ ಬ್ಯಾಂಕ್ ರಾಜಕೀಯ. ಬಿಜೆಪಿಯದ್ದು ಅಭಿವೃದ್ಧಿ ಪರ ರಾಜಕೀಯ. ನಿಮಗೆ ಯಾವುದು ಬೇಕು ಆಯ್ಕೆ ನಿಮ್ಮ ಕೈಲಿದೆ.
* ದೆಹಲಿಯಲ್ಲಿರುವ ಕಾಂಗ್ರೆಸ್ ಸರ್ಕಾರ ಕಿತ್ತಳೆ ಕ್ರಾಂತಿ ಮಾಡಲು ಹೊರಟಿದೆ. ಇದರರ್ಥ ಪ್ರಾಣಿಗಳ ನಿರ್ದಯ ಹತ್ಯೆ. ಮಾಂಸವನ್ನು ಯಥೇಚ್ಛವಾಗಿ ರಫ್ತು ಮಾಡುವುದು. ಮಾಂಸ ರಫ್ತು ದಂಧೆಯಲ್ಲಿರುವವರಿಗೆ 5 ವರ್ಷದ ತೆರಿಗೆ ವಿನಾಯತಿ ಕೂಡಾ ನೀಡಲು ಸರ್ಕಾರ ಮುಂದಾಗಿದೆ.

* ಇಷ್ಟೇ ಅಲ್ಲದೆ ಕಸಾಯಿಖಾನೆಗಳಿಗೆ 50 ಕೋಟಿ ರು ಸಬ್ಸಿಡಿ ಬೇರೆ ಸಿಗುತ್ತಿದೆ. ಬಾಂಗ್ಲಾದೇಶಕ್ಕೆ ಇಲ್ಲಿಂದ ರಾಸುಗಳನ್ನು ಸ್ಮಗಲ್ಲಿಂಗ್ ಮಾಡುವುದು ನಿರಂತರವಾಗಿ ಸಾಗಿದೆ. ಆದರೂ ಕೇಂದ್ರ ಸರ್ಕಾರ ಮೌನವಾಗಿದೆ.

* ಭಾರತೀಯ ರೈತ ಸರಬ್ಜಿತ್ ಸಿಂಗ್ ರನ್ನು ಜೈಲಿನಲ್ಲಿ ಹತ್ಯೆಗೈದರೂ ಯುಪಿಎ ನಾಯಕರ ಮನ ಕರಗಿಲ್ಲ. ಸರಬ್ಜಿತ್ ಶವವನ್ನು ಭಾರತಕ್ಕೆ ತರುವ ವಿಷಯದಲ್ಲೂ ಪ್ರಯತ್ನಿಸಿ ನೋಡುತ್ತೇವೆ ಎಂಬ ಧೋರಣೆಯನ್ನು ಸರ್ಕಾರ ಅನುಸರಿಸುತ್ತಿದೆ. ಯುಪಿಎ ಸರ್ಕಾರ ವೀಕ್ ಆಗಿದೆ. ಪ್ರಧಾನಿ ಕೂಡಾ ವೀಕ್, ಎಲ್ಲಾ ರಾಷ್ಟ್ರಗಳು ಭಾರತವನ್ನು ಕಡೆಗಣಿಸುತ್ತಿವೆ.

* ನನ್ನ ಯುವ ಬಾಂಧವರೇ ನಿಮ್ಮ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದಾರೆ. ಮೊಟ್ಟಮೊದಲಿಗೆ ಕಾಂಗ್ರೆಸ್ ಮುಕ್ತ ಕರ್ನಾಟಕ, ಕಾಂಗ್ರೆಸ್ ಮುಕ್ತ ಹಿಂದುಸ್ತಾನವನ್ನು ನಿರ್ಮಾಣ ಮಾಡಿ.

* ಕರ್ನಾಟಕ ವಿದ್ಯುತ್ ಕ್ಷೇತ್ರದಲ್ಲಿ ಏನು ಮಾಡಿಲ್ಲ ಎಂದಿದ್ದಾರೆ, ಮಾನ್ಯ ಪ್ರಧಾನಿ ಅವರೇ ನೀವು ದೇಶವನ್ನು 24 ಗಂಟೆ ಅಂಧಕಾರದಲ್ಲಿ ಇಟ್ಟಿದ್ದಿರಲ್ಲ ಇದಕ್ಕೆ ಏನು ಹೇಳ್ತೀರಾ?

* ದೇಶದ ರೈತರ ಹಿತ ಕಾಯಲು ಅಸಮರ್ಥರಾದ ಪ್ರಧಾನಿ ಮನಮೋಹನ್ ಸಿಂಗ್ ಅವರು ಕರ್ನಾಟಕಕ್ಕೆ ಬಂದು ರೈತ ವಿರೋಧಿ ಸರ್ಕಾರ ಎನ್ನುವುದು ಎಷ್ಟು ಸರಿ?
* ಯುಪಿಎ ಸರ್ಕಾರದ ಕೃಉಷಿ ಪ್ರಗತಿ ಶೇ 2.5 ರಷ್ಟು ಮಾತ್ರ ಇದೆ. ಕರ್ನಾಟಕದ ಕೃಷಿ ಪ್ರಗತಿ ಶೇ 6ರಷ್ಟಿದೆ.
* ದೆಹಲಿಯಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ, ಕರ್ನಾಟಕಕ್ಕೆ ಏನು ತಾನೇ ರಕ್ಷಣೆ ನೀಡಲು ಸಾಧ್ಯ
* ಅಟಲ್ ಜೀ ಕಾಲದಲ್ಲಿ ಪ್ರತಿದಿನಕ್ಕೆ 11 ಕಿ.ಮೀ ರಸ್ತೆ ನಿರ್ಮಾಣವಾಗುತ್ತಿತ್ತು ಈಗ ಇದು 3 ಕಿ.ಮೀಗೆ ಇಳಿದಿರುವುದು ದುರಂತ.

ಇನ್ನಷ್ಟು ನಿರೀಕ್ಷಿಸಿ..

ಬಿಜೆಪಿ ಕರ್ನಾಟಕ ವೆಬ್ ತಾಣದಲ್ಲಿ ಲೈವ್ ವೀಕ್ಷಿಸಿ

English summary
Gujarat Chief Minister Narendra Modi, after his huge public meeting in Bangalore on Sunday (April 28) addressing two election rallies in Karnataka Thursday. NamoinMLR and NaMoinbelgaum
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X