ನಟ ಗಣೇಶ್ ಪತ್ನಿ ಶಿಲ್ಪಾ ಬಿಜೆಪಿಗೆ ಸೇರ್ಪಡೆಯಾದ್ರು

ಬೆಳಗಿನ ಸುದ್ದಿ: ಕನ್ನಡದ ಖ್ಯಾತ ನಟಿ, 'ಮಳೆ ಹುಡುಗಿ' ಪೂಜಾ ಗಾಂಧಿ ಅವರು ಬಿಎಸ್ಸಾರ್ ಕಾಂಗ್ರೆಸ್ ಪಕ್ಷದಲ್ಲಿ ತಳವೂರಿ ಶಾಸಕಿಯಾಗುವತ್ತ ದಾಪುಗಾಲು ಹಾಕಿರುವ ಹೊತ್ತಿನಲ್ಲಿ ಮಳೆ ಹುಡುಗನೂ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾನೆ. ಆದರೆ ಹಿಂಬಾಗಿಲ ಮೂಲಕ ಪ್ರವೇಶ ಪಡೆದಿದ್ದಾರೆ.
ಏನಪಾ ಅಂದರೆ 'ಮುಂಗಾರು ಮಳೆ' ಚಿತ್ರ ಖ್ಯಾತಿಯ 'ಗೋಲ್ಡನ್ ಸ್ಟಾರ್' ಗಣೇಶ್ ಅವರ ಪತ್ನಿ, ನಿರ್ಮಾಪಕಿ ಶಿಲ್ಪಾ ಇಂದು ಆಡಳಿತಾರೂಢ ಬಿಜೆಪಿಗೆ ಎಂಟ್ರಿ ಕೊಡಲು ಮಹೂರ್ತ ನಿಗದಿಯಾಗಿದೆ. ಇದನ್ನು ಸಾಕ್ಷೀಕರಿಸಲು, ಗಣೇಶ್ ಸಹ ಈ ಸಂದರ್ಭದಲ್ಲಿ ಉಪಸ್ಥಿತರಾಗಲಿದ್ದಾರೆ. ಜತೆಗೆ ಉಪ ಮುಖ್ಯಮಂತ್ರಿ ಆರ್ ಅಶೋಕ್ ಸಹ ಭಾಗವಹಿಸಲಿದ್ದಾರೆ.
ಆದರೆ ಇನ್ನೇನು ಮತದಾನಕ್ಕೆ ಆರೇ ದಿನ ಎನ್ನುವಾಗ ಗೋಲ್ಡನ್ ಸ್ಟಾರ್ ಗಣೇಶ್ ಕುಟುಂಬ ಇಷ್ಟೊಂದು ತಡವಾಗಿ ರಾಜಕೀಯ ಅಖಾಡಕ್ಕೆ ಧುಮುಕುತ್ತಿರುವ ಕುತೂಹಲಕಾರಿಯಾಗಿದೆ. ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಮ್ಮುಖದಲ್ಲಿ ಶಿಲ್ಪಾ ಗಣೇಶ್ ಅವರು ಬಿಜೆಪಿ ಸೇರಲಿದ್ದಾರೆ.












Click it and Unblock the Notifications