ಬೀದರ್ : ಭೀಕರ ಅಪಘಾತಕ್ಕೆ 9 ಜನ ಬಲಿ

ಮೃತರಲ್ಲಿ ಇಬ್ಬರು ಮಕ್ಕಳು ಇಬ್ಬರು ಮಹಿಳೆಯರು ಸೇರಿದ್ದಾರೆ. ಮೃತರನ್ನು ಮಹಾರಾಷ್ಟ್ರದ ಪುಣೆ ಜಿಲ್ಲೆ ಸೊಲ್ಲಾಪುರ, ಶಹಾಪುರ ಮತ್ತು ಬಾಲಹಳ್ಳಿ ಗ್ರಾಮದವರೆಂದು ಗುರುತಿಸಲಾಗಿದೆ.,
ಆಂಧ್ರ ಪ್ರದೇಶದಲ್ಲಿರುವ ರಾಮೋಜಿರಾವ್ ಸಿಟಿ ವೀಕ್ಷಣೆಗೆಂದು ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.
ಟವೇರಾ ವಾಹನದ ಚಾಲಕ ಚಾಲಕನ ಅಜಾಗರೂಕತೆಯಿಂದ ಮುಂಜಾನೆ 5.30ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 9ರಲ್ಲಿ ಎದುರಿನಿಂದ ಬರುತ್ತಿದ್ದ ಟ್ಯಾಂಕರ್‌ಗೆ ವೇಗವಾಗಿ ಅಪ್ಪಳಿಸಿದೆ.
ಡಿಕ್ಕಿಯ ರಭಸಕ್ಕೆ ಸ್ಥಳದಲ್ಲೆ 7 ಮಂದಿ ಸಾವನ್ನಪ್ಪಿದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಇಬ್ಬರು ಮೃತಪಟ್ಟಿದ್ದಾರೆಂದು ಹುಮ್ನಾಬಾದ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ಲಾರಿ ಚಾಲಕ ಮತ್ತು ಕ್ಲೀನರ್‌ಗೆ ಗಾಯಗಳಾಗಿದ್ದು, ಅವರನ್ನು ಹುಮ್ನಾಬಾದ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿವೈಎಸ್ಪಿ ಅಮರನಾಥಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications