• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಜೆಪಿಗೆ ಬಿಎಸ್ವೈ ಬೆಂಬಲಿಗರೂ ಉತ್ತರ ನೀಡಿದ್ದಾರೆ!

By Srinath
|
ಬೆಂಗಳೂರು, ಏ.29: ಕೆಜೆಪಿ ಅಧಿನಾಯಕ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರತ್ತ ಬಿಜೆಪಿ ಹಿರಿಯ ನಾಯಕ ಗೋ ಮಧುಸೂದನ್ 10 ಪ್ರಶ್ನೆಗಳನ್ನೇನೋ ಎಸೆದರು. ಅದಕ್ಕೆ ಯಡಿಯೂರಪ್ಪ ಅವರ ಪರವಾಗಿ ಅವರ ಪಕ್ಷದ ಹಿರಿಯ ನಾಯಕ ಕೆ ಎಚ್ ಶ್ರೀನಿವಾಸ್ ಅವರು ಉತ್ತರಿಸಿದ್ದೂ ಆಗಿದೆ.

ಆದರೆ ಯಡಿಯೂರಪ್ಪ/ಶ್ರೀನಿವಾಸ್ ಅವರು ಬಿಜೆಪಿಯ ಪ್ರಶ್ನೆಗಳ ಆಳ-ಅಗಲ ಅಳೆದು ಸಾರ್ವಜನಿಕವಾಗಿ ಉತ್ತರಿಸಲು ತಿಣುಕಾಡಿರುವುದು ಸ್ಪಷ್ಟವಾಗಿದೆ. ಕೆಲವೊಂದು ಪ್ರಶ್ನೆಗಳಿಗೆ ಹಾರಿಕೆಯ ಉತ್ತರ ನೀಡಿದ್ದರೆ, ಕೆಲವು ಹಿಡ್ ಅಂಡ್ ರನ್ ಆಗಿವೆ. ಆದರೂ ಕೆಲವೊಂದಕ್ಕೆ ಸಮಂಜಸ ಉತ್ತರ ನೀಡಿದ್ದಾರೆ.

ಆದರೆ ಹೇಳಬೇಕು ಅಂದರೆ ಮಧುಸೂದನರ ಪ್ರಶ್ನೆಗಳೇ ಸರಿಯಿರಲಿಲ್ಲ ಎನ್ನಬಹುದು. ಸುಮ್ಮನೆ ಧನಂಜಯ ಕುಮಾರ್ ಆಡ್ವಾಣಿ ಮೇಲೆ ಗೂಬೆ ಕೂರಿಸಿದರು ಎಂಬ ಸಿಟ್ಟಿನ ಭರದಲ್ಲಿ ಬಿಜೆಪಿ ಮಂದಿ ಕಾಗೆ ಹಾರಿಸಿದರು. ಹಿಡ್ ಅಂಡ್ ರನ್ ಎಂಬಂತೆ ಸುಮ್ಮನೆ ಯಡಿಯೂರಪ್ಪಗೆ ಒಂದು ಚಮಕ್ ನೀಡಲು ಪ್ರಶ್ನೆಗಳ ಹಾವಳಿ ಎಬ್ಬಿಸಿದರು ಅಷ್ಟೇ ಎಂಬ ಮಾತೂ ಕೇಳಿಬಂದಿದೆ.

ಆದರೆ ಕೆಜೆಪಿ ಕಾರ್ಯಕರ್ತರು ಬಿಜೆಪಿಯ ಮಧುಸೂಧನರ ಪ್ರಶ್ನೆಗಳನ್ನು head on ತೆಗೆದುಕೊಂಡು, ತಿರುಗೇಟು ನೀಡಿದ್ದಾರೆ. 'ರಾಜು' ಎಂಬುವವರು ಈ ಉತ್ತರಗಳನ್ನು ಕಳಿಸಿಕೊಟ್ಟಿದ್ದಾರೆ. ಬಿಜೆಪಿ ನಾಯಕರಿಗೆ ಯಡಿಯೂರಪ್ಪನವರು ಉತ್ತರಿಸುವ ಅವಶ್ಯಕತೆ ಇಲ್ಲ, ಅವರಿಗೆ ನಾವೇ (ಕಾರ್ಯಕರ್ತರೇ) ಉತ್ತರಿಸುತ್ತೇವೆ ಎನ್ನುತ್ತಾ ರಾಜು ನೀಡಿರುವ ಉತ್ತರ ಮಾಲಿಕೆ ಹೀಗಿದೆ:

ಪ್ರಶ್ನೆ 1. ಯಡಿಯೂರಪ್ಪನವರೇ ಲೋಕಾಯುಕ್ತವು ಗಣಿ ಹಗರಣದಲ್ಲಿ ತಮ್ಮ ಹೆಸರು ಉಲ್ಲೇಖ ಮಾಡಿದ ತರುವಾಯ ಯಾವ ಹೈಕೋರ್ಟ್‌ ನಿಮಗೆ ಕ್ಲೀನ್‌ ಚಿಟ್‌ ನೀಡಿದೆ? ಅದರ ಪ್ರತಿಯನ್ನು ದಯಮಾಡಿ ಪತ್ರಿಕೆಗಳಿಗೆ ಬಿಡುಗಡೆ ಏಕೆ ಮಾಡಿಲ್ಲ?

Ans- ಲೋಕಾಯುಕ್ತ ವರದಿಯೇ ಒಂದು ಪುರ್ವಾಗ್ರಹಪಿಡೀತ ಎಂದು ಆವಾಗ ಬೊಬ್ಬೆಹೊಡೆದಿದ್ದು ಯಾಕೆ ಅಂತ್ ಮೊದಲು ತಿಳಿಸಿ ಸ್ವಾಮೀ? ಈ ಲೋಕಾಯುಕ್ತ ಗಣಿ ವರದಿ ಕೊಡಲು ಆದೇಶಿದ್ದೇ ಯಡಿಯೂರಪ್ಪನವರು, ಅದು ಎಲ್ಲಾ ಹಿಂದೀನ ಮುಖ್ಯಮಂತ್ರಿಗಳನ್ನು ಸೇರಿಸಿ ತನಿಖೆಗೆ ಆದೇಶಿಸಿದ್ದರು, ಆದರೆ ನಮ್ಮ ಆಗೀನ ಮಹಾನ ಲೋಕಾಯುಕ್ತರು ಕೇವಲ ನಮ್ಮ ನಾಯಕ್ ಯಡಿಯೂರಪ್ಪನವರನ್ನು ಮಾತ್ರ ಟಾರ್ಗೆಟ್ ಮಾಡಿ ವರದಿ ಒಪ್ಪಿಸಿದ್ದರು ಅದನ್ನು ನಿಮ್ಮ ನಾಯಕರಾದ ಶೆಟ್ಟರ್, ಆರ್, ಅಶೋಕ, ಊರಿಗೊಬ್ಬನೇ ಪರಿಶುದ್ಧ ಎಂದು ಬಡಾಯಿಕೊಚ್ಚಿಕೊಳ್ಳುವ ಈಶ್ವರಪ್ಪ, ಸದಾನಂದ ಗೌಡ ಸೇರಿ ಎಲ್ಲರು ಒಪ್ಪಿದ್ದಾರೆ, ಅಷ್ಟಕ್ಕು ನೀವು ಆ ವರದಿಯನ್ನು ಯಾವಾಗ ಒಪ್ಪಿಕೊಂಡಿದ್ದೀರಿ?

( Why Santhosh Hegde failed to investigate illegal mining from 2002 and gave a clean chit to the then Chief Minister S.M. Krishna. Why did the then Governor Rameshwar Thakur exonerate the former Chief Minister N. Dharam Singh indicted by the Lokayukta in the same illegal mining case?),

ಪ್ರಶ್ನೆ 2. ತಮ್ಮ ವಿರುದ್ಧ ಬಂಡಾಯ ಎದ್ದಿದ್ದ ರೇಣುಕಾಚಾರ್ಯ ಎರಡು ಬಾರಿ ಶಾಸಕರೊಂದಿಗೆ ಹೈದರಾಬಾದ್‌, ಚೆನ್ನೈ, ಗೋವಾಗೆ ತೆರಳಿದ್ದರು. ಇಂತಹ ವ್ಯಕ್ತಿಯು ನಿಮ್ಮ ಹಿತೈಷಿ ಹೇಗೆ ಆಗುತ್ತಾರೆ? ನಿಮ್ಮ ಸರ್ಕಾರವನ್ನು ಉರುಳಿಸಲು ಯತ್ನಿಸಿದವರು ಬೆನ್ನಿಗೆ ಚೂರಿ ಹಾಕಿದವರಲ್ಲ ? ನಿಮ್ಮ ಸರ್ಕಾರವನ್ನು ಉಳಿಸಲು ಕಷ್ಟ ಪಟ್ಟವರು ಬೆನ್ನಿಗೆ ಚೂರಿ

ಹಾಕುತ್ತಾರೆ ಎನ್ನುವುದು ಎಷ್ಟು ನ್ಯಾಯ?

Ans- ನಿಮ್ಮ ಪ್ರಶ್ನೆಯಲ್ಲೀರುವ ಕಳಕಳಿಯನ್ನು ನಾನು ಅಭಿನ0ದಿಸುತ್ತೇನೆ. ಬಂಡಾಯದ ಬಗ್ಗೆ ಮಾತನಾಡುವ ನೀವು, ಈ ಪ್ರಶ್ನೆ ಜಗದೀಶ ಶೆಟ್ಟರ್ ಅವರಿಗೆ ಕೇಳಿ, ಯಾಕೆಂದರೆ ಅತೀ ಹೆಚ್ಚು ಬಾರಿ ಅವರು ಬಂಡಾಯದಲ್ಲೀ ಭಾಗವಹಿಸಿದ್ದಾರೆ, ಪ್ರತೀ ಬಾರಿ ಮುಖ್ಯಮಂತ್ರಿ ಬದಲಾಗುವಾಗ ಅವರು ಬಂಡಾಯದಲ್ಲೀ ಸಕ್ರಿಯವಾಗಿ ಪಾಲ್ಗೊಂಡದ್ದಾರೆ.

ಪ್ರಶ್ನೆ 3. ನಿಮ್ಮ ವಿರುದ್ಧ ಖಾಸಗಿ ದೂರು ದಾಖಲಾದ ಸಂದರ್ಭದಲ್ಲಿ ಇದೊಂದು ಹೆಚ್‌.ಡಿ.ಕುಮಾರಸ್ವಾಮಿಯವರ ಷಡ್ಯಂತ್ರ, ಜೆಡಿಎಸ್‌ ರಾಜ್ಯದಲ್ಲಿ ಅಳಿಸಿ ಬಿಡುತ್ತೇನೆ ಎಂದು ತಾವು ಘರ್ಜಿಸಿದ್ದು ನಿಮಗೆ ಮರೆತು ಹೋಗಿರುವುದು ಆಶ್ಚರ್ಯಕರವಲ್ಲವಾ?

Ans- ಖಾಸಗಿ ದೂರು ದಾಖಲಾದ ಸಂದರ್ಭದಲ್ಲಿ ಹೆಚ್‌.ಡಿ.ಕುಮಾರಸ್ವಾಮಿಯವರ ವಿರುದ್ದ ಘರ್ಜಿಸಿದ್ದು ನಿಜ, ಇದರಲ್ಲಿ ಆಶ್ಚರ್ಯಕರವಾದುದು ಯಾವ್ದೂ? ಇವಾಗಲು ಎಲ್ಲಾ ಪಕ್ಷಗಳಂತೆ ಹಾಗೇ ಜೆಡಿಎಸ್‌ ಕೂಡ ನಮ್ಮ ಎದುರಳಿಯೇ (ನಿಮ್ಮದು ಮಾತ್ರ ಜೆಡಿಎಸ್‌ ಜೊತೆ ವಿಶೇಷ ಸಂಬಂಧ).

ಪ್ರಶ್ನೆ 4. ಹೆಚ್‌.ಡಿ.ಕುಮಾರಸ್ವಾಮಿಯವರ ವಿರುದ್ಧ ಆರೋಪ ಪಟ್ಟಿಯನ್ನು ತಾವು ಬಿಡುಗಡೆ ಮಾಡಿಸಿದ್ದೀರಿ, ಆದರೆ ಅದರ ಬಗ್ಗೆ ಈಗೇಕೆ ಚಕಾರವೆತ್ತುತ್ತಿಲ್ಲ? ಪದೇ ಪದೇ ಬಿಜೆಪಿ ನಾಯಕರು ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಬಿಜೆಪಿ ತೊರೆದ ನಂತರ ಸಹಾನುಭೂತಿ ಗಳಿಸಲು ವಿಫ‌ಲ ಯತ್ನ ಮಾಡುತ್ತಿದ್ದೀರಿ. ಆದರೆ ನಿಮ್ಮ ವಿರುದ್ಧ ಖಾಸಗಿ ದೂರು ಮಾಡಿದವರು ಜೆಡಿಎಸ್‌ ಬೆಂಬಲಿತರು ಎಂಬುದನ್ನು ಏಕೆ ಮರೆಮಾಚಲಾಗುತ್ತಿದೆ?

Ans- ಜೆಡಿಎಸ್‌ ಮತ್ತು ಹೆಚ್‌.ಡಿ.ಕುಮಾರಸ್ವಾಮಿಯವರ ವಿರುದ್ದ ನಮ್ಮ ಹೋರಾಟ ನಿರಂತರ. ಪಕ್ಷ ತೊರೆದ ನಂತರ ಸಹಾನುಭೂತಿ ಗಳಿಸಲು???..ಬಿಜೆಪಿ ನಾಯಕರು ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ ಅಂತ ನಾನು ಬಿಜೆಪಿಯಲ್ಲಿದ್ದಾಗಲೇ ಹೇಳಿದ್ದು, ಆಗಲೇ ನನ್ನ ನೀವು ಪಕ್ಷತದಿಂದ ಹೊರಹಾಕಬಹುದ್ದಿತ್ತಲ್ಲ? ಯಾಕೆ ಮಾಡ್ಲಿಲ್ಲ? ಆದರೆ ಖಾಸಗಿ ದೂರೀನ ನ0ತರ ನಡೆದ ಎಲ್ಲಾ ಕುತಂತ್ರ, ಷಡ್ಯಂತ್ರಗಳು ಮಾತ್ರ ಬಿಜೆಪಿ ನಾಯಕರುಗಳು ಮಾಡಿದ್ದು. ಯಾಕೆಂದರೆ ಬಿಜೆಪಿಯ ಎಲ್ಲಾ ನಾಯಕರಿಗು ಮುಖ್ಯಮಂತ್ರಿಯಾಗುವ ಮೋಹ ಹೆಚ್ಚಾಗಿತ್ತು.

(Note: It was conspiracy against BSY, because they were all private cases. Moreover, any number of such cases could be filed, if one wants to harass leaders)

ಪ್ರಶ್ನೆ 5. ನಿಮ್ಮ ಸರ್ಕಾರವನ್ನು ವಜಾ ಮಾಡಲು ರಾಜ್ಯಪಾಲರು ಶಿಫಾರಸ್ಸು ಮಾಡಿದಾಗ ರಾಷ್ಟ್ರಪತಿಗಳನ್ನು ಭೇಟಿ ಮಾಡಲು ಅಡ್ವಾಣಿಯವರು ತಮ್ಮ ವರ್ಚಸ್ಸಿಗೆ ಧಕ್ಕೆಯಾಗುವ

ಸಂಭವವಿದ್ದರೂ ನಿಯೋಗದ ನೇತೃತ್ವವನ್ನು ವಹಿಸಿ ನಿಮ್ಮ ಪರ ವಕಾಲತ್ತು ವಹಿಸಿದ್ದು ನೆನಪಿರುವುದೇ? ಅಂತಹವರ ವಿರುದ್ಧ ಕೀಳು ಮಟ್ಟದ ಅಪಪ್ರಚಾರಕ್ಕೆ ಮುಂದಾಗಿರುವುದು ಹೊಲಸು ರಾಜಕಾರಣವಲ್ಲವಾ?

Ans- ಪ್ರಜಾಸತಾತ್ಮಕ ಸರ್ಕಾರ ಉಳಿಸುವದರಲ್ಲಿ ತಪ್ಪೇನು? ಅದು ನಾಯಕರಾದವರ ಕರ್ತವ್ಯ ಹಾಗೂ ಅದು ಅವರ ದೊಡ್ಡತನ. ಇಲ್ಲೀ ಅಡ್ವಾಣಿಯವರ ವರ್ಚಸ್ಸಿಗೆ

ಧಕ್ಕೆಯಾಗುವ ಪ್ರಶ್ನೆಯೇ ಉದ್ಭವಿಸುವದಿಲ್ಲಾ. ಅಡ್ವಾನಿಯವರ ವಿರುದ್ಧದ ಅಪಪ್ರಚಾರವನ್ನು ನಮ್ಮ ನಾಯಕರಾದ ಯಡಿಯೂರಪ್ಪನವರು ಕೂಡಾ ಖಂಡಿಸಿದ್ದಾರೆ ಮತ್ತು ಕ್ಷೆಮೆ

ಕೇಳಿದ್ದಾರೆ(ಧನಂಜಯ್ ಕುಮಾರಗೆ ಈ ರೀತಿ ಹೇಳಿಕೆ ನೀಡದಂತೆ ಎಚ್ಚರಿಸಲಾಗಿದೆ). ಅದು ಬಿಜೆಪಿ ವರಿಷ್ಠ ಲಾಲ್ ಕೃಷ್ಣಾ ಅಡ್ವಾನಿಯವರ ಕುರಿತು ನಮ್ಮ ನಾಯಕ ಯಡಿಯೂರಪ್ಪನವರಿಗೆ ಆಪಾರ ಗೌರವ ತೋರಿಸುತ್ತದೆ.

ಪ್ರಶ್ನೆ 6. ಬಿಜೆಪಿ-ಜೆಡಿಎಸ್‌ ಸರ್ಕಾರದ ಆಗಿನ ಇನ್‌ ಚಾರ್ಜ್‌ ರಾಜನಾಥ್‌ ಸಿಂಗ್‌ ಮತ್ತು ಹೆಚ್‌.ಡಿ.ದೇವೇಗೌಡರ ನಡುವೆ ಮಾತುಕತೆ ವಿಫ‌ಲವಾಗಿ ಜೆಡಿಎಸ್‌ ವಿರುದ್ಧವಾಗಿ ಬಿಜೆಪಿಯಿಂದ ವಿಶ್ವಾಸ ದ್ರೋಹ ಅಂತ ಭಾರಿ ಪ್ರತಿಭಟನೆ ಮಾಡಿ ರಾಜ್ಯಾದ್ಯಂತ ಪ್ರತಿಭಟನೆ ಯಾತ್ರೆ ಹೊರಟ ಯಡಿಯೂರಪ್ಪ ಅವರು ತುಮಕೂರಿನಿಂದ ರಾತ್ರೋರಾತ್ರಿ ವಾಪಸ್ಸು ಬಂದು ಮತ್ತೆ ಜೆಡಿಎಸ್‌ ಜೊತೆ ಸೇರಿ ಸರ್ಕಾರ ರಚಿಸಿದ್ದೇಕೆ?

Ans- ಈ ಪ್ರಶ್ನೆಯನ್ನು ಕೇಳುವ ಬದಲು ನಿಮ್ಮನ್ನು ನೀವು ಮೊದಲು ಆತ್ಮಾವಲೋಕನ ಮಾಡಿಕೊಳ್ಳಿ. ಅಷ್ಟೊ0ದು ಆಸೆ ಇದ್ದಿದ್ದರೆ ಅವತ್ತು ರಾಜೀನಾಮೆ ಕೊಡದೆ ದೇವೇಗೌಡರು ಹೇಳಿದ ಹಾಗೆ(ಈಗ ಮಾಡುತ್ತೀರುಹಾಗೆ) ಕೇಳ್ತಾ ಇರಬೇಕಾಗಿತ್ತು ಮತ್ತು ನೀವು ಈಗ ಗೂಟದ ಕಾರಿನಲ್ಲಿ ಒಡಾಡುತ್ತೀರಲಿಲ್ಲ.

ಪ್ರಶ್ನೆ 7. 2005ರಲ್ಲಿ ಬಿಜೆಪಿ ತೊರೆದು ಜೆಡಿಎಸ್‌ಗೆ ಮತ್ತು ಕಾಂಗ್ರೆಸ್‌ ಸೇರಲು ತೀರ್ಮಾನ ಮಾಡಿದ ಸಂದರ್ಭದಲ್ಲಿ ಮಾಧ್ಯಮಗಳಿಗೆ ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದು ಹೇಳಿಕೆ ನೀಡಿ ಪಕ್ಷದ ನಾಯಕರುಗಳಿಗೆ ಬಿಜೆಪಿಯೊಂದಿಗೆ ನನ್ನ ಸಂಬಂಧ ಮುಗಿಯಿತು ಎಂದು ತಿಳಿಸಿ ಖಾತೆಗಾಗಿ ವ್ಯಾಪಾರ ಮಾಡಿದ್ದು ಸುಳ್ಳಾ?

Ans- ವ್ಯಾಪಾರ? ನಾವೇನು ಶೆಟ್ಟರೇ ವ್ಯಾಪಾರ ಮಾಡೊಕೇ? ಅಥವಾ ಸದಾನಂದ ಗೌಡರಾ ಒಂದು ಪಕ್ಷದಲ್ಲಿದ್ದು ಇನ್ನೊಂದು ಪಕ್ಷದ(ಜೆಡಿಎಸ್‌) ಅಣತಿಯ ನಡೆಯಲು (ನಾಚಿಕೆಯಾಗಬೇಕು)... 40 ವರ್ಷಗಳ ಕಾಲ ಪಕ್ಷಕ್ಕಾಗಿ ಮನೆ, ಮಠ, ಸಂಸಾರ ಯಾವುದನ್ನು ಲೆಕ್ಕಿಸದೆ ಪಕ್ಷ ಕಟ್ಟಿದ್ದಾರೆ(ಅಧಿಕಾರವೇ ಬೇಕಿದ್ದರೆ ಅಷ್ಟು ವರ್ಷ ಬಿಜೆಪಿಯಲ್ಲಿರುತ್ತಿರಲಿಲ್ಲ). ಪಕ್ಷ ತೊರೆದ ನಂತರ ಈ ಎಲ್ಲ ಪ್ರಶ್ನೆಗಳು ನೆನಪಾಗುತ್ತೀವೆಯೇ???. 2005 ಅಥವಾ 2008 ರಲ್ಲೇ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೊಷಣೆ ವೇಳೆ ನೆನಪಾಗಲಿಲ್ಲವೇ?

ಪ್ರಶ್ನೆ 8. ನಿಮ್ಮೊಂದಿಗೆ ಸದಾ ಜೊತೆಗಿದ್ದ ಡಾ.ವಿ.ಎಸ್‌.ಆಚಾರ್ಯರವರು ನಿಧನರಾದ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಶೋಕ ನಿರ್ಣಯ ಕೈಗೊಂಡಾಗ ತಾವು ಶಾಸಕರೊಂದಿಗೆ ಗೋಲ್ಡನ್‌ ಪಾಮ್‌ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿ ವಿಧಾನಸಭೆಗೆ ಹಾಜರಾಗದೆ ನಿಮ್ಮ ಜೊತೆ ಸದಾ ಬೆನ್ನೆಲುಬಾಗಿದ್ದ ವ್ಯಕ್ತಿಗೆ ತಾವು ಅಗೌರವ ತೋರಲಿಲ್ಲವಾ?

Ans- ಡಾ.ವಿ.ಎಸ್‌.ಆಚಾರ್ಯರವರನ್ನು ಯಡಿಯೂರಪ್ಪನವರು ಯಾವತ್ತು ಬಿಟ್ಟುಕೊಟ್ಟಿಲ್ಲ, ಆಚಾರ್ಯರನ್ನು ನೀವು ಎಷ್ಟೊ ಬಾರಿ ನಿಮ್ಮ ದುರಾಸೆಗೆ ಗೃಹ ಸಚಿವ ಪದವಿಯಿ0ದ ಕೆಳಗಿಸಲು ಪ್ರಯತ್ನಿಸಿದ್ದೀರಿ, ಒಂದು ಬಾರಿಯಂತು ಸಚಿವ ಪದವಿಯಿಂದ ಇಳಿಸಿ ರಾಜ್ಯಸಭೆಗೆ ಕಳಿಸಲು ನಿಂತಿದ್ದಿರಿ, ಆದರೂ ಯಡಿಯೂರಪ್ಪನವರು ಅವರ ಬೆನ್ನೆಲುಬಾಗಿ

ಎಲ್ಲ ಸಮಯದಲ್ಲೂ ನಿಂತಿದ್ದರು. ಅಷ್ಟಕ್ಕೂ ಅವತ್ತು ರೆಸಾರ್ಟ್‌ನಲ್ಲಿ ನಿಮ್ಮ ಮುಖ್ಯಮಂತ್ರಿ ಸೇರಿ ನೀವು ಟಿಕೆಟ್‌ ಕೊಟ್ಟಿರುವ 60 ಹೆಚ್ಚು ಶಾಸಕ ಮತ್ತು ಸಚಿವರುಗಳಿದ್ದರು, ಇದು ನಿಮ್ಮ ಗಮನದಲ್ಲಿರಲಿ.

ಪ್ರಶ್ನೆ 9. ತೊಟ್ಟಿಲು ತೂಗಿ ಮಗುವನ್ನೂ ಚಿವುಟುವಂತೆ ಧನಂಜಯಕುಮಾರ್ ಅವರನ್ನು ಬಳಸಿಕೊಂಡು ಕೀಳು ರಾಜಕಾರಣ ಮಾಡುತ್ತಿರುವುದು ಸುಳ್ಳಾ?

Ans- ಹಾಗಾದರೇ, ಅನ0ತಕುಮಾರ ಕೂಡ ನಿಮ್ಮನ್ನೆಲ್ಲ ಬಳಸಿಕೊಂಡು ಕೀಳು ರಾಜಕಾರಣ ಮಾಡುತ್ತಿರುವುದು ಸುಳ್ಳಾ? ದಿನಬೆಳಗಾದರೆ, ಯಡಿಯೂರಪ್ಪನವರು ಭ್ರಷ್ಟ ಅನ್ನೊ ನೀವು, ನಿಮ್ಮ ಪಕ್ಷದ ಈಶ್ವರಪ್ಪ, ಅಶೋಕ್ (ಸಾಮಾನ್ಯ ಶಾಸಕರಲ್ಲ ಇವರಿಬ್ಬರು ಉಪಮುಖ್ಯಮಂತ್ರಿಗಳು), ಲೋಕಾಯುಕ್ತ ಕೊರ್ಟೆಗೆ ಒಡಾಡ್ತಿರೊ ಆ ನಿಮ್ಮ ಪಕ್ಷದ ಪರಿಶುದ್ಧ

ಎಂದು ಬಡಾಯಿಕೊಚ್ಚಿಕೊಳ್ಳುವ ಸದಾನಂದ ಗೌಡ, ಎಮ್. ವಿಶ್ವನಾಥ, ಸುರೇಶ್, ಸೋಮಣ್ಣ, ಸಿ.ಟಿ.ರವಿ, ವ್ಯ.ಸಂಪಂಗಿ, ಕಟ್ಟಾ, ನಿರಾಣಿ, ರಾಮದಾಸ್(ಗೋ. ಮಧುಸೂದನ್ ಅವರೆ ನೀವು ರಾಮದಾಸ್ ಜೊತೆ ಭೂಕಬಳಿಕೆ ವಿಷಯದಲ್ಲಿ ಕಿತ್ತಾಡಿಕೊಂಡಿದ್ದು) ಮರೆತ್ತೀದ್ದಾರಾ?

ಪ್ರಶ್ನೆ 10. ನಿಮ್ಮ ಶಿಷ್ಯ ಬಿ.ಜೆ.ಪುಟ್ಟಸ್ವಾಮಿಯವರು ಜೆಡಿಎಸ್‌ ನಾಯಕ ಕುಮಾರಸ್ವಾಮಿಯವರ ಮೇಲೆ ಮಾಡಿದ ಆರೋಪಗಳ ಕುರಿತು ಈಗೇಕೆ ನಿಮ್ಮ ಧ್ವನಿ ಉಡುಗಿ ಹೋಗಿದೆ? ದಯವಿಟ್ಟು ಈ ಎಲ್ಲಾ ಪ್ರಶ್ನೆಗಳಿಗೆ ರಾಜ್ಯದ ಜನತೆ ಮುಂದೆ ಉತ್ತರಿಸಿ ಎಂದು ಆಗ್ರಹಿಸಿದ್ದಾರೆ.

Ans- ನೀವು ಕೇಳುತ್ತೀರುವುದು ನೊಡೀದರೇ, ಕೆಜೆಪಿ ಪಕ್ಷವು ಜೆಡಿಎಸ್ ಅಥವಾ ಕುಮಾರಸ್ವಾಮಿಯವರ ಜೊತೆ ಒಪ್ಪಂದ ಮಾಡಿಕೊಂಡ್ಡಿದ್ದೆವೇ ಅನ್ಯಾನೋ ಹಾಗಿದೆ (JOKE OF THE DAY!). ಹೌದು, ನೀವ್ ಯ್ಯಾಕೆ ಜೆಡಿಎಸ್‌ ಅಥವಾ ಕುಮಾರಸ್ವಾಮಿಯವರ ಬಗ್ಗೆ ಒಂದು ಬಾರಿಯು ಚಕಾರವೆತ್ತುತ್ತೀಲ್ಲಾ.. ನಮಗೆ ಎಲ್ಲಾ ಪಕ್ಷಗಳಂತೆ ಹಾಗೇ ಜೆಡಿಎಸ್‌ ಕೂಡ ನಮ್ಮ ಎದುರಳಿಯೇ. ಆದರೇ ನಿಮ್ಮನ್ನು ನೊಡಿದರೆ ನಿಮಗೆ KJP ಮಾತ್ರ ಎದುರಾಳಿ ಅನ್ನೊ ಹಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Assembly elections- In an open challenge BJP leader Go. Madhusudan Swami had posed 10 questions to BS Yeddyurappa. Butt Karnataka Assembly elections- a KJP supporter replies to BJP Legislator G Madhusudan 10 questions. 

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more