• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಜೆಪಿಗೆ ಆಸೆಗೆ ಅಡ್ಡಗಾಲಾದ 'ದೇವರ ದುಡ್ಡು'

By Mahesh
|

ಬೆಂಗಳೂರು, ಏ.26: ಕಳೆದ ನಾಲ್ಕು ವರ್ಷಗಳಿಂದ ಬಿಜೆಪಿ ಸರ್ಕಾರ ಮಠಗಳಿಗೆ ನೀಡಿರುವ 'ದೇವರ ದುಡ್ಡು' ಕನಿಷ್ಠವೆಂದರೂ 500 ಕೋಟಿ ರು ದಾಟುತ್ತಿದೆ. ಇದನ್ನು ಟ್ರಂಪ್ ಕಾರ್ಡ್ ಆಗಿ ಬಳಸಲು ಬಿಜೆಪಿ ರಣತಂತ್ರ ರೂಪಿಸಿತ್ತು. ಆದರೆ, ಪ್ರಸಕ್ತ ಸಾಲಿನ ಬಜೆಟ್ಟಿನಲ್ಲಿ ಮಠಮಾನ್ಯಗಳಿಗೆ ಕೋಟ್ಯಂತರ ರುಪಾಯಿ ಅನುದಾನ ಬಗ್ಗೆ ಸ್ಪಷ್ಟನೆ ಕೋರಿ ಹೈಕೋರ್ಟ್ ನಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿಯಾಗಿದೆ.

ಸಾರ್ವಜನಿಕರ ಹಣವನ್ನು ಬೇಕಾಬಿಟ್ಟು ಬಿಡುಗಡೆ ಮಾಡಿರುವುದನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ದಸಂಸ ಸಂಚಾಲಕ ಎಚ್.ಮಾರಪ್ಪ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಡಿ.ಎಚ್.ವಘೇಲಾ ಹಾಗೂ ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ, ವಿಚಾರಣೆಯನ್ನು ಮುಂದೂಡಿದೆ.

ಬಿಜೆಪಿ ಟ್ರಂಪ್ ಕಾರ್ಡ್ ಬಗ್ಗೆ ಈ ಮುಂಚೆ ವಿಸ್ತರವಾಗಿ ನಮ್ಮಲ್ಲಿ ಒಂದು ಲೇಖನ ಪ್ರಕಟವಾಗಿತ್ತು. ಅದರಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಮುಂದಿಟ್ಟುಕೊಂಡು ನೀತಿ ಸಂಹಿತೆ ಜಾರಿ ಇರುವಾಗಲೇ ಮಠ ಮಾನ್ಯಗಳಿಗೆ ಭೂಮಿ ನೀಡಿಕೆ ಬಗ್ಗೆ ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಗಿದೆ.

ಇದು ಮುಂಬರುವ ವಿಧಾನಸಭೆಗೂ ಅಡ್ಡಿಯಾಗುವ ಲಕ್ಷಣಗಳಿದೆ. ಆದರೂ, ಬಿಜೆಪಿ ಮಾತ್ರ ಮಂತ್ರದಿಂದ ಮತ ಗಳಿಕೆ ತಂತ್ರಕ್ಕೆ ಶರಣಾಗಿದೆ ಎಂಬ ಸಾಲು ಕೊನೆ ಗಳಿಕೆಯಲ್ಲಿ ಸೇರಿಸಿದ್ದು ಈಗ ನಿಜವಾಗುತ್ತಿದೆ. ಈ ನಿರ್ಣಯ ಬಿಜೆಪಿಗೆ ಮುಳುವಾಗುತ್ತದೆಯೇ? ಅಥವಾ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುತ್ತಾ ಅನುದಾನ ಸಮರ್ಥಿಸಿಕೊಂಡು ಮುಂದುವರೆಯಲಿದೆಯೆ? ಕೋರ್ಟ್ ನಿರ್ಣಯ ಏನು? ಮುಂದೆ ಓದಿ....

ದೇವರ ದುಡ್ಡಿನ ಹಿಂದೆ ಬಿಜೆಪಿ

ದೇವರ ದುಡ್ಡಿನ ಹಿಂದೆ ಬಿಜೆಪಿ

ಸಂವಿಧಾನದ ನಿಯಮದ ಪ್ರಕಾರ, ಸಾರ್ವಜನಿಕರ ಹಣವನ್ನು ಬೇಕಾಬಿಟ್ಟಿ ಹಂಚಲು ಸರ್ಕಾರಕ್ಕೆ ಅವಕಾಶವಿಲ್ಲ. ರಾಜ್ಯದ ಮುಖ್ಯಮಂತ್ರಿಗಳು ಲಿಂಗಾಯತ ಸಮುದಾಯಕ್ಕೆ ಸೇರಿದವರಾದ ಹಿನ್ನೆಲೆಯಲ್ಲಿ ಲಿಂಗಾಯತ ಮಠಗಳಿಗೆ ಅನುದಾನದ ಮಹಾಪೂರವೇ ಹರಿದಿದೆ.

ಆದರೆ, ಈ ಮಠಗಳು ಎಂದೂ ಸರ್ಕಾರದ ಅನುದಾನದ ಮೇಲೆ ಅವಲಂಬಿತವಾಗಿಲ್ಲ. ಆದರೆ, ಮುಖ್ಯಮಂತ್ರಿಗಳು ತಮ್ಮ ಸಮುದಾಯದ ಜನರನ್ನು ಸಂತಸಪಡಿಸಲು ಮಠಗಳಿಗೆ ಅನುದಾನ ನೀಡಿದ್ದಾರೆ. ಇದು ತೆರಿಗೆಯ ಹಣವಾಗಿದ್ದು, ಹಿಂಪಡೆಯುವಂತೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ದೇವರ ದುಡ್ಡಿನ ಹಿಂದೆ ಬಿಜೆಪಿ

ದೇವರ ದುಡ್ಡಿನ ಹಿಂದೆ ಬಿಜೆಪಿ

ಬಜೆಟ್ ಮಿತಿ 1 ಲಕ್ಷ ಕೋಟಿ ರು ದಾಟಿಸಿದ ಸಾಧನೆ ಜೊತೆಗೆ ಕೃಷಿ ಬಜೆಟ್ ಬಿಜೆಪಿಯ ಮುಖ್ಯ ಸಾಧಕವಾಗಿತ್ತು.

ಜೊತೆಗೆ ವಾಜಪೇಯಿ ಆರೋಗ್ಯ ಶ್ರೀ, ಭಾಗ್ಯಲಕ್ಷ್ಮಿ ಯೋಜನೆ, ಯಡಿಯೂರಪ್ಪ ಅವರ ಸೈಕಲ್ ಯೋಜನೆ, ಸಂಧ್ಯಾ ಸುರಕ್ಷಾ, ವೃದ್ಧರು ಅಬಲೆಯರಿಗೆ ಮಾಸಿಕ ಪಿಂಚಣಿ ಎಲ್ಲವೂ ಬಿಜೆಪಿಗೆ ಜನರ ಮುಂದೆ ಮುಖ ತೋರಿಸಲಿಕ್ಕೆ ಸಾಕಾಗಿತ್ತು.ಆದರೆ, ಈಗ ಚುನಾವಣೆ ಸಮಯದಲ್ಲಿ ಪರೋಕ್ಷವಾಗಿ ಅನುದಾನದ ಬಗ್ಗೆ ಪ್ರಸ್ತಾಪ ಎದ್ದು ಬಂದಿದೆ.

ದೇವರ ದುಡ್ಡಿನ ಹಿಂದೆ ಬಿಜೆಪಿ

ದೇವರ ದುಡ್ಡಿನ ಹಿಂದೆ ಬಿಜೆಪಿ

ಶೆಟ್ಟರ್: ಅಂದಾಜು ಒಟ್ಟು 135 ಕೋಟಿ, ಲಿಂಗಾಯತ ಮಠಗಳಿಗೆ ಭಾರೀ ಅನುದಾನ, ಉತ್ತರ ಕರ್ನಾಟಕದ ಮೇಲೆ ಕಣ್ಣು, ದಾವಣಗೆರೆ ವಿರಕ್ತ ಮಠ ಜೀರ್ಣೋದ್ಧಾರಕ್ಕೆ 5 ಕೋಟಿ * ಮುಳಗುಂದದ ಶಿವಯೋಗಿ ಮಠಕ್ಕೆ 2 ಕೋಟಿ * ಹಿರೇಕೆರೂರಿನ ಸರ್ವಜ್ಞ ಪೀಠಕ್ಕೆ 1 ಕೋಟಿ * ಮಡಿವಾಳ ಮಾಚಯ್ಯ ಜನ್ಮಸ್ಥಳ ಅಭಿವೃದ್ಧಿಗೆ, ಸುತ್ತೂರಿನ ವಿಜ್ಞಾನ ಕೇಂದ್ರಕ್ಕೆ 5 ಕೋಟಿ..ಇತ್ಯಾದಿ ನೀಡಿದ್ದಾರೆ

ದೇವರ ದುಡ್ಡಿನ ಹಿಂದೆ ಬಿಜೆಪಿ

ದೇವರ ದುಡ್ಡಿನ ಹಿಂದೆ ಬಿಜೆಪಿ

ಸದ್ಯಕ್ಕೆ ಬಿಜೆಪಿಯ ಟ್ರಂಪ್ ಕಾರ್ಡ್ ಮಠಕ್ಕೆ ನೀಡಿದ ಹಣ ಮತಗಳಲ್ಲಿ ಪರಿವರ್ತನೆ ಮುಳುವಾಗಿದೆ. ರೈತರಿಗೆ ಭೂಮಿ ನೀಡದೆ ಮಠಗಳಿಗೆ ಭೂಮಿ ನೀಡಲು ನಾಚಿಕೆಯಾಗುವುದಿಲ್ಲವೇ ಎಂದು ಸರ್ಕಾರವನ್ನು ಹೈಕೋರ್ಟ್ ನ್ಯಾ ರಾಮಮೋಹನ್ ರೆಡ್ಡಿ ಪ್ರಶ್ನಿಸಿದ್ದರು.

ಮೈಸೂರಿನ ರೈತರು ಹಾಕಿದ ಪಿಟೀಷನ್ ಬಿಜೆಪಿ ಚುನಾವಣಾ ತಂತ್ರವನ್ನೇ ಅಲುಗಾಡಿಸಿತ್ತು. ಈಗ ಹೈ ಕೋರ್ಟಿನ ತೀರ್ಪು ಪ್ರಸಕ್ತ ಬಜೆಟ್ ಅನುದಾನಕ್ಕೆ ಮಾತ್ರ ಸೀಮಿತವಾಗಿದೆ.

ದೇವರ ದುಡ್ಡಿನ ಹಿಂದೆ ಬಿಜೆಪಿ

ದೇವರ ದುಡ್ಡಿನ ಹಿಂದೆ ಬಿಜೆಪಿ

ಮಠಗಳಿಗೆ ನೀಡಿರುವ 500 ಕೋಟಿ ರು ಸಾರ್ವಜನಿಕರ ತೆರಿಗೆ ದುಡ್ಡು, ಸರ್ಕಾರ ತನ್ನ ಜೇಬಿನಿಂದ ನೀಡಿಲ್ಲ ಎಂದು ನ್ಯಾ. ರೆಡ್ಡಿ ಗುಡುಗಿದ್ದಾರೆ. ಮಂಡಕಳ್ಳಿ ವಿಮಾನ ನಿಲ್ದಾಣಕ್ಕಾಗಿ ಭೂಮಿ ಕೊಟ್ಟು ತಲೆ ಮೇಲೆ ಕೈಹೊತ್ತು ಕೂತ ಮೈಸೂರಿನ ಅನ್ನದಾತ ಸೇರಿದಂತೆ ರಾಜ್ಯದ ರೈತರೇ ಬಿಜೆಪಿ ಭವಿಷ್ಯ ಬರೆಯಬಲ್ಲರು. ಮಂತ್ರದಿಂದ ಮತಗಳಿಸಲು ಹೊರಟ ಬಿಜೆಪಿಯನ್ನು ತಿಮ್ಮಪ್ಪನೇ ಕಾಪಾಡಬೇಕು. ಸ್ಸಾರಿ.. ತಿಮ್ಮಪ್ಪ ಆಂಧ್ರದ ಪೇಟೆಂಟ್.. ಮಂತ್ರಾಲಯದ ರಾಯರೋ, ಧರ್ಮಸ್ಥಳದ ಮಂಜುನಾಥನೇ ದಿಕ್ಕು

ದೇವರ ದುಡ್ಡಿನ ಹಿಂದೆ ಬಿಜೆಪಿ

ದೇವರ ದುಡ್ಡಿನ ಹಿಂದೆ ಬಿಜೆಪಿ

ಮಠ ಮಾನ್ಯಗಳಿಗೆ ನೀಡಿದ ದೇಣಿಗೆಯನ್ನು ಮತಗಳಾಗಿ ಪರಿವರ್ತಿಸುವಂತೆ ಮಠಾಧೀಶರಿಗೆ ಬಿಜೆಪಿ + ಆರೆಸ್ಸೆಸ್ ಮನವಿ ಸಲ್ಲಿಸಿದೆ. ಇದು ಎಂದಿನ ಕ್ರಮವಾದರೂ ಈ ಬಾರಿ ಬಿಜೆಪಿಗೆ ಇದೇ ಮುಖ್ಯ ವಾಹಿನಿಯಾಗಿದೆ. ಇದಕ್ಕಾಗೆ ದೇವರು ದಿಂಡರು ಅಷ್ಟಾಗಿ ನಡೆದುಕೊಳ್ಳದ ಜಗದೀಶ್ ಶೆಟ್ಟರ್ ಅವರು ಕೂಡಾ ಮೊನ್ನೆ ಮುಕ್ತಾಯವಾದ ಟಿ. ನರಸೀಪುರದ ಕುಂಭಮೇಳ ಸೇರಿದಂತೆ ಮಠ ಮಾನ್ಯಗಳಿಗೆ ಅಡ್ಡ ಬೀಳುತ್ತಿದ್ದಾರೆ. ಥೇಟ್ ಯಡಿಯೂರಪ್ಪ ಅವರ ಕಾಪಿ. ಆದರೆ, ಯಡಿಯೂರಪ್ಪ ಹಾಗೂ ಸದಾನಂದ ಗೌಡರ ಕಾಲದಲ್ಲಿ ಕೊಟ್ಟ ರೊಕ್ಕಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka High court issued notice to BJP government and Chief Secretary about Rs 500 Cr Largesse to Maths and Seers during its tenure 2008-2012 Ahead of Assembly Election BJP is planned gain advantage from offering to God.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more