ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಜಕ್ಕೂ ಈ ಬಾರಿ ಕಿಂಗ್ ಮೇಕರ್ ಯಾರು?

By Srinath
|
Google Oneindia Kannada News

ಬೆಂಗಳೂರು, ಏ.25: ಈ ಪ್ರಶ್ನೆಗೆ ಉತ್ತರಿಸುವ ಮುನ್ನ ಮತ್ತೊಂದು ಪ್ರಶ್ನೆ. ನಿಜಕ್ಕೂ ಕಿಂಗ್ ಮೇಕರ್ ಅಗತ್ಯವಿದೆಯಾ? ಈ ಕಿಂಗ್ ಮೇಕರ್ ಸಹವಾಸ ಏಕೆ? ಮತದಾರರೇ, ಅಂದು ನಿಮಗೆ ಎಷ್ಟೇ ಕಡುಕಷ್ಟ ಬಂದರೂ ಮತಗಟ್ಟೆವರೆಗೂ ನಡೆದು ಬಂದು ನಿಮ್ಮ ಅಮೂಲ್ಯ ಮತ ಚಲಾಯಿಸಿ, ಪಕ್ಷ ಯಾವುದೇ ಆದರೂ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗುವಂತೆ ನೋಡಿಕೊಳ್ಳಬಾರದೇಕೆ? ಕಳೆದ 5-7 ವರ್ಷಗಳಲ್ಲಿ ಕರ್ನಾಟಕದ ದುಸ್ಥಿತಿಯನ್ನು ನೆನಪಿಸಿಕೊಳ್ಳುತ್ತಾ, ಮತದಾರರು ಈ ಬಗ್ಗೆ ಗಂಭೀರವಾಗಿ ಯೋಚಿಸುವುದು ಒಳಿತು.

ಏಕೆಂದರೆ ಇಲ್ಲಿ ಹೇಳಹೊರಟಿರುವುದು ಬೇರೆ ಇನ್ನೇನನ್ನನೋ. ಸಾಮಾನ್ಯವಾಗಿ ಕಿಂಗ್ ಮೇಕರ್ ಅಂದತಕ್ಷಣ ಯಾವುದೋ ಒಂದು ಪಕ್ಷದ ನಾಯಕನ ಚಿತ್ರಣ ಮೂಡುತ್ತದೆ. ಚುನಾವಣೆಗೆ ಮುನ್ನ ಬಿಡಿ, ಒಂದಲ್ಲ ಹತ್ತು ನಾಯಕರು ನಾನೇ ಕಿಂಗ್ ಮೇಕರ್ ಅನ್ನುತ್ತಿರುತ್ತಾರೆ. ಆದರೆ ಇಲ್ಲಿ ಪಕ್ಷ ರಾಜಕಾರಣ ಬಿಟ್ಟು, ಭೌಗೋಳಿಕವಾಗಿ ಹೇಳುವುದಾದರೆ ಕರ್ನಾಟಕದ ಯಾವ ಭಾಗ ಹೆಚ್ಚು ಶಾಸಕರನ್ನು ಬೆಂಗಳೂರಿನವರೆಗೂ ಚುನಾಯಿಸಿ, ಕಳುಹಿಸುತ್ತದೆ ಎಂಬುದು.

Goegraphically who will be Kingmaker maker

ಈ ಹಿನ್ನೆಲೆಯಲ್ಲಿ ಕರ್ನಾಟಕದ ನೆಲೆಗಳನ್ನು ಅರಸುತ್ತಾ ಹೋದರೆ ದೃಗ್ಗೋಚರವಾಗುವುದು ನಿಸ್ಸಂಶಯವಾಗಿ ಉತ್ತರ ಕರ್ನಾಟಕವೇ. ಕರ್ನಾಟಕ ರಾಜಕೀಯದ ಹಣೆಬರೆಹವನ್ನು ಕೆತ್ತುವುದೇ ಉತ್ತರ ಕರ್ನಾಟಕದ ಮಂದಿ.

ಸುಮಾರು 10 ಮಂದಿ ಇಲ್ಲಿನವರು ಮುಖ್ಯಮಂತ್ರಿಗಳಾಗಿದ್ದಾರೆ. ರಾಮಕೃಷ್ಣ ಹೆಗಡೆಯವರ ಜನತಾ ಪಕ್ಷ 1989ರಲ್ಲಿ 139 ಸ್ಥಾನ ಗೆದ್ದಿತ್ತು. ಅವುಗಳ ಪೈಕಿ ಇಲ್ಲಿಂದಲೇ 60 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಅದೇ ವರ್ಷ ವೀರೇಂದ್ರ ಪಾಟೀಲರ ಕಾಂಗ್ರೆಸ್ ಪಕ್ಷವು ಒಟ್ಟಾರೆಯಾಗಿ 176 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ಅದರಲ್ಲಿ 68ನ್ನು ಇಲ್ಲಿಂದಲೇ ಗೆದ್ದುಕೊಂಡಿತ್ತು. 2004ರ ಚುನಾವಣೆಯಲ್ಲಿ ಉತ್ತರ ಕರ್ನಾಟಕದ ಅವಿಭಜಿತ 12 ಜಿಲ್ಲೆಗಳಲ್ಲಿ ಬಿಜೆಪಿ 41 ಸ್ಥಾನ ಜಯಿಸಿತ್ತು. ಆಗ ಬಿಜೆಪಿ ರಾಜ್ಯದಲ್ಲಿ ಒಟ್ಟು 96 ಸ್ಥಾನ ಪಡೆದಿತ್ತು.

ಉತ್ತರ ಕರ್ನಾಟಕ ಅಧಿಕಾರದ ಹೆಬ್ಬಾಗಿಲು: ಇದರರ್ಥ ಉತ್ತರ ಕರ್ನಾಟಕ ಅಧಿಕಾರದ ಹೆಬ್ಬಾಗಿಲು ಎಂಬುದು ಜನಪ್ರತಿನಿಧಿಗಳಿಗೆ ಮನದಟ್ಟಾಗಿದೆ. ಜತೆಗೆ ಮುಖ್ಯಮಂತ್ರಿ ಪಟ್ಟವೂ ಇಲ್ಲಿಂದಲೇ ಜನಜನಿತವಾಗುತ್ತದೆ ಎಂಬ ಸರಳ ಲೆಕ್ಕಾಚಾರವೂ ಇದೆ.

ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಲಿಂಗಾಯತ ಮತದಾರರು ಇದ್ದಾರೆ. ದಕ್ಷಿಣ ಕರ್ನಾಟಕ ಒಕ್ಕಲಿಗರಿಗೆ ಮಣೆ ಹಾಕುತ್ತದೆ. ಚುನಾವಣೆಯಲ್ಲಿ ವರ್ಕ್ ಔಟ್ ಆಗುವುದೇ ಇದು. ಹಾಗಾಗಿಯೇ ಪಕ್ಷ ಯಾವುದೇ ಇರಲಿ ಚುನಾವಣೆ ವೇಳೆಯಲ್ಲಿ ಉತ್ತರ ಕರ್ನಾಟಕಕ್ಕೇ ಹೆಚ್ಚಿನ ಮಹತ್ವ ನೀಡುತ್ತದೆ.

ಹಾಗಂತ ರಾಜ್ಯದ ಈ ಭೂಭಾಗವನ್ನು ರಾಜಕೀಯ ಪಕ್ಷಗಳು ನಿರ್ಲಕ್ಷಿಸಿತೋ ಖಂಡಿತ ಭಾರಿ ಹಿನ್ನಡೆ ಅನುಭವಿಸಬೇಕಾಗುತ್ತದೆ. ಕಾಂಗ್ರೆಸ್ ಪಕ್ಷದ ಉದಾಹರಣೆಯನ್ನೇ ತೆಗೆದುಕೊಂಡರೆ 1994ರ ಚುನಾವಣೆಯಲ್ಲಿ ಕೇವಲ 22 ಸ್ಥಾನ ಇಲ್ಲಿಂದ ಜಯಿಸಿತ್ತು. 1989ರಲ್ಲಿ ಬಿಜೆಪಿ ಶೇ.50ರಷ್ಟು ಸ್ಥಾನಗಳನ್ನು ಇಲ್ಲಿಂದಲೇ ಗೆದ್ದಿತ್ತು.

1999ರಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರದ ಗದ್ದುಗೆಗೇರಿದಾಗ ಒಟ್ಟು 132ರಲ್ಲಿ ಉತ್ತರ ಕರ್ನಾಟಕದಿಂದ ಅದು 60 ಸ್ಥಾನ ಗಳಿಸಿತ್ತು. ಮತ್ತೆ 2004ರಲ್ಲಿ ಕಾಂಗ್ರೆಸ್ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ (ಒಟ್ಟು 65 ಸ್ಥಾನಗಳ ಪೈಕಿ) ಕೇವಲ 24 ಗೆದ್ದಿತ್ತು.

ಉತ್ತರ ಕರ್ನಾಟಕದ ಈ ಪ್ರವೃತ್ತಿಗೆ ಒಂದೇ ಒಂದು ಕಳಂಕವೆಂದರೆ ಕಳೆದೈದು ವರ್ಷಗಳ ಬಿಜೆಪಿ ಆಡಳಿತ!

English summary
Karnataka Assembly Election- Goegraphically who will be Kingmaker maker. Undoubtedly North Karnataka is a leader in shaping Karnataka politics. Nearly 10 chief ministers from this region have shaped the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X