ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಣ್ಣೂರು ಉಗ್ರರ ಸೆರೆ: ಮತ್ತಷ್ಟು ಸ್ಫೋಟಕ ಮಾಹಿತಿ

By Srinath
|
Google Oneindia Kannada News

ಕಾಸರಗೋಡು, ಎ.25: ಕಾಸರಗೋಡಿನ ಕಣ್ಣೂರು ಸಮೀಪದ ಮೈಯಿಲ್ ನಾರಾತ್ ಎಂಬಲ್ಲಿ ಭಯೋತ್ಪಾದಕರ ತಾಣವನ್ನು ಪತ್ತೆ ಮಾಡಿರುವ ಪೊಲೀಸರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಗೆ ಸೇರಿದ 21 ಮಂದಿಯನ್ನು ಮಂಗಳವಾರ ಬಂಧಿಸಿದ್ದಾರೆ.

ತರಬೇತಿ ಕೇಂದ್ರದಲ್ಲಿ National Development Front (NDF), Popular Front of India ಮತ್ತು Social Democratic Party of India (NDFನ ರಾಜಕೀಯ ಅಂಗ) ಸಂಘಟನೆಗಳ ಧ್ವಜಗಳು ಪತ್ತೆಯಾಗಿವೆ ಎಂದು ಕಣ್ಣೂರು ಡಿವೈ ಎಸ್ಪಿ. ಪಿ ಸುಕುಮಾರನ್ ತಿಳಿಸಿದ್ದಾರೆ.

ತನಿಖೆ NIAಗೆ ವಹಿಸಲು ಆಗ್ರಹ: ಕಣ್ಣೂರು ಭಯೋತ್ಪಾದಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿರುವುದು ಆತಂಕಕಾರಿ. ಕಣ್ಣೂರಿನಲ್ಲಿ ಉಗ್ರ ತರಬೇತಿ ಕೇಂದ್ರ ಪತ್ತೆಯಾಗಿರುವುದು ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ಈ ಕೂಡಲೇ National Investigation Agency ಸ್ಥಳಕ್ಕೆ ಆಗಮಿಸಿ, ತನಿಖೆ ಕೈಗೆತ್ತಿಕೊಳ್ಳಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ ರಂಜಿತ್ ಆಗ್ರಹಿಸಿದ್ದಾರೆ.

kannur-pfi-terrorists-arrest-demand-for-nia-probe
ಅಂತಾರಾಷ್ಟ್ರೀಯ ನಂಟು: ಪೊಲೀಸ್ ದಾಳಿ ವೇಳೆ ತರಬೇತಿ ಕೇಂದ್ರದಲ್ಲಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಸಂಘಟನೆಗೆ ಸೇರಿದ ಗುರುತಿನ ಚೀಟಿ, ಸಾಹಿತ್ಯ ಸಿಕ್ಕಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಬಂಧಿತರು ಸ್ಥಳೀಯರಲ್ಲ. ಆದರೆ ಕೇರಳ ರಾಜ್ಯದವರೇ ಎಂದು ಪೊಲೀಸರು ತಿಳಿಸಿದ್ದಾರೆ, ಬಂಧಿತರನ್ನು Popular Front of Indiaಗೆ ಸೇರಿದ ಕಾರ್ಯಕರ್ತರು ಎಂದು ಗುರುತಿಸಲಾಗಿದೆ. ಬಂಧಿತರ ಹೆಸರುಗಳು:
ಅಬ್ದುಲ್ ಸಮದ್, ಪಿಸಿ ಫಹಾದ್, ಮಹಮ್ಮದ್ ಸಂರೀದ್, ಪಿ. ನೌಫಾಲ್, ಎಜೆ ಫೈಸಲ್, ಪಿ ಜಂಶೀರ್, ಷಫೀಕ್, ರಿಯಾಸ್, ಕೆಎಂ ಜಂಶೀರ್, ಪಿವಿ ಅಫೀಸ್, ಎಪಿ ಮಿಸಾಜ್, ಎ ಶಿಜನ್, ಮಹಮ್ಮದ್ ಅಬ್ಬಸೀರ್, ಸಿ ಅಜ್ಮಲ್, ಕೆಸಿ ಹಾಂಶಿ, ಸಿಪಿ ನೌಷಾದ್, ಇಕೆ ರಶೀದ್, ಎಕೆ ಸುಹೈಲ್, ಇಕೆ ಆಶಿಕ್, ಅಜ್ಮಲ್ ಹಾಗೂ ಕೆಪಿ ರಹಾಬ್.

ಇವರ ಪೈಕಿ ಪಿವಿ ಅಸೀಸ್ ಹಿಂದೂ ಐಕ್ಯವೇದಿ ಜಿಲ್ಲಾ ಸಂಚಾಲಕ, ಪುನ್ನೊಟ್ ನಿವಾಸಿ ಅಶ್ವಿನ್ ಕುಮಾರ್ ಅವರ ಹತ್ಯೆ ಪ್ರಕರಣದ ಆರೋಪಿ.

English summary
Terrorism- PFI terrorists arrest in Kannur- Demand for NIA probe. BJP district President K Ranjith demanded a National Investigation Agency (NIA) probe into the seizure of weapons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X