• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಂಗ್ರೆಸ್ ಪಕ್ಷದ ಗ್ರೇಟರ್ ಬೆಂಗಳೂರು ಪ್ರಣಾಳಿಕೆ

|

ಬೆಂಗಳೂರು, ಏ. 25 : ರಾಜ್ಯಕ್ಕೆ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು ನಗರವನ್ನು ಸಿಂಗಾಪುರ ಮಾಡುವ ಭರವಸೆ ನೀಡಿದ್ದರು. ಸದ್ಯ ಅಧಿಕಾರ ಪಡೆಯುವ ಉತ್ಸಾಹದಲ್ಲಿರುವ ಕಾಂಗ್ರೆಸ್ ಗ್ರೇಟರ್ ಬೆಂಗಳೂರು ಎಂಬ ಮಹಾನಗರದ ಪ್ರಣಾಳಿಕೆ ಬಿಡುಗಡೆ ಮಾಡಿ ಮತ್ತಮ್ಮೆ ಬೆಂಗಳೂರು ಅಭಿವೃದ್ದಿಯ ಮಂತ್ರ ಪಠಿಸಿದೆ.

ಬುಧವಾರ ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಬೆಂಗಳೂರು ನಗರದ ಅಭಿವೃದ್ಧಿಗಾಗಿ ಪ್ರತ್ಯೇಕವಾದ ಗ್ರೇಟರ್ ಬೆಂಗಳೂರು ಎಂಬ ವಿವಿಧ ಯೋಜನೆಗಳ ಭರವಸೆ ನೀಡಿದೆ. ಪಕ್ಷ ಅಧಿಕಾರಕ್ಕೆ ಬಂದರೆ ನಗರದ ಚಿತ್ರಣ ಬದಲಾವಣೆ ಮಾಡುವುದಾಗಿ ಪಕ್ಷ ಘೋಷಿಸಿದೆ.

ಸಂಚಾರ ದಟ್ಟಣೆ ನಿವಾರಣೆ, ಕುಡಿಯುವ ನೀರು ಪೂರೈಕೆ, ವರ್ತುಲ ರೈಲ್ವೆ ಯೋಜನೆ ಪ್ರಸ್ತಾಪ ಮುಂತಾದ ಭರವಸೆಗಳನ್ನು ಗ್ರೇಟರ್ ಬೆಂಗಳೂರು ಯೋಜನೆ ಹೊಂದಿದೆ.

ಬೆಂಗಳೂರು ಸುತ್ತಮುತ್ತಲಿನ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಕನಕಪುರ ಮುಂತಾದ ಪ್ರದೇಶಗಳ ಅಭಿವೃದ್ದಿ ಜೊತೆಗೆ ಬೆಂಗಳೂರನ್ನು ಅಭಿವೃದ್ಧಿ ಪಡಿಸುವುದು. ಬಿಬಿಎಂಪಿ ಕಾರ್ಯ ಕ್ಷೇತ್ರದ ವಿಸ್ತೀರ್ಣವನ್ನು ಪುನರ್ ವಿಮರ್ಶಿಸಿ ಆಡಳಿತ ವಿಕೇಂದ್ರಿಕರಣ ಮಾಡುವ ಭರವಸೆಯನ್ನು ಪ್ರಣಾಳಿಕೆ ಒಳಗೊಂಡಿದೆ.

ಗ್ರೇಟರ್ ಬೆಂಗಳೂರು ಯೋಜನೆಗಳು

* ಬೆಂಗಳೂರು ನಗರದ ಆಡಳಿತಕ್ಕೆ ವಿಶೇಷ ಕಾನೂನು ರಚನೆ

* ನಗರದಲ್ಲಿ ಸುಸಜ್ಜಿತ ರಸ್ತೆಗಳ ನಿರ್ಮಾಣ

* ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣ ರಸ್ತೆ ಜೋಡಿಸಲು ಎತ್ತರದ ಮೇಲ್ಸೇತುವೆಗಳ ನಿರ್ಮಾಣ

* ಆಡಳಿತಾತ್ಮಕ ಅನುಕೂಲತೆಗಾಗಿ ಬಿಬಿಎಂಪಿ ಅಧಿಕಾರ ವಿಭಜನೆ

* ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರಿದ ಹಳ್ಳಿಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್

* ನಗರದ ಐದು ಭಾಗಗಳಲ್ಲಿ ಸುಸಜ್ಜಿತ ಕಲಾ ಮಂದಿರ, ಕ್ರೀಡಾ ಸಮುಚ್ಛಯ ಹಾಗೂ ಸಸ್ಯಕಾಶಿ ನಿರ್ಮಾಣ

* ಮೆಟ್ರೋ ಯೋಜನೆ ಬಿಡದಿ, ಹೊಸಕೋಟೆ, ದೇವನಹಳ್ಳಿ, ನೆಲಮಂಗಲ ಮತ್ತು ಸೋಮನಹಳ್ಳಿಗೂ ವಿಸ್ತರಣೆ

* ಕೊಳಚೆ ಪ್ರದೇಶದಲ್ಲಿ ವಸತಿ ಸಮುಚ್ಛಯ ನಿರ್ಮಾಣ

* ನಗರದ ಕೆಲವು ರಸ್ತೆಗಳ ಆಗಲೀಕರಣ

* ಹೆಸರಘಟ್ಟದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಫಿಲಂ ಇನ್ಸ್‌ಟಿಟ್ಯೂಟ್ ಸ್ಥಾಪನೆ

* ತ್ಯಾಜ್ಯ ಸಂಪನ್ಮೂಲ ಬಳಕೆಗೆ ವಿಶೇಷ ಯೋಜನೆ

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Congress released Greater Bangalore manifesto for the development of Bangalore. on 24th April, 2013. Party released manifesto for assembly election. The Greater Bangalore manifesto promises International Film Institute set up, hut free city, well maintained roads and other projects. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more