• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೈಟೆಕ್ ಪ್ರಚಾರ ಕಾರ್ಯದಲ್ಲಿ ಜೆಡಿಎಸ್ ಮುಂಚೂಣಿ

|
H.D.Kumaraswamy
ಬೆಂಗಳೂರು, ಏ. 24 : ಕರ್ನಾಟಕದ ಪ್ರಾದೇಶಿಕ ಪಕ್ಷ ಜೆಡಿಎಸ್ ಸ್ಟಾರ್ ಪ್ರಚಾರಕರ ಕೊರತೆ ಎದುರಿಸುತ್ತಿದ್ದರೂ ಮತದಾರರನ್ನು ತಲುಪುವಲ್ಲಿ ಮಂಚೂಣಿಯಲ್ಲಿದೆ. ಆಧುನಿಕ ಸಮೂಹ ಮಾಧ್ಯಮಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಿರುವ ಪಕ್ಷ ಈಗಾಗಲೇ ಮತದಾರರ ಬಳಿಗೆ ತಲುಪಿ ಮತ ನೀಡಿ ಎಂದು ಮನವಿ ಮಾಡುತ್ತಿದೆ.

ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಯುವಕರು ಮತ್ತು ನಗರ ಪ್ರದೇಶಗಳ ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಇ-ಮೇಲ್, ಎಸ್ಎಂಎಸ್, ಎಫ್ಎಂ ರೆಡಿಯೋ, ಸಿನಿಮಾ ಮಂದಿರಗಳಲ್ಲಿ ಜೆಡಿಎಸ್ ಗೆ ಮತ ನೀಡಿ ಎಂಬ ಕೂಗು ಕೇಳಿಬರುತ್ತಿದೆ.

ಚುನಾವಣೆ ಘೋಷಣೆಯಾದ ತಕ್ಷಣ ವೆಬ್ ಸೈಟ್ ಮೂಲಕ ಪ್ರಚಾರ ಕಾರ್ಯ ಆರಂಭಿಸಿದ ಪಕ್ಷ ಈಗಾಗಲೇ ರಾಜ್ಯದ 2 ಕೋಟಿ ಮತದಾರರನ್ನು ತಲುಪಿದೆ. ಇ-ಮೇಲ್, ಎಸ್ಎಂಎಸ್, ಸಿನಿಮಾ ಮಂದಿರಗಳಲ್ಲಿ ಜನನಾಯಕ ಸಿ.ಡಿ.ಪ್ರದರ್ಶನ, ಮಾಧ್ಯಮಗಳಲ್ಲಿ ಜಾಹೀರಾತು ಹೀಗೆ ಜೆಡಿಎಸ್ ಹೈಟೆಕ್ ಪ್ರಚಾರ ಆರಂಭಿಸಿದೆ.

ಉಳಿದ ಪಕ್ಷಗಳು ರಾಷ್ಟ್ರೀಯ ನಾಯಕರು, ಸ್ಟಾರ್ ಪ್ರಚಾರಕರು ಎಂದು ಅವರ ಕಾರ್ಯ ಯೋಜನೆ ಸಿದ್ಧಪಡಿಸುವ ಹೊತ್ತಿಗೆ ಜೆಡಿಎಸ್ ಮತದಾರರ ಮನೆ ಬಾಗಿಲು ಪ್ರವೇಶಿಸಿದೆ. ದೂರವಾಣಿಯಲ್ಲಿ ಕುಮಾರಸ್ವಾಮಿ ಧ್ವನಿಮುದ್ರಿಕೆ ಇರುವ ಜಾಹೀರಾತು ಕರೆ ಬರುತ್ತಿದೆ.

ರಾಜ್ಯದ 900 ಸಿನಿಮಾ ಮಂದಿರದಲ್ಲಿ ವಿಶ್ರಾಂತಿ ಸಮಯದಲ್ಲಿ ಜನನಾಯಕ ಸಿಡಿ ಪ್ರದರ್ಶಿತವಾಗುತ್ತಿದೆ. 50 ಲಕ್ಷ ಇ-ಮೇಲ್ ಗಳಿಗೆ ಜೆಡಿಎಸ್ ಗೆ ಮತನೀಡಿ ಎಂಬ ಸಂದೇಶ ರವಾನೆಯಾಗಿದೆ. ಎಸ್ಎಂಎಸ್ ಜಾಹೀರಾತು ಆರಂಭವಾಗಿದೆ.

ಹೈಟೆಕ್ ಕಚೇರಿ : ಚುಣಾವಣೆಯ ಪ್ರಚಾರಕ್ಕಾಗಿಯೇ ಹೈಟೆಕ್ ಮಾಧ್ಯಮ ಕ್ಷೇಂದ್ರವನ್ನು ಜೆಡಿಎಸ್ ಪ್ರಾರಂಭಿಸಿದೆ. ಹದಿನೈದು ಮಂದಿಯ ತಂಡ ರಚಿಸಿ ಪ್ರಚಾರ ಕಾರ್ಯದ ಜವಾಬ್ದಾರಿ ವಹಿಸಿದೆ. ಅವರ ಉಸ್ತುವಾರಿಗಾಗಿ ಒಬ್ಬರನ್ನು ನೇಮಿಸಿದೆ.

ನಮ್ಮ ಪಕ್ಷದ ನಾಯಕರು ಪ್ರತಿ ಕ್ಷೇತ್ರಕ್ಕೂ ಸಾಗಿ ಪ್ರಚಾರ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸಮೂಹ ಮಾಧ್ಯಮಗಳನ್ನು ಉಪಯೋಗಿಸಿಕೊಂಡು ಪ್ರಚಾರ ಮಾಡುತ್ತಿದ್ದೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಗ್ರಾಮೀಣ ಭಾಗಕ್ಕೆ ಮಾತ್ರ ಜೆಡಿಎಸ್ ಸೀಮಿತ ಎಂಬ ಹಣೆಪಟ್ಟಿ ಕಳಚಿಟ್ಟು ಜೆಡಿಎಸ್ ಈ ಬಾರಿ ನಗರ ಮತ್ತು ಐಟಿ-ಬಿಟಿ ವಲಯದ ಜನರನ್ನು ಸೆಳೆಯಲು ಮುಂದಾಗಿದೆ. ಜೆಡಿಎಸ್ ಶ್ರಮ ಎಷ್ಟು ಫಲ ನೀಡಲಿದೆ ಎಂಬುದು ಮೇ 8ರಂದು ಬಹಿರಂಗಗೊಳ್ಳಲಿದೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು karnataka assembly election ಸುದ್ದಿಗಳುView All

English summary
Former chief minister and JD(S) State president H.D.Kumaraswamy had become deft at making personalized calls, appearing on radio shows and using tricks of Information Technology to seek votes. The party has succeeded in reaching out to not less than two crore people on their cell phones through personalized voice recordings of Kumaraswamy.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more