ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕರ ಆಸ್ತಿ ಐದು ವರ್ಷಗಳಲ್ಲಿ ಎಷ್ಟಾಗಿದೆ?

|
Google Oneindia Kannada News

MLA
ಬೆಂಗಳೂರು, ಏ. 24 : ಶಾಸಕರಾಗಿ ಆಯ್ಕೆಯಾದರೆ ಸಾಕು ಬೇಕಾದಷ್ಟು ದುಡ್ಡು ಮಾಡಿಕೊಳ್ಳಬಹುದು ಎಂದು ಜನರ ಕಲ್ಪನೆ. ಹಾಗಾದರೆ ಐದು ವರ್ಷ ಶಾಸಕರಾಗಿ ಮತ್ತೊಮ್ಮೆ ಚುನಾವಣೆ ಎದುರಿಸುತ್ತಿರುವ ಕರ್ನಾಟಕ ಶಾಸಕರ ಆಸ್ತಿ ಐದು ವರ್ಷಗಳಲ್ಲಿ ಎಷ್ಟು ಹೆಚ್ಚಾಗಿದೆ ಎಂದು ಕರ್ನಾಟಕ ಚುನಾವಣಾ ಕಾವಲು ಸಂಸ್ಥೆ ವಿಶ್ಲೇಷಣೆ ನಡೆಸಿದೆ.

ಮಂಗಳವಾರ ಬೆಂಗಳೂರಿನಲ್ಲಿ ಪ್ರತಿಕಾಗೋಷ್ಠಿ ನಡೆಸಿದ ಕರ್ನಾಟಕ ಚುನಾವಣಾ ಕಾವಲು ಸಂಸ್ಥೆ, ಶಾಸಕರ ಘೋಷಿತ ಆಸ್ತಿಯ ವಿಶ್ಲೇಷಣೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿತು. ವರದಿ ಪ್ರಕಾರ ಕಾಂಗ್ರೆಸ್ ಮುಖಂಡ ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ಅವರ ಆಸ್ತಿ ಐದು ವರ್ಷಗಳಲ್ಲಿ 175.91 ಕೋಟಿ ಹೆಚ್ಚಾಗಿದೆ.

2008ರ ವಿಧಾನಸಭೆ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ 75.59 ಕೋಟಿ ಆಸ್ತಿ ಘೋಷಿಸಿದ್ದರು. ಈ ಬಾರಿ ಚುನಾವಣಾ ಆಯೋಗಕ್ಕೆ ಅವರು ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ 251.50 ಕೋಟಿ ರೂ.ಆಸ್ತಿ ಇದೆ ಎಂದು ಹೇಳಿದ್ದಾರೆ.

ರಾಜ್ಯದ ಶ್ರೀಮಂತ ಶಾಸಕ ಎಂದು ಹೇಳಲಾಗುವ ಗೋವಿಂದರಾಜನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಿಯಕೃಷ್ಣ ಅವರ ಆಸ್ತಿ ಐದು ವರ್ಷಗಳಲ್ಲಿ 143.36 ಕೋಟಿ ಹೆಚ್ಚಾಗಿರುವುದು ವಿಶ್ಲೇಷಣೆಯಿಂದ ತಿಳಿದುಬಂದಿದೆ. 2008ರಲ್ಲಿ ಅವರು767.61 ಕೋಟಿ ಎಂದು ಘೋಷಿಸಿಕೊಂಡಿದ್ದರು.

2013ರ ಚುನಾವಣೆಯಲ್ಲಿ ತಮ್ಮ ಸಂಪತ್ತಿನ ಮೌಲ್ಯ 910.98 ಕೋಟಿ ಎಂದು ಆಯೋಗಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಶ್ರೀಮಂತ ಶಾಸಕರ ಮೂರನೇ ಸ್ಥಾನವೂ ಕಾಂಗ್ರಸ್ ಪಾಲಾಗಿದೆ. ಕಲಘಟಗಿ ಕ್ಷೇತ್ರದ ಶಾಸಕ ಸಂತೋಷ್ ಲಾಡ್ ಅವರ ಆಸ್ತಿ ಐದು ವರ್ಷಗಳಲ್ಲಿ 124.85 ಕೋಟಿ ಹೆಚ್ಚಾಗಿದೆ.

ಸಂತೋಷ್ ತಮ್ಮ ಬಳಿ 61.54 ಕೋಟಿ ಆಸ್ತಿ ಇದೆ ಎಂದು 2008ರಲ್ಲಿ ಮಾಹಿತಿ ನೀಡಿದ್ದರು. ಈ ಬಾರಿ ಅವರು 186.40 ಕೋಟಿ ಆಸ್ತಿ ಇದೆ ಎಂದು ಘೋಷಿಸಿ ಕೊಂಡಿದ್ದಾರೆ.

ಕುಸಿದ ಸಿ.ಟಿ.ರವಿ ಆದಾಯ ! : ಕೂತೂಹಲದ ಸಂಗತಿ ಎಂದರೆ ಸಚಿವರಾಗಿದ್ದರೂ ಸಿ.ಟಿ.ರವಿ ಅವರ ಆಸ್ತಿ ಕುಸಿತ ಕಂಡಿದೆ. ರವಿ ಅವರ ಆಸ್ತಿ ಶೇ.54 ರಷ್ಟು ಕಡಿಮೆಯಾಗಿದೆ. 2008ರಲ್ಲಿ ರವಿ ಅವರ ಬಳಿ 7.85 ಕೋಟಿ ಆಸ್ತಿ ಇತ್ತು. ಈ ಬಾರಿ 3.59 ಕೋಟಿ ಆಸ್ತಿ ಇದೆ ಎಂದು ಮಾಹಿತಿ ನೀಡಿದ್ದಾರೆ.

ಕಣದಲ್ಲಿರುವ ಆರೋಪಿಗಳು : 2008ರ ಚುನಾವಣೆಯಲ್ಲಿ ತಮ್ಮ ಮೇಲೆ ಕ್ರಿಮಿನಲ್ ಆರೋಪ ಇದೆ ಎಂದು ಘೋಷಿಸಿಕೊಂಡಿದ್ದ 40 ಶಾಸಕರಿಗೆ ಈ ಬಾರಿ ಮತ್ತೆ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಬಿಜೆಪಿಯ 19, ಕಾಂಗ್ರೆಸ್ 8, ಜೆಡಿಎಸ್ 5, ಸ್ವತಂತ್ರ 5 ಹಾಗೂ ಕೆಜೆಪಿಯ ಮೂವರು ಅಭ್ಯರ್ಥಿಗಳ ಮೇಲೆ ಕ್ರಿಮಿನಲ್ ಆರೋಪಗಳಿವೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Average asset of re contesting MLAs in the May 5 assembly elections has nearly doubled. Two NGOs Karnataka Election Watch (KEW) and Association for Democratic Reforms, compared MLAs asset with 2008 and 2013 affidavit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X