2013: ಕೇಂದ್ರ ನೌಕರರ DA ಹೆಚ್ಚಳವಾಯ್ತು

ಇದರಿಂದ ಸುಮಾರು 50 ಲಕ್ಷ ಉದ್ಯೋಗಿಗಳು, 30 ಲಕ್ಷ ಪಿಂಚಣಿದಾರರು ಇದರ ಲಾಭ ಪಡೆಯಲಿದ್ದಾರೆ. ಇದರಿಂದ ಸಂಬಳಗಳು ತಲಾ ಕನಿಷ್ಠ 560 ರೂ. ಏರಿಕಯಾಗಲಿದೆ.
ತುಟ್ಟಿಭತ್ತೆಯನ್ನು ಹೆಚ್ಚಿಸುವ ಸರಕಾರದ ನಿರ್ಧಾರದಿಂದಾಗಿ ಬೊಕ್ಕಸಕ್ಕೆ 8,629 .20 ಕೋ.ರೂ. ಅಧಿಕ ಹೊರೆ ಬೀಳಲಿದೆ ಎಂದು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಮನೀಷ್ ತಿವಾರಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಕಳೆದ ವರ್ಷ ಸರಕಾರ ತುಟ್ಟಿಭತ್ತೆಯನ್ನು ಶೇ.72ಕ್ಕೆ ಏರಿಸಿತ್ತು. ಆ ಹೆಚ್ಚಳ 2012ರ ಜುಲೈ 1ರಿಂದ ಅನ್ವಯವಾಗುವಂತೆ ಜಾರಿಗೆ ಬಂದಿತ್ತು
ಜನವರಿ 1, 2013 ರಿಂದಲೇ ಈ ಏರಿಕೆ ಪೂರ್ವಾನ್ವಯವಾಗುತ್ತದೆ. ಆದ್ದರಿಂದ ಉದ್ಯೋಗಿಗಳು ಹಿಂದಿನ ತಿಂಗಳ ಬಾಕಿ ಹಣ ಪಡೆದುಕೊಳ್ಳಲು ಅರ್ಹರು ಎಂದು ಹೇಳಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೇಂದ್ರ ತುಟ್ಟಿಭತ್ಯೆಯನ್ನು ಶೇ. 72ಕ್ಕೆ ಏರಿಸಿತ್ತು.












Click it and Unblock the Notifications