• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗುಡಿಸಲು ಮುಕ್ತ ರಾಜ್ಯ ನಿರ್ಮಾಣ : ಬಿಜೆಪಿ ಪ್ರಣಾಳಿಕೆ

|
ಬೆಂಗಳೂರು, ಏ. 19 : ವಿಧಾನಸಭೆ ಚುನಾವಣೆಗೆ ಬಿಜೆಪಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಗುಡಿಸಲು ಮುಕ್ತ ರಾಜ್ಯ ನಿರ್ಮಾಣ, ಸಹಕಾರಿ ವಿಶ್ವವಿದ್ಯಾನಿಯಲಯ ಸ್ಥಾಪನೆ, ಎಲ್ಲರಿಗೂ ಶುದ್ಧ ಕುಡಿಯುವ ನೀರು ಮುಂತಾದ ಭರವಸೆಗಳ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಒತ್ತು ನೀಡುವ ಪ್ರಣಾಳಿಕೆ ವಿಕಾಸವನ್ನು ಬಿಡುಗಡೆಗೊಳಿಸಲಾಗಿದೆ.

ಶುಕ್ರವಾರ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರೀಯ ನಾಯಕ ಅರುಣ್ ಜೇಟ್ಲಿ ಪಕ್ಷದ ಪ್ರಣಾಳಿಕೆ ವಿಕಾಸವನ್ನು ಬಿಡುಗಡೆ ಗೊಳಿಸಿದರು. ವಿಕಾಸವೇ ಗುರಿ ಬಿಜೆಪಿಯೇ ದಾರಿ ಎಂಬ ಚುನಾವಣಾ ಧ್ಯೇಯವಾಕ್ಯ ಘೋಷಿಸಿರುವ ಬಿಜೆಪಿ ಎಲ್ಲಾ ವರ್ಗಗಳ ಅಭಿವೃದ್ಧಿಗೆ ಪ್ರಣಾಳಿಕೆಯಲ್ಲಿ ಒತ್ತು ನೀಡಿದೆ.

ಪ್ರಣಾಳಿಕೆಯಲ್ಲಿನ ಅಂಶಗಳು

* 24 ಗಂಟೆ ನಿರಂತರ ವಿದ್ಯುತ್ ಸರಬರಾಜು
* ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್
* ಬಿಪಿಎಲ್ ಕುಟುಂಬಗಳಿಗೆ ಪ್ರತಿ ತಿಂಗಳು 25 ಕೆಜೆ ಅಕ್ಕಿ
* ರಾಜ್ಯ ಮಹಿಳಾ ಹಕ್ಕುಗಳ ಆಯೋಗ ಸ್ಥಾಪನೆ
* ರಸಗೊಬ್ಬರಕ್ಕೆ ಹೆಚ್ಚಿನ ಸಬ್ಸಿಡಿ
* ಎಲ್ಲಾ ಹಳ್ಳಿಗಳಿಗೂ ಭೂ ಚೇತನ ಯೋಜನೆ ವಿಸ್ತರಣೆ
* ತರಕಾರಿ ಬೆಳೆಗಳಿಗೂ ಬೆಂಬಲ ಬೆಲೆ
* ಸಕರಾರಿ ವಿಶ್ವವಿದ್ಯಾಲಯ ಸ್ಥಾಪನೆ
* ಸಕಾಲ ಯೋಜನೆಯಡಿ ಇ ಆಡಳಿತ ಜಾರಿ
* ತಾಲೂಕು ಕೇಂದ್ರಗಳಲ್ಲಿ ಈ ಮಾರುಕಟ್ಟೆ ಸ್ಥಾಪನೆ
* ನೇಕಾರರ ಕಾರ್ಯಯೋಜನೆ ತಯಾರಿ
* ಬೆಂಗಳೂರಿನಲ್ಲಿ ಮನೆಗೆರಡು ಮರ ಯೋಜನೆ
* 5000 ಜನಸಂಖ್ಯೆಯ ಪ್ರತಿ ಹಳ್ಳಿಗಳಲ್ಲೂ ಪದವಿ ಪೂರ್ವ ಕಾಲೇಜು ನಿರ್ಮಾಣ
* ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಜೀವ ವಿಮೆ
* ಹಣ್ಹು-ತರಕಾರಿ ಮಾರ್ಕೆಟ್ ಸಹಕಾರಿ ಸಂಸ್ಥೆ ಸ್ಥಾಪನೆ
* ಬಡ ಮೀನುಗಾರರಿಗೆ ಮನೆಗಳ ನಿರ್ಮಾಣ
* ಕನ್ನಡದಲ್ಲಿ ಡಬ್ಬಿಂಗ್ ಚಿತ್ರಗಳ ನಿಯಂತ್ರಣ
* ಬಡತನ ರೇಖೆ ಕೆಳಗಿರುವವರಿಗೆ ಯಶಸ್ವಿನಿ ಕಾರ್ಡ್
* ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆ
* ಸರ್ಕಾರಿ ಶಾಲಾ ಕಾಲೇಜುಗಳಿಗೆ ಉಚಿತ ಇಂಟರ್ನೆಟ್
* ಹುಬ್ಬಳ್ಳಿ ವಿಮಾನ ನಿಲ್ದಾಣ ಅಂತರಾಷ್ಟ್ರೀಯ ದರ್ಜೆಗೆ
* 5 ವರ್ಷಗಳಲ್ಲಿ ಕನಿಷ್ಟ 50 ಸಾವಿರ ಚೆಕ್‌ಡ್ಯಾಮ್ ನಿರ್ಮಾಣ
* ಬೆಂಗಳೂರಿನಲ್ಲಿ ಪರಿಸರ ಮಂಡಳಿ ರಚನೆ
* 5 ವರ್ಷಗಳಲ್ಲಿ 10 ಲಕ್ಷ ಉದ್ಯೋಗ ಸೃಷ್ಠಿ
* ಐದು ಲಕ್ಷ ವೃತ್ತಿಪರ ಕುಟುಂಬಗಳಿಗೆ ಅಂತ್ಯೋದಯದಡಿ ನೆರವು
* ಹತ್ತು ಲಕ್ಷ ಯುವತಿಯರಿಗೆ ಕೌಶಲ್ಯ ತರಬೇತಿ ಮತ್ತು ಉದ್ಯೋಗ
* ಕೃಷಿ ಪಂಪ್‌ಸೆಟ್‌ಗಳಿಗೆ ಸೌರಶಕ್ತಿ ಬಳಕೆ
* ಬಿಪಿಎಲ್ ಕುಟುಂಬಗಳಿಗೆ ಜೀವ ವಿಮೆ ಭದ್ರತೆ
* ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಉದ್ಯೋಗ
* ಜನ, ಜಾನುವಾರುಗಳಿಗೆ ಸಂಚಾರಿ ವೈದ್ಯಕೀಯ ಸೌಲಭ್ಯ
* ಐದು ವರ್ಷದಲ್ಲಿ ನೀರಾವರಿ ಯೋಜನೆ ಅನುಷ್ಠಾನ
* ನಗರಗಳಲ್ಲಿ ತ್ಯಾಜ್ಯ ಸಂಸ್ಕರಣೆಗೆ ಪ್ರತ್ಯೇಕ ಪ್ರಾಧಿಕಾರ
* ಕೆರೆ ಮತ್ತು ಪರಿಸರ ಸಂರಕ್ಷಣೆಗೆ ಬೆಂಗಳೂರು ಪರಿಸರ ಮಂಡಳಿ ರಚನೆ
* ರೈಲು ಕಾರಿಡಾರ್ ಗಳನ್ನು ಕೇಂದ್ರ ಸಹಯೋಗದಡಿ ಅನುಷ್ಠಾನ
* ಬಿಬಿಎಲ್ ಕುಟುಂಬದ ಮಹಿಳೆಯರಿಗೆ ಕೋರ್ಟ್ ಮತ್ತು ಸ್ಟಾಂಪ್ ಶುಲ್ಕ ರಿಯಾಯಿತಿ
* ಹಣ್ಣು-ತರಕಾರಿ ಮಾರಾಟಕ್ಕೆ ಕೆಎಂಎಫ್ ಮಾದರಿಯಲ್ಲಿ ಸಂಸ್ಥೆ ಸ್ಥಾಪನೆ
* ಕೃಷ್ಣಾ ನದಿಯ ರಾಜ್ಯದ ಪಾಲಿನ 735 ಟಿಎಂಸಿ ನೀರು ಬಳಕೆ
* ಶಾಲಾ-ಕಾಲೇಜುಗಳಲ್ಲಿ ಮನೆ ಮದ್ದು ತರಬೇತಿ
* ರೆವಿನ್ಯೂ ನಿವೇಶನದಾರರಿಗೂ ಕಾಯಂ ಖಾತಾ
* ನಗರ -ಗ್ರಾಮೀಣ ಅನಧಿಕೃತ ಕಟ್ಟಡ ಜಾಗ ಸಕ್ರಮ
* ಸಾಧನೆ ತೋರಿದವರಿಗೆ 'ಕ್ರೀಡಾಪಟು ಕಾರ್ಡ್'ವಿತರಣೆ
* ಬಿಬಿಎಂಪಿ ಪುನಾರಚನೆ, ಜನರಿಂದ ನೇರ ಮೇಯರ್ ಆಯ್ಕೆ
* ಬೆಂಗಳೂರಿನ ವಾಹನ ದಟ್ಟಣೆ ಹಿನ್ನೆಲೆ ಹೆಲಿಕಾಪ್ಟರ್ ಆಂಬ್ಯುಲೆನ್ಸ್ ತುರ್ತು ಸೇವೆ
* ವೃದ್ಧಾಪ್ಯ ವಿಧವಾ ಮಾಸಾಶನ ಹೆಚ್ಚಳ
* ಸರಕಾರ ಒದಗಿಸುವ ಮನೆ ಮಹಿಳೆ ಹೆಸರಿನಲ್ಲಿ ನೋಂದಣಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು karnataka assembly election ಸುದ್ದಿಗಳುView All

English summary
Senior BJP leader Arun Jaitley released BJP election manifesto 'Vikas' in Bangalore on 19th April, 2013. The manifesto promises power 24/7, hut free villages, laptop to students, free insurance to BPL families among many. Jagadish Shettar and Prahlad Joshi were present.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more