ಬಾಂಬ್ ಸ್ಫೋಟ ಹತ್ತಿರದಿಂದ ಕೇಳಿದವರ ಅನುಭವ

ಮಲ್ಲೇಶ್ವರದ ಅಂಗಡಿ ಮುಂಗಟ್ಟುಗಳಲ್ಲಿ ಅದೇ ಮಾತು. ಕೊಳ್ಳಲು ಬಂದವರು ಯಾವುದಕ್ಕೆ ಬಂದಿದ್ದೇವೆಂಬುದನ್ನು ಮರೆತು ಬಾಂಬ್ ಸ್ಫೋಟದ ಮಾತುಕತೆಯಲ್ಲಿಯೇ ತೊಡಗಿದ್ದರು. ಕೆಲವರು ಅಂಥಾದ್ದೇನು ಆಗಿಲ್ಲ ಎಂದು ಪರಿಸ್ಥಿತಿಯನ್ನು ತಿಳಿಮಾಡುತ್ತಿದ್ದರೆ, ಮತ್ತೊಬ್ಬರು ಹೆಬ್ಬಾಳದಲ್ಲೂ ಸ್ಫೋಟ ಸಂಭವಿಸಿತಂತೆ, ಮುಂದೆ ಎಲ್ಲೋ ಏನೋ ಎಂದು ಹೇಳುತ್ತ ಮತ್ತಷ್ಟು ಭಯಾನಕತೆ ತುಂಬುತ್ತಿದ್ದರು. ತಮಾಷೆ ಅಂದ್ರೆ 6ನೇ ಕ್ರಾಸಿನಲ್ಲಿ ಇದ್ದ ಕೆಲವರಿಗೆ ಆ ಶಬ್ದವೇ ಕೇಳಿರಲಿಲ್ಲ.
ಅಷ್ಟರಲ್ಲಿ ತುಂಟ ಪೋರನೊಬ್ಬ, ಮುಂದಿನ ಬಾಂಬ್ ಬ್ಲಾಸ್ಟ್ ಕೆ.ಆರ್. ಮಾರ್ಕೆಟ್ಟಿನಲ್ಲಿ ಎಂದು ಡೈಲಾಗು ಹೊಡೆದು ಸುತ್ತಮುತ್ತಲಿದ್ದವರಿಂದ ಬೈಸಿಕೊಂಡಿದ್ದ ಮತ್ತು ನಗೆಬುಗ್ಗೆ ಏಳಲು ಕಾರಣವಾಗಿದ್ದ. ಆದರೆ, ಈ ಭೀಕರ ಶಬ್ದುವನ್ನು ಅತ್ಯಂತ ಹತ್ತಿರದಿಂದ ಕೇಳಿ, ಮೊದಲು ಟ್ವೀಟ್ ಮಾಡಿದವರಲ್ಲಿ ಒಬ್ಬರಾಗಿರುವ ಕಾಲೇಜು ಲೆಕ್ಚರರ್ ಮತ್ತು ಆಗಿರುವ ರಾಜೇಶ್ ಪದ್ಮಾರ್ ಎಂಬುವವರು ತಮ್ಮ ಅನುಭವವನ್ನು ಒನ್ಇಂಡಿಯಾ ಕನ್ನಡದ ಜೊತೆ ಹಂಚಿಕೊಂಡಿದ್ದಾರೆ.
"ಸ್ಫೋಟ ಸಂಭವಿಸಿದಾಗ ಸಿಇಟಿಗಾಗಿ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದೆ. ಇದ್ದಕ್ಕಿದ್ದಂತೆ ಜೀವಮಾನದಲ್ಲೇ ಕೇಳಿರದಷ್ಟು ಭೀಕರ ಮತ್ತು ಭಯಾನಕ ಶಬ್ದವಾಯಿತು. ಆಗಸದಲ್ಲಿ ಕಪ್ಪು ಹೊಗೆ, ಧೂಳು ಆವರಿಸಿಕೊಂಡಿತು. ವಿದ್ಯಾರ್ಥಿಗಳು ಕಕ್ಕಾಬಿಕ್ಕಿಯಾದರು. ಕೂಡಲೆ ನನ್ನ ನೋಕಿಯಾ ಮೊಬೈಲ್ ಮುಖಾಂತರ ಟ್ವೀಟ್ ಮಾಡಿದೆ. ಸುಮಾರು 1 ಗಂಟೆಯ ನಂತರ ಅದು ಬಾಂಬ್ ಸ್ಫೋಟ ಎಂದು ಪೊಲೀಸರು ದೃಢಪಡಿಸಿದರು" ಎಂದು ಅವರು ಆರಂಭದ ಕ್ಷಣಗಳನ್ನು ಹಂಚಿಕೊಂಡರು.
Dummm.. Heard a big sound at Malleshwaram, Bangalore. Something went wrong, can see dark clouds at 11th Cross.
— Rajesh Padmar (@rajeshpadmar) April 17, 2013
"ಅಷ್ಟರಲ್ಲಿ ಕೆಲ ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ ಎಂಬುದು ತಿಳಿಯುತ್ತಿದ್ದಂತೆ ಟ್ಯೂಷನ್ ಶಾಲೆಯ ಮಕ್ಕಳು ಕೂಡ ತಮ್ಮ ಪಾಲಕರಿಗೆ ಫೋನ್ ಮಾಡಿ ತಾವು ಸುರಕ್ಷಿತವಾಗಿ ಇರುವುದರ ಬಗ್ಗೆ ಹೇಳಲು ಆರಂಭಿಸಿದರು. ಅಲ್ಲಿ ಭೀಕರ ಬಾಂಬ್ ಸ್ಫೋಟ ಸಂಭವಿಸಿ ಆತಂಕದ ವಾತಾವರಣವಿದ್ದರೂ, ನಮ್ಮ ವಿದ್ಯಾರ್ಥಿಗಳು ಸುರಕ್ಷಿತವಾಗಿರುವ ಬಗ್ಗೆ ನನಗೆ ತುಸು ಸಮಾಧಾನವಾಗಿತ್ತು. ಹೂವು ಮಾರುವವರಿಂದ ಹಿಡಿದು ಶ್ರೀಮಂತರವರೆಗೆ ಎಲ್ಲರೂ ಆತಂಕಗೊಂಡಿದ್ದರು. ವ್ಯಕ್ತಿ ಶ್ರೀಮಂತನೇ ಇರಲಿ ಬಡವನೇ ಇರಲಿ, ಭಯೋತ್ಪಾದಕರಿಗೆ ಯಾರ ಜೀವವೂ ತೃಣಸಮಾನ ಎಂಬುದರ ಬಗ್ಗೆ ಅರಿವಾಗಿತ್ತು" ಎಂದು ಅವರು ನುಡಿದರು.
"ಬೆಂಗಳೂರು ಎಷ್ಟೇ ಆಧುನಿಕವಾಗಿದ್ದರೂ, ಪೊಲೀಸ್ ಇಲಾಖೆ ಎಷ್ಟೇ ಹೈಟೆಕ್ ಆಗಿದ್ದರೂ ಜನರಿಗೆ ಮತ್ತು ನಗರಕ್ಕೆ ಭದ್ರತೆ ಒದಗಿಸುವ ವಿಷಯದಲ್ಲಿ ತಳಮಟ್ಟದಲ್ಲಿ ಇನ್ನೂ ಸಾಕಷ್ಟು ಮುಂದುವರಿಯಬೇಕಿದೆ. ಬೆಂಗಳೂರಿನಂಥ ನಗರದಲ್ಲಿ ಜನರಿಗೆ ತಾವು ಸುರಕ್ಷಿತವಾಗಿರುವ ಭಾವ ಬರಬೇಕಿದೆ. ಪೊಲೀಸರು ಅತ್ಯುತ್ತಮ ಕೆಲಸ ಮಾಡುತ್ತಿದ್ದರೂ ಇಂಥ ಘಟನೆಗಳನ್ನು ತಡೆಯಲು ಆಗುತ್ತಿಲ್ಲ. ಆದರೆ ವಿದೇಶದಲ್ಲಿ ಪರಿಸ್ಥಿತಿ ಹೀಗಿಲ್ಲ" ಎಂದು ಅವರು ತಮ್ಮ ಅನುಭವ ಹಂಚಿಕೊಂಡರು.
-
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು












Click it and Unblock the Notifications