ಅಮೆರಿಕದಲ್ಲಿ ಮತ್ತೆ ಉಗ್ರರ ಅಟ್ಟಹಾಸ, ಸರಣಿ ಸ್ಫೋಟ

Terror Attacks in Boston Marathon 4 dead Washington on high alert
ಬೋಸ್ಟನ್, ಏ.16: ಅಮೆರಿಕದಲ್ಲಿ ಮತ್ತೆ ಭಾರಿ ಭಯೋತ್ಪಾದಕ ದಾಳಿ ನಡೆದಿದೆ. ಅದೂ 'ದೇಶಪ್ರೇಮಿಗಳ ದಿನ'ವೇ ಮೂರು ಕಡೆ ಬಾಂಬ್ ಸ್ಫೋಟಗಳು ನಡೆದಿದ್ದು, 4 ಮಂದಿ ಮೃತಪಟ್ಟಿದ್ದಾರೆ. 140ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಅಮೆರಿಕ ಕಾಲಮಾನ ಸೋಮವಾರ ಮಧ್ಯಾಹ್ನ 2.50ರಲ್ಲಿ ಈ ಸರಣಿ ಸ್ಫೋಟಗಳು ನಡೆದಿವೆ. ದಾಳಿಯ ನಂತರ ಇಡೀ ಅಮೆರಿಕ ಎಚ್ಚೆತ್ತಿದ್ದು, ನ್ಯೂಯಾರ್ಕ್, ವಾಷಿಂಗ್ಟನ್, ಲಾಸ್ ಏಂಜಲೀಸ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ನಗರಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. FBI ತಕ್ಷಣ ಕಾರ್ಯಾಚರಣೆಗಿಳಿದಿದ್ದು, ತನಿಖೆ ಆರಂಭಿಸಿದೆ.

ಅಮೆರಿಕದ ಅವಳಿ ಕಟ್ಟಡಗಳಿಗೆ ಲಾಡೆನ್ ಗ್ಯಾಂಗ್ ವಿಮಾನಗಳನ್ನು ನುಗ್ಗಿಸಿ, ಭಾರಿ ಸಾವು ನೋವು ಉಂಟುಮಾಡಿದ ಹನ್ನೆರಡು ವರ್ಷಗಳ ನಂತರ (September 11, 2001) ಲಾಡೆನ್ ಕಡೆಯ ನರಪಿಳ್ಳೆಯೂ ಅಮೆರಿಕದತ್ತ ನುಸುಳದಂತೆ ಅಮೆರಿಕ ಉಗ್ರ ಕ್ರಮಗಳನ್ನು ಕೈಗೊಂಡಿತ್ತು. ಆದರೆ ನಿನ್ನೆ ಸೋಮವಾರದ ಭಯೋತ್ಪಾದನೆ ಹಾವಳಿ ಅಮೆರಿಕ ನಾಗರಿಕರನ್ನು ಮತ್ತೆ ಬೆಚ್ಚಿಬೀಳಿಸಿದೆ.

*Boston, Massachusettsನಲ್ಲಿ ವಿಶ್ವದ ಅತಿ ಹಳೆಯ ಮತ್ತು ಪ್ರತಿಷ್ಠಿತ ಬೋಸ್ಟನ್ ಮ್ಯಾರಥಾನ್ ನಡೆಯುತ್ತಿದ್ದಾಗ ಸ್ಪರ್ಧೆಯು ಅಂತಿಮ ಚರಣದಲ್ಲಿದ್ದಾಗ 2 ಬಾಂಬುಗಳು ಸ್ಫೋಟಗೊಂಡಿವೆ. ಮೂರನೆಯ ಸ್ಫೋಟ ಒಂದು ಗಂಟೆಯ ನಂತರ ಬೋಸ್ಟನ್ ನಿಂದ ಅನೇಕ ಕಿಮೀ ದೂರದಲ್ಲಿ ಜಾನ್ ಎಫ್ ಕೆನಡಿ ಲೈಬ್ರರಿ ಬಳಿ ನಡೆದಿದೆ. ಆದರೆ ಈ ಸ್ಫೋಟದಲ್ಲಿ ಯಾರೂ ಸತ್ತಿಲ್ಲ.

*47 ಕಿಮೀಗಳ ದೂರದ ಬೋಸ್ಟನ್ ಮ್ಯಾರಥಾನ್ ಸ್ಪರ್ಧೆಯಲ್ಲಿ 27,000 ಮಂದಿ ಭಾಗವಹಿಸಿದ್ದರು.
* ಮೊದಲೆರಡು ಬಾಂಬುಗಳು ಕ್ರೀಡಾಂಗಣದಲ್ಲಿ ಒಂದೇ ಘಳಿಗೆಯಲ್ಲಿ ಸ್ಫೋಟಿಸಿವೆ.
* ಇನ್ನೂ ಹೆಚ್ಚಿನ ರಿಮೋಟ್ ಬಾಂಬ್ ದಾಳಿಗಳು ನಡೆಯಬಹುದೆಂದು ಶಂಕಿಸಿ, ಮೊಬೈಲ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
* Any Indian nationals affected by these tragic blasts at Boston Marathon may contact @IndianEmbassyUS /202-939-7000

ಬಾಂಬ್ ಸ್ಫೋಟದ ಬಳಿಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿರುವ ಬರಾಕ್ ಒಬಾಮಾ, ಅಮೆರಿಕನ್ನರಿಗೆ ಧೈರ್ಯ ತುಂಬಿದ್ದಾರೆ. ಸ್ಫೋಟಕ್ಕೆ ಕಾರಣರಾದ ಭಯೋತ್ಪಾದಕರು ಎಲ್ಲೇ ಅಡಗಿರಲಿ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಘೋಷಿಸಿದ್ದಾರೆ.

ಅಮೆರಿಕ ಕ್ರಾಂತಿಯ ಆರಂಭ ದಿನದ ನೆನಪಿಗಾಗಿ ಪ್ರತಿ ವರ್ಷ ಏಪ್ರಿಲ್ 15ರಂದು ಅಮೆರಿಕ 'ದೇಶ ಪ್ರೇಮಿಗಳ ದಿನ' ಆಚರಿಸುತ್ತದೆ. ಈ ಪೂರ್ವನಿರ್ಧಾರಿತ ಕಾರ್ಯಕ್ರಮದಂತೆ ಒಬಾಮಾ ಇಂದು ಅಮೆರಿಕನ್ನರನ್ನುದ್ದೇಶಿಸಿ ಮಾತನಾಡುವ ಕಾರ್ಯಕ್ರಮವಿತ್ತು.

ಈ ಮಧ್ಯೆ, ಭಯೋತ್ಪಾದನೆ ದಾಳಿಯ ಹಿಂದೆ ಯಾವ ಸಂಘಟನೆಯ ಕೈವಾಡವಿದೆ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+