ಬೆಂಗಳೂರು, ಏ.15: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷವು ಈ ಬಾರಿ ಗೆಲುವು ದಕ್ಕಿಸಿಕೊಂಡು ಅಧಿಕಾರದ ಗದ್ದುಗೆ ಹಿಡಿಯುತ್ತದಾ? ಮೇ 8ರಂದು ಇದಕ್ಕೆ ಖಡಾಖಂಡಿತ ಉತ್ತರ ಸಿಗಬಹುದು.
ಆದರೆ ಅದಕ್ಕೂ ಮುನ್ನ ಪಕ್ಷ ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ಗಮನಿಸಿದರೆ ಮತದಾರ ಅದನ್ನೇ ನೆಚ್ಚಿಕೊಂಡು ಕೆಜೆಪಿಯನ್ನು ಖಡಾಖಂಡಿತವಾಗಿ ಅಧಿಕಾರಕ್ಕೆ ತರುತ್ತಾನೆ. ಆದರೆ ಪ್ರಣಾಳಿಕೆಗಳಿಂದಲೇ ಚುನಾವಣೆಗಳನ್ನು ಗೆಲ್ಲಲಾಗುವುದಿಲ್ಲ, ಅಲ್ವೇ?