Get Updates
Get notified of breaking news, exclusive insights, and must-see stories!

ದೊಡ್ಡಗೌಡ್ರ ಕುಟುಂಬದಿಂದ ಒಟ್ಟು ಎಷ್ಟು ಮಂದಿ ಕಣಕ್ಕೆ?

only-3-in-deve-gowda-family-to-contest-jds-kumaraswamy
ಬೆಂಗಳೂರು, ಏ.13: ದೊಡ್ಡಗೌಡ್ರ ಕುಟುಂಬದಿಂದಲೇ ಮೂರು ಮತ್ತೊಂದು ಎಂದು ಒಟ್ಟು ನಾಲ್ಕು ಮಂದಿ ಕಣಕ್ಕೆ ಇಳಿಯುವುದು ಖಚಿತವಾಗಿದೆ. ಇದೇ ವೇಳೆ, ಎಚ್‌ಡಿ ರೇವಣ್ಣ ಅವರು ಪರಂಪರಾಗತ ಕ್ಷೇತ್ರ ಬದಲಾಯಿಸದೆ ಹೊಳೇನರಸೀಪುರದಿಂದಲೇ ಸ್ಪರ್ಧಿಸಲಿದ್ದಾರೆ ಎಂಬುದೂ ಸುಸ್ಪಷ್ಟವಾಗಿದೆ.

ಸಾಕ್ಷಾತ್ ದೇವೇಗೌಡರೇ ತಮ್ಮ ಮತ್ತೋ ಒಬ್ಬ ಸೊಸೆಯೂ ಚುನಾವಣೆಗೆ ನಿಂತು, ಗೆದ್ದು ಬರಲಿ ಎಂದು ಆಶೀರ್ವದಿಸಿದ್ದರೂ ಅವರ ಕಿರಿಯ ಪುತ್ರ ಮುಂದೆ ಮುಖ್ಯಮಂತ್ರಿಯಾಗಿ ಅಧಿಕಾರ ನಿಭಾಯಿಸಬೇಕಿರುವವನು ನಾನು.

ನೀವು ಹೇಳಿದಂತೆ ನಿಮ್ಮ ಮತ್ತೊಬ್ಬ ಸೊಸೆ ಕಣಕ್ಕಿಳಿದು ಗೆದ್ದುಬಂದರೆ ಮನೆಯಲ್ಲೇ ರಾಜಕೀಯ ಧ್ರುವೀಕರಣ ಉದ್ಭವಿಸುತ್ತದೆ. ಹಾಗಾಗುವುದು ಬೇಡ ಎಂದು ಜೆಡಿಎಸ್‌ ಶಾಸಕಾಂಗ ನಾಯಕ ಎಚ್‌ ಡಿ ರೇವಣ್ಣ ಅವರ ಪತ್ನಿ ಭವಾನಿ ಅವರ ರಾಜಕೀಯ ಆಕಾಂಕ್ಷೆಗೆ ತಣ್ಣಿರು ಎರಚಿದ್ದಾರೆ.

ಆದರೆ ಭವಾನಿ ಮೇಡಂಗೆ ತಮ್ಮ ತವರೂರು ಬೇಲೂರು ಬಿಟ್ಟು ಮಂಡ್ಯ ಜಿಲ್ಲೆಯಲ್ಲಿ (ಕೆಆರ್ ಪೇಟೆ) ಸ್ಪರ್ಧಿಸುವ ಅದಮ್ಯ ಬಯಕೆಯಿತ್ತು ಎಂಬುದು ಗಮನಾರ್ಹ. ಕುತೂಹಲದ ವಿಷಯವೆಂದರೆ ಖುದ್ದು ರೇವಣ್ಣ ಅವರೂ ಇದನ್ನೇ ಬಯಸಿದ್ದರು. ತಮ್ಮ ಪತ್ನಿಯೂ ಶಾಸಕಿಯಾಗಲಿ ಎಂದು ಆಸೆಪಟ್ಟಿದ್ದರು. ಆದರೆ ಕುಮಾರತಮ್ಮ ಅದೆಲ್ಲಾ ನಡೆಯೋಲ್ಲ ಅಂದುಬಿಟ್ಟಿದ್ದಾರೆ.

ಹೀಗಾಗಿ ಭವಾನಿ ಮೇಡಂ ರಾಜಕೀಯ ಪ್ರವೇಶಕ್ಕೆ ಇನ್ನೂ ಸಮಯ ಕೂಡಿ ಬಂದಿಲ್ಲ. ಅತ್ತ ಓರಗಿತ್ತಿ ಅನಿತಾ ಕುಮಾರಸ್ವಾಮಿ ಅವರು ಏ. 15 ರಂದು ನಾಮಪತ್ರ ಸಲ್ಲಿಸುವುದು ನಿಕ್ಕಿಯಾಗಿದೆ. ಆದರೆ ಶ್ರವಣಬೆಳಗೊಳದಲ್ಲಿ ಸಮೀಪ ಸಂಬಂಧಿ ಬಾಲಕೃಷ್ಣ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ನಿನ್ನೆ ಶುಕ್ರವಾರ ಪಕ್ಷದ ಕಚೇರಿಯಲ್ಲಿ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರ ನಿರ್ಮಾಪಕ ಆನಂದ್‌ ಅಪ್ಪುಗೋಳ್‌ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ತಾವು, ಅನಿತಾ ಕುಮಾರಸ್ವಾಮಿ ಹಾಗೂ ಎಚ್‌ಡಿ ರೇವಣ್ಣ ಮಾತ್ರ ಸ್ಪರ್ಧೆ ಮಾಡಲಿದ್ದು ನಮ್ಮ ಕುಟುಂಬದ ಬೇರಾವುದೇ ಸದಸ್ಯರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದರು.

ಎಚ್‌ಡಿ ರೇವಣ್ಣ ಅವರು ಹೊಳೇನರಸೀಪುರದಿಂದಲೇ ಸ್ಪರ್ಧಿಸಲಿದ್ದಾರೆ. ಅವರು ಕ್ಷೇತ್ರ ಬದಲಾಯಿಸುವುದಿಲ್ಲ. ಯಾರಿಗೂ ಹೆದರಿ ಬೇರೆ ಕಡೆ ಹೋಗುವ ಪ್ರಶ್ನೆಯೂ ಇಲ್ಲ ಎಂದೂ ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+