Cognizant ಟೆಕ್ಕಿ, ಪತ್ನಿ ಮಹಡಿಯಿಂದ ಹಾರಿ ಆತ್ಮಹತ್ಯೆ

chennai-cognizant-techie-arivalagan-wife-commit-suicide
ಚೆನ್ನೈ, ಏ.13: ಕೌಟುಂಬಿಕ ಜಗಳದಿಂದಾಗಿ ಐಟಿ ದಿಗ್ಗಜ Cognizant ಕಂಪನಿಯ ಟೆಕ್ಕಿ ಮತ್ತು ಆತನ ಪತ್ನಿ ನಾಲ್ಕನೆಯ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಿನ್ನೆ ಶುಕ್ರವಾರ ಪಲ್ಲವರಂ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಮೃತಪಟ್ಟವರನ್ನು 36 ವರ್ಷದ ಅರಿವಳಗನ್ ಮತ್ತು 26 ವರ್ಷದ ಅಭಿರಾಮಿ ಎಂದು ಗುರುತಿಸಲಾಗಿದೆ. ಅಭಿರಾಮಿ ಸ್ಥಳದಲ್ಲೇ ಸತ್ತಿದ್ದರೆ ಅರಿವಳಗನ್ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ.

ಸಾವಿಗೆ ಮುನ್ನ ದಂಪತಿ ಮಧ್ಯೆ ವ್ಯಾಜ್ಯ ನಡೆದಿದೆ ಎನ್ನಲಾಗಿದೆ. ಕೋಪದಲ್ಲಿ ಒಬ್ಬರು ಮಹಡಿಯಿಂದ ಹಾರಿಬೀಳುತ್ತಿದ್ದಂತೆ ಮತ್ತೊಬ್ಬರು ಅವರನ್ನು ಹಿಂಬಾಲಿಸಿದ್ದಾರೆ. ಇಬ್ಬರ ದೇಹಗಳು ಕೆಳಗೆ ಬೀಳುತ್ತಿದ್ದಂತೆ ಸ್ಥಳದಲ್ಲಿದ್ದ ವಾಚ್ ಮನ್ ಓಡಿಬಂದಿದ್ದಾನೆ.

ದಂಪತಿ ಇಬ್ಬರೂ ಕಂಪ್ಯೂಟರ್ ಅಪ್ಲಿಕೇಷನ್ಸ್ ನಲ್ಲಿ ಸ್ನಾತಕೋತ್ತರ ಪದವೀಧರರು. ಅಭಿರಾಮಿ ಕೆಲಸಕ್ಕೆ ಸೇರಲು ಹಾತೊರೆಯುತ್ತಿದ್ದರೆ ಅರಿವಳಗನ್ ಅದಕ್ಕೆ ಅಡ್ಡಿಪಡಿಸುತ್ತಿದ್ದ ಎನ್ನಲಾಗಿದೆ. 2012ರ ಆಗಸ್ಟಿನಲ್ಲಿ ಇವರ ಮದುವೆ ನಡೆದಿತ್ತು. ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಅರಿವಳಗನ್ ಸೇಲಂ ಜಿಲ್ಲಯವನಾಗಿದ್ದು, ಅಭಿರಾಮಿ ಈರೋಡ್ ಜಿಲ್ಲೆಯವರು.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+