ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಪ್ಪನ್ ಬಂಟರಿಗೆ ಮರಣದಂಡನೆ ಖಾಯಂ ಆಯ್ತು

By Srinath
|
Google Oneindia Kannada News

sc-rejects-review-petition-noose-tightens-for-veerappan
ನವ ದೆಹಲಿ, ಏ.12: ಕ್ಷಮಾದಾನ ಅರ್ಜಿ ವಿಲೇವಾರಿಯಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ತನಗೆ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಬೇಕು ಎಂದು ದೆಹಲಿ ಸ್ಫೋಟ ಪ್ರಕರಣದ ಅಪರಾಧಿ ದೇವೇಂದ್ರ ಸಿಂಗ್ ಭುಲ್ಲರ್ (48) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ಇದರೊಂದಿಗೆ Khalistan Liberation Force (KLF) ಉಗ್ರ ಭುಲ್ಲರ್ ಗೆ ಯಾವುದೇ ಕ್ಷಣ ಗಲ್ಲು ಶಿಕ್ಷೆಯಾಗಬಹುದು. ಈ ಬಗ್ಗೆ ಮಹತ್ವದ ಆದೇಶ ನೀಡಿರುವ ನ್ಯಾಯಮೂರ್ತಿ ಜಿಎಸ್ ಸಿಂಘ್ವಿ ನೇತೃತ್ವದ ನ್ಯಾಯಪೀಠ ಶಿಕ್ಷೆ ಕಡಿತಕ್ಕೆ ವಿಳಂಬ ಮಾನದಂಡವಲ್ಲ ಎಂದು ಸಾರಿದೆ.

ಗಮನಾರ್ಹವೆಂದರೆ, ಇದೇ ತೀರ್ಪನ್ನು ಆಧಾರವಾಗಿಸಿಕೊಂಡು ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವವರೂ ಸೇರಿದಂತೆ ಒಟ್ಟು 17 ಮಂದಿಗೆ ನೇಣು ಶಿಕ್ಷೆಯಾಗುವುದು ದೃಢಪಟ್ಟಿದೆ.

ಹಾಗಾಗಿ, ಸುಪ್ರೀಂ ಕೋರ್ಟ್ ಭುಲ್ಲರ್ ಗೆ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿರುವುದು ವೀರಪ್ಪನ್ ಬಂಟರಿಗೂ ಯಮಪಾಶವಾಗಿ ಪರಿಣಮಿಸುವ ಸಾಧ್ಯತೆಯಿದೆ. ಪ್ರಸ್ತುತ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಕಾಡುಗಳ್ಳ ವೀರಪ್ಪನ್ ನ ನಾಲ್ವರು ಬಂಟರೂ ಸಹ ಇದೇ ನೆಪವೊಡ್ಡಿ ತಮಗೆ ಗಲ್ಲು ಬೇಡ. ಬದಲಿಗೆ ಜೀವಾವಧಿ ಶಿಕ್ಷೆ ನೀಡಿ ಎಂದು ಸುಪ್ರೀಂಕೋರ್ಟಿಗೆ ಅಲವತ್ತುಕೊಂಡಿದ್ದಾರೆ.

ಜ್ಞಾನಪ್ರಕಾಶ್, ಸೈಮನ್, ಮೀಸೈಕಾರನ್ ಮಾದಯ್ಯ ಮತ್ತು ಬಿಲವೇಂದ್ರನ್ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಬಂಧಿಯಾಗಿರುವ ವೀರಪ್ಪನ್ ಸಹಚರರು.

ಯುವ ಕಾಂಗ್ರೆಸ್ ನಾಯಕ ಎಂಎಸ್ ಬಿಟ್ಟ ಅವರನ್ನು ಗುರಿಯಾಗಿಸಿಕೊಂಡು ಭುಲ್ಲರ್ ಕಾರ್ ಬಾಂಬ್ ಸ್ಫೋಟಿಸಿದ್ದ. ಈ ಘಟನೆಯಲ್ಲಿ 9 ಜನ ಮೃತಪಟ್ಟಿದ್ದರು. ಈ ಸಂಬಂಧ ಭುಲ್ಲರ್ ಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.

English summary
Supreme Court Review petition noose tightens for Veerappan aids. The Supreme Court on Friday dismissed condemned prisoner and Khalistan Liberation Force (KLF) terrorist Devinder Pal Singh Bhullar's plea for commutation of his death sentence to life imprisonment on ground of delay in deciding his mercy plea. As such this applies to Veerappan aids also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X