ಬೆಂಗಳೂರಲ್ಲಿ ಕುಡಿಯಲು ಯೋಗ್ಯವಾದ ನೀರಿಲ್ಲ

ಬೆಂಗಳೂರು, ಏ.7: ನಗರದಲ್ಲಿ ಕುಡಿಯುವ ನೀರಿನ ಅಭಾವದ ಬಗ್ಗೆ ಯಾವ ರಾಜಕೀಯ ಪಕ್ಷವೂ ಹೆಚ್ಚಾಗಿ ತಲೆಕೆಡಿಸಿಕೊಂಡಿಲ್ಲ. ಈ ನಡುವೆ ಸರ್ಕಾರೇತರ ಸಂಸ್ಥೆ ಜನಾಗ್ರಹ ಹೊರ ಹಾಕಿರುವ ಸಮೀಕ್ಷೆ ಆತಂಕ ಹುಟ್ಟಿಸಿದೆ.

ಬೆಂಗಳೂರಿನ ಹಲವು ಭಾಗಕ್ಕೆ ಕಾವೇರಿ ನೀರು ಸಿಗುತ್ತಿಲ್ಲ ಎಂಬ ಕೊರಗಿದೆ. ಬೇಸಿಗೆಯಲ್ಲಂತೂ ಕುಡಿಯಲು ನೀರು ಸಿಗುವುದೇ ಇಲ್ಲ ಎಂಬ ಮಾಹಿತಿ ಇದೆ. ಇದರ ಜೊತೆಗೆ ಈಗ ಕುಡಿಯುತ್ತಿರುವ ನೀರು ಕುಡಿಯಲು ಯೋಗ್ಯ(portable water)ವಾಗಿಲ್ಲ ಎಂದು ಮಾಹಿತಿ ಹೊರ ಬಿದ್ದರೆ ಜನರ ಪರಿಸ್ಥಿತಿ ಏನಾಗಬೇಡ.

ಜನಾಗ್ರಹ ವರದಿ ಪ್ರಕಾರ ಶೇ 28 ರಷ್ಟು ಮಾತ್ರ ಕುಡಿಯಲು ಯೋಗ್ಯವಾದ ನೀರು ಬೆಂಗಳೂರಿಗರಿಗೆ ಲಭ್ಯವಾಗುತ್ತಿದೆ. ನಗರದ 198ಕ್ಕೂ ಅಧಿಕ ವಾರ್ಡ್ ಗಳಲ್ಲಿ ಜನವರಿ ತಿಂಗಳಿನಿಂದ ಇಲ್ಲಿವರೆಗೂ ನಡೆಸಿದ ಸಮೀಕ್ಷೆ ಪ್ರಕಾರ ಈ ಮಾಹಿತಿ ಹೊರ ಬಿದ್ದಿದೆ.

ನೀರು ಪೂರೈಕೆ ವಿಧಾನ, ಒಳ ಚರಂಡಿ ವ್ಯವಸ್ಥೆ, ಜಲ ಶೇಖರಣೆ ಪರಿಸರ ಮುಂತಾದ ಅಂಶಗಳನ್ನು ಗುರುತಿಸಿ ವರದಿ ತಯಾರಿಸಲಾಗಿದೆ. ನೀರಿನ ಶುದ್ಧತೆಯ ಪರೀಕ್ಷೆ ಕೂಡಾ ನಡೆಸಲಾಗಿದೆ.

Only 28 per cent of water potable in Bangalore

ಅನೇಕಾನೇಕ ಮನೆಗಳಿಂದ, ಗಲ್ಲಿಗಲ್ಲಿಗಳ ನಲ್ಲಿಗಳಿಂದ ಸಂಗ್ರಹಿಸಲಾದ ನೀರಿನ ಗುಣಮಟ್ಟದ ಪರೀಕ್ಷೆ ನಡೆಸಿದ ಮೇಲೆ ಹೊರ ಬಿದ್ದ ಫಲಿತಾಂಶದ ಪ್ರಕಾರ ಶೇ 72 ರಷ್ಟು ನೀರಿನ ಸ್ಯಾಂಪಲ್ ಕಲುಷಿತವಾಗಿದ್ದು, ಹತ್ತು ಹಲವು ಬ್ಯಾಕ್ಟೀರಿಯಾಗಳ ಆವಾಸ ಸ್ಥಾನವಾಗಿದೆ.

ನೀರು ಶುದ್ಧವಾಗಿಲ್ಲ ಎನಿಸಿದರೆ ಕುದಿಸಿ ಆರಿಸಿ ನೀರನ್ನು ಕುಡಿಯಿರಿ ಎಂದು ಆರೋಗ್ಯ ಇಲಾಖೆ ಪ್ರಕಟಣೆಯನ್ನು ಇಲ್ಲಿ ಹೊರಡಿಸಬಹುದು. ಆದರೆ, ಮೇಲ್ಮಧ್ಯಮ ವರ್ಗದ ಜನರ ಮನೆಗಳಲ್ಲಿ ಸಿಕ್ಕಿರುವ ಶೇ 69.83 ರಷ್ಟು ಪ್ರಮಾಣದ ನೀರಿನ ಸ್ಯಾಂಪಲ್ ಕೂಡಾ ಅಶುದ್ಧವಾಗಿದೆ ಎಂದು ವರದಿ ಹೇಳಿದೆ.

ಇನ್ನು ಬಡ ಹಾಗೂ ಕೆಳವರ್ಗದ ಆರ್ಥಿಕವಾಗಿ ಹಿಂದುಳಿತ ಜನರ ಮನೆಗಳಲ್ಲಿ ಸಿಕ್ಕಿರುವ ನೀರಿನ ಸ್ಯಾಂಪಲ್ ಶೇ 75.87 ಪ್ರಮಾಣ ಕುಡಿಯಲು ಯೋಗ್ಯವಾಗಿಲ್ಲ.198 ವಾರ್ಡ್ ಗಳಲ್ಲಿ 15 ವಾರ್ಡ್ ಗಳ ನೀರು ಬಾಯಿಗಿಟ್ಟರೆ ಆರೋಗ್ಯ ಕೆಡುವುದು ಗ್ಯಾರಂಟಿ. 2 ವಾರ್ಡ್ ಗಳು ಮಾತ್ರ ಡಿಸ್ಟಿಂಕ್ಷನ್ ಪಡೆದು ಪಾಸ್ ಆಗಿದೆಯಂತೆ.

ನಾಗರಿಕ ಸೌಕರ್ಯ ತಜ್ಞ ವಿ ರವಿಚಂದ್ರನ್ ಪ್ರಕಾರ 'ಬೇಸಿಗೆಯಲ್ಲಿ ಕಲುಷಿತ ನೀರಿನಿಂದ ಹರಡಬಹುದಾದ ರೋಗಗಳು ಅಧಿಕವಾಗಿರುತ್ತದೆ ಎಂಬುದು ಕಾಮನ್ ಸೆನ್ಸ್. ಶಾಲಾ ಪಠ್ಯಗಳಲ್ಲಿ ಎಲ್ಲರೂ ಓದಿರುತ್ತಾರೆ.

ಆದರೆ, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದ ಬಹುತೇಕ ವಾರ್ಡ್ ಗಳಲ್ಲಿನ ಕುಡಿಯುವ ನೀರು ಯೋಗ್ಯವಾಗಿಲ್ಲ ಎಂಬ ಅಂಶ ಆತಂಕಕಾರಿಯಾಗಿದೆ. ನೀರು ಹೇಗೆ ಕಲುಷಿತವಾಗುತ್ತಿದೆ. ಏಕೆ ಕಲುಷಿತವಾಗುತ್ತಿದೆ ಎಂಬುದರ ಬಗ್ಗೆ ತಕ್ಷಣವೇ ಗಮನಹರಿಸಬೇಕು. ಜಲಮಂಡಳಿ ಇಂಜಿನಿಯರ್ ಗಳನ್ನು ಶಿಕ್ಷಿಸಬೇಕು ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+