ಬಿಕಿನಿಗಳ ಮೇಲೆ ಮತ್ತೆ ದೇವತೆಗಳ ಪ್ರತ್ಯಕ್ಷ

ಹಿಂದೂ ದೇವತೆಗಳ ಇಂತಹ ಅವಹೇಳನಕಾರಿ ಚಿತ್ರಗಳನ್ನು ಫೇಸ್ ಬುಕ್ ನಲ್ಲಿ ಹಾಕಲಾಗಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ ವಾತಾವರಣ ಬಿಗುವಾಯಿತು. ಮೀರತ್ ನ ಶಾರದಾ ರಸ್ತೆಯಲ್ಲಿ ಮೊಬೈಲ್ ಅಂಗಡಿ ಹೊಂದಿರುವ ರಾಕಿ ಎಂಬ ವ್ಯಕ್ತಿಯ ಗಮನಕ್ಕೆ ಈ ಚಿತ್ರಗಳು ಕಂಡುಬಂದು, ಅದು ಎಲ್ಲೆಡೆ ಸುದ್ದಿಯಾಗಿದೆ. ಗುರು ಕಾಲ್ ಕಲೌತಿ ಬಾಬಾನ ಫೇಸ್ ಬುಕ್ ನಲ್ಲಿ ಹಿಂದೂ ದೇವತೆಗಳ ಇಂತಹ ಅವಹೇಳನಕಾರಿ ಚಿತ್ರಗಳು ಪೋಸ್ಟ್ ಆಗಿದ್ದವು.
ಮೊಬೈಲ್ ಅಂಗಡಿಯ ರಾಕಿ ಈ ವಿಷಯವನ್ನು ಆರ್ ಎಸ್ಎಸ್, ಭಜರಂಗದಳ ಮತ್ತು ಬಿಜೆಪಿಯ ಸ್ಥಳೀಯ ಶಾಸಕರ ಗಮನಕ್ಕೆ ತಂದಿದ್ದಾರೆ. ಅದಕ್ಕೂ ಮೊದಲು ಪೊಲೀಸರಿಗೆ ವಿಷಯ ಮುಟ್ಟಿಸಿದರೂ ಅವರು ಎಚ್ಚೆತ್ತುಕೊಂಡು ತಕ್ಷಣ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಇದು ನಿಜಕ್ಕೂ ಅಕ್ಷಮ್ಯ. ಫೇಸ್ ಬುಕ್ ನಲ್ಲಿ ಹೀಗೆ ದೇವತೆಗಳ ಚಿತ್ರಗಳನ್ನು ಹಾಕಿದರೆ ಅದರಿಂದ ಹಿಂದೂಗಳ ಭಾವನೆಗಳಿಗೆ ಕೊಳ್ಳಿಯಿಟ್ಟಂತೆ. ತಪ್ಪತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಶಾಸಕಾರದಿಯಾಗಿ ಹಿಂದೂ ಮುಖಂಡರು ಪೊಲೀಸರನ್ನು ಭೇಟಿಯಾಗಿ ದೂರು ನೀಡಿದ್ದಾರೆ.
ರಾಕಿ ನೃತೃತ್ವದಲ್ಲಿ ವ್ಯಾಪಾರಿಗಳು ಬ್ರಹ್ಮಪುರಿ ಪೊಲೀಸ್ ಠಾಣೆಯ ಎದುರು ಧರಣಿ ನಡೆಸಿದಾಗ ಪ್ರಕರಣ ವಿಕೋಪಕ್ಕೆ ತಿರುಗಿದೆ. ಆಗ ಪೊಲೀಸರು ಮಧ್ಯಸ್ಥಿಕೆ ವಹಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದಾಗ ಪರಿಸ್ಥಿತಿ ತಿಳಿಯಾಗಿದೆ.












Click it and Unblock the Notifications