ಭವಾನಿ ಸ್ಪರ್ಧೆಗೆ ಈಗ ಯಾರ ಭಯವೂ ಇಲ್ಲ
ಬೇಲೂರು, ಏ.5: ಭವಾನಿ ರೇವಣ್ಣ ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಲು ಜೆಡಿಎಸ್ ನಿರ್ಧರಿಸಿದೆ. ಜೆಡಿಎಸ್ ವರಿಷ್ಠ ದೇವೇಗೌಡರ ಮೇಲೆ ಬಿದ್ದಿದ್ದ ಒತ್ತಡ ವರ್ಕ್ ಔಟ್ ಆಯ್ತ. ಅಥವಾ ಪುತ್ರ ಪ್ರಜ್ವಲ್ ಹಾಗೂ ಹಳೆ ಮುಖಂಡ ಜವರೇಗೌಡ ನಡುವಿನ ಜಟಾಪಟಿ ಕಾರಣವಾ? ಗೊತ್ತಿಲ್ಲ.
ಸದ್ಯದ ಮಾಹಿತಿ ಪ್ರಕಾರ ಭವಾನಿ ಮೇಡಂ ಅವರಿಗೆ ಜೆಡಿಎಸ್ ಟಿಕೆಟ್ ಸಿಗುತ್ತಿದೆ. ಹಾಸನದ 7 ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದಾದರೂ ಒಂದು ಎನ್ನಲಾಗಿದೆ. ಬೇಲೂರು ಸಿಕ್ಕರೆ ಭವಾನಿ ಮೇಡಂ ಸೇಫ್. ಪುತ್ರ ಪ್ರಜ್ವಲ್ ಸದ್ಯಕ್ಕೆ ಕಣಕ್ಕಿಳಿಯುತ್ತಿಲ್ಲ.
'ನನ್ನನ್ನು ಕರುಣಾನಿಧಿ ಸ್ಥಿತಿಗೆ ದೂಡಬೇಡಿ' ಎಂದು ಗೌಡ್ರು ಟವೆಲ್ ಕೊಡವಿಕೊಂಡು ಎದ್ದರೂ ಜೆಡಿಎಸ್‌ನ ಮಹಿಳಾ ಘಟಕ ಕೇಳಿರಲಿಲ್ಲ. ಹಾಸನ ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಿದೆ. ಈ ಪೈಕಿ ಯಾವುದಾದರೂ ಒಂದು ಕ್ಷೇತ್ರದಿಂದ ಶ್ರೀಮತಿ ಭವಾನಿ ರೇವಣ್ಣ ಅವರನ್ನು ಸ್ಪರ್ಧಿಸಲು ಅವಕಾಶ ಮಾಡಿ ಕೊಡಿ ಎಂದು ಜೆಡಿಎಸ್‌ನ ಮಹಿಳಾ ವಿಭಾಗದ ಮುಖಂಡರು ಮತ್ತು ಕಾರ್ಯ ಕರ್ತರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಒತ್ತಾಯಿಸಿದ್ದಾರೆ.
ನನ್ನ ರಾಜಕೀಯ ಜೀವನದ ಕೊನೆಗಾಲದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ತಂದುಕೊಂಡಿರುವ ಸ್ಥಿತಿಯನ್ನು ನಾನು ತಂದುಕೊಳ್ಳಲು ಇಷ್ಟಪಡುವುದಿಲ್ಲ ಎಂದು ಹೇಳುವ ಮೂಲಕ ಕುಟುಂಬ ರಾಜಕಾರಣದಿಂದ ಹಾನಿಯೇ ಹೆಚ್ಚು ಎಂದು ದೇವೇಗೌಡರು ಸೂಚ್ಯಮಾತುಗಳಲ್ಲಿ ವ್ಯಕ್ತಪಡಿಸಿದರು.
ಆದರೆ ಮುಂದೇನಾಯ್ತು? ಪ್ರಜ್ವಲ್ ಮಾಡಿದ ಮಹತ್ವದ ಕಾರ್ಯವೇನು? ಜೆಡಿಎಸ್ ನಿಷ್ಠಾವಂತ ಅಭ್ಯರ್ಥಿ ಕಳೆದುಕೊಳ್ಳುತ್ತಿದೆಯೇ? ಮುಂದೆ ಓದಿ..

ಭವಾನಿ ಮೇಡಂ ಸ್ಪರ್ಧೆ ಖಚಿತ
ಇತ್ತೀಚೆಗೆ ಒಂದು ಪ್ರಸಂಗವಾಯ್ತು: ಜೆಡಿಎಸ್ ವಿಪಕ್ಷ ನಾಯಕ ಎಚ್. ಡಿ ರೇವಣ್ಣ ಅವರ ಪುತ್ರ ಪಕ್ಷದಲ್ಲಿ ಯಾವುದೇ ಸ್ಥಾನ ಪಡೆಯದ 23 ವರ್ಷದ ಪ್ರಜ್ವಲ್ ರೇವಣ್ಣ ಅವರು 62 ವರ್ಷದ ಹಿರಿಯ ನಾಯಕ, ಮಾಜಿ ರಾಜ್ಯಸಭಾ ಸದಸ್ಯ ಎಚ್ ಕೆ ಜವರೇ ಗೌಡ ಅವರ ಮನಸ್ಸಿಗೆ ಘಾಸಿ ಮಾಡಿಬಿಟ್ಟಿದ್ದರು.
ಬೇಲೂರು ಕ್ಷೇತ್ರದ ಸ್ಪರ್ಧಿಯಾಗಿ ಜವರೇಗೌಡರೇ ಇಳಿಯಲಿದ್ದಾರೆ ಎಂದು ದೊಡ್ಡಗೌಡರು ಕೂಡಾ ಭರವಸೆ ನೀಡಿದ್ದರು.
ಭವಾನಿ ಮೇಡಂ ಸ್ಪರ್ಧೆ ಖಚಿತ
2008ರ ಎಲೆಕ್ಷನ್ ಆದ ತಕ್ಷಣವೇ ಈಗಿನ ಚುನಾವಣೆಗೆ ಸಿದ್ಧತೆ ನಡೆಸತೊಡಗಿದ್ದರು. ಆದರೆ, ಇತ್ತೀಚೆಗೆ ಬೇಲೂರು ಕ್ಷೇತ್ರದಲ್ಲಿ ಭವಾನಿ ಮೇಡಂ ಅಲೆ ಎದ್ದಿರುವುದನ್ನು ಕಂಡು ಗಾಬರಿಯಾದರು. ಮೇಡಂಗೆ ಇಷ್ಟ ಇಲ್ಲಾ ಮಹಿಳಾ ಘಟಕದ ಒತ್ತಾಯಕ್ಕೆ ಇಳಿಯುತ್ತಿದ್ದಾರೆ ಎಂಬ ಸುದ್ದಿಯೂ ಹಬ್ಬಿಸಲಾಗಿತ್ತು.
ಇದಕ್ಕೆ ದೇವೇಗೌಡರು ಹಾಗೂ ರೇವಣ್ಣ ಅವರು ಉತ್ತರಿಸಿ, ನಮ್ಮ ಕುಟುಂಬದಿಂದ ಇಲ್ಲಿ ಯಾರೂ ಸ್ಪರ್ಧಿಸುತ್ತಿಲ್ಲ ಎಂದಿದ್ದರು. ಆದರೆ, ಪ್ರಜ್ವಲ್ ಅವರು ಬೇಲೂರು ಕ್ಷೇತ್ರದ ಸುತ್ತ ಪ್ರದಕ್ಷಿಣೆ ಹಾಕತೊಡಗಿದರು. ಜೆಡಿಎಸ್ ಯುವ ಕಾರ್ಯಕರ್ತರ ಜೊತೆ ಸಭೆ ಚರ್ಚೆ ನಡೆಸತೊಡಗಿದರು.

ಭವಾನಿ ಮೇಡಂ ಸ್ಪರ್ಧೆ ಖಚಿತ
ಯುವ ಕಾರ್ಯಕರ್ತ ಕೂಡಾ ಆಗದಿರುವ ಪ್ರಜ್ವಲ್ ಅವರ ಜನಪ್ರಿಯತೆ ದಿನೇ ದಿನೇ ಹೆಚ್ಚಾಗತೊಡಗಿತು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಜ್ವಲ್ ಪ್ರಚಾರ ಕೂಡಾ ನಡೆಸಿದರು.
ಬೇಲೂರು ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿ ನಿಗದಿಯಾಗಿಲ್ಲ. ಬೇಲೂರು ಮೂಲದವರನ್ನೇ ಆಯ್ಕೆಮಾಡಲಾಗುತ್ತದೆ ಎಂದು ಎಲ್ಲೆಡೆ ಸಾರತೊಡಗಿದರು. ಈ ಮೂಲಕ ತನ್ನ ತಾಯಿ ಸ್ಪರ್ಧೆಗೆ ಅಖಾಡ ಸಿದ್ಧಪಡಿಸಿ, ಪರೋಕ್ಷವಾಗಿ ಜವರೇ ಗೌಡರೇ ಇದು ನಿಮ್ಮ ಕ್ಷೇತ್ರವಲ್ಲ ಎಂದು ಸೂಚಿಸಿದ್ದರು.

ಭವಾನಿ ಮೇಡಂ ಸ್ಪರ್ಧೆ ಖಚಿತ
ಬೇಲೂರು ನಗರದ ಮುನ್ಸಿಪಾಲ್ ಕೌನ್ಸಿಲ್ ನ ಮಾಜಿ ಅಧ್ಯಕ್ಷ ಬಿ.ಸಿ ಮಂಜುನಾಥ್ ಹೆಸರನ್ನು ತೇಲಿ ಬಿಡಲಾಗಿತ್ತು. ಪ್ರಜ್ವಲ್ ಅವರ ರಾಜಕೀಯ ಓಡಾಟ ದೊಡ್ಡಗೌಡರಿಗೆ ತಲೆನೋವಾಗಿ ಕೊನೆಗೂ ಟಿಕೆಟ್ ನೀಡಲು ಒಪ್ಪಿದ್ದಾರೆ ಎನ್ನಲಾಗಿದೆ. ದೇವೇಗೌಡರ ಸಂಪರ್ಕಿಸಲು ಸಾಧ್ಯವಾಗದೆ ಜವರೇಗೌಡರು ಪರಿತಪಿಸುತ್ತಿದ್ದಾರೆ. ಬೇಲೂರು ಜೆಡಿಎಸ್ ಡೋಲಾಯಮಾನ ಸ್ಥಿತಿಯಲ್ಲಿರುವುದಂತೂ ನಿಶ್ಚಿತ

ಭವಾನಿ ಮೇಡಂ ಸ್ಪರ್ಧೆ ಖಚಿತ
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ಜವರೇಗೌಡರಿಗೆ ಈಗ ದೇವೇಗೌಡರೇ ದಿಕ್ಕು ಎನ್ನಲಾಗಿದೆ. 2008ರಲ್ಲಿ ಮೂರನೇ ಸ್ಥಾನದಲ್ಲಿದ್ದ ಜೆಡಿಎಸ್ ಪಕ್ಷವನ್ನು ಒಂದೆರಡು ವರ್ಷದಲ್ಲೇ ಉತ್ತಮ ಮಟ್ಟಕ್ಕೇರಿಸಿದ್ದು ಜವರೇಗೌಡರು ಎಂಬುದನ್ನು ದೇವೇಗೌಡ್ರು ಮರೆತಿಲ್ಲ. ದೊಡ್ಡ ಗೌಡರು ನನ್ನನ್ನು ಮರೆತರೆ ರಾಜಕೀಯ ಸನ್ಯಾಸವೊಂದೇ ನನಗೆ ಉಳಿದಿರುವ ಮಾರ್ಗ ಎಂದು ಜವರೇಗೌಡರು ಸ್ಪಷ್ಟವಾಗಿ ಹೇಳಿದ್ದಾರೆ.












Click it and Unblock the Notifications